ಆರ್ಥಿಕ ಚೇತರಿಕೆ to ತೆರಿಗೆ ವಿನಾಯಿತಿ, ನವ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್; ರಾಜೀವ್ ಚಂದ್ರಶೇಖರ್!
ಆರ್ಥಿಕ ಚೇತರಿಕೆ, ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ, MSME ಹಾಗೂ ರೈತರಿಗೆ ಸೌಲಭ್ಯ ಹಾಗೂ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಭರಪೂರ ಕೊಡುಗೆ ಮೂಲಕ ಹೊಸ ಭಾರತ ನಿರ್ಮಾಣಕ್ಕೆ ಈ ಬಜೆಟ್ ನೆರವಾಗಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ನವದೆಹಲಿ(ಫೆ.01); ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಬಜೆಟ್ ಕುರಿತು ಆರ್ಥಿಕ ತಜ್ಞರು ಸೇರಿದಂತೆ ಹಲವು ಗಣ್ಯರು ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿಯ ಎಂದಿನ ಮೂಲಭೂತ ಮಂತ್ರದಂತೆ ಜನಪ್ರಿಯ ಘೋಷಣೆ ಬದಲು ಆರ್ಥಿಕ ಚೇತರಿಕೆಗೆ ಕನ್ನಡಿ ಹಿಡಿದ ಬಜೆಟ್ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ ವಿಪಕ್ಷ ನಾಯಕರು ಬಜೆಟ್ ಸುಳ್ಳು ಭರವಸೆಗಳ ಘೋಷಣೆ ಎಂದಿದ್ದಾರೆ. ಇದೀಗ ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನವ ಭಾರತ ನಿರ್ಮಾಣಕ್ಕೆ ಈ ಬಜೆಟ್ ಪೂರಕವಾಗಿದೆ ಎಂದಿದ್ದಾರೆ.
ನಿರ್ಮಲಾ ಸೀತಾರಾಮನ್ ಅತ್ಯಂತ ಮಹತ್ವದ ಹಾಗೂ ಐತಿಹಾಸ ಬಜೆಟನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಬಜೆಟ್ ನವ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಚೇತರಿಕೆ ಕಾಣುತ್ತಿರುವ ಭಾರತದ ಆರ್ಥಿಕತೆ ಹಿಡಿದ ಕನ್ನಡಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ
ಕೇಂದ್ರದ 2023ರ ಬಜೆಟ್ ಎಲ್ಲಾ ಕ್ಷೇತ್ರಗಳಿಗೆ ಕೊಡುಗೆ ನೀಡುವ ಮೂಲಕ ಸ್ವಾವಲಂಬಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಬಂಡವಾಳ, ಡಿಜಿಟಲೀಕರಣ, ಯುವಜನ ಕೌಶಲ್ಯ, ಹೂಡಿಕೆ, ಮಧ್ಯಮ ವರ್ಗದ ತೆರಿಗೆ ವಿನಾಯಿತಿ, ಸಮುದಾಯಗಳಿಗೆ ಸೌಲಭ್ಯ, ಸಹಕಾರಿ ಕ್ಷೇತ್ರಕ್ಕೆ ಸೌಲಭ್ಯ ಸೇರಿದಂತೆ ಪ್ರತಿಯೊಬ್ಬರಿಗೆ ವಿಫುಲ ಅವಕಾಶಗಳನ್ನು ಈ ಬಜೆಟ್ ನೀಡಿದೆ ಎಂದರು
ಭಾರತ ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿದೆ. ಕಳೆದರಡು ವರ್ಷ ಕೋವಿಡ್ ಸಂಕಷ್ಟ ಹಾಗೂ ಯೂರೋಪಿಯನ್ ಯುದ್ಧ ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ಆದರೆ ಈ ಸಂಕಷ್ಟಗಳನ್ನು ದಾಟಿಕೊಂಡು ಭಾರತ ಮುಂದೆ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಸಮರ್ಥ ಹಾಗೂ ಪ್ರಬಲ ಆರ್ಥಿಕತೆಯನ್ನು ಕಟ್ಟುತ್ತಿದೆ. ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮಧ್ಯಮ ಕೈಗಾಕಾರಿಗೆ ಹಾಗೂ ಸಣ್ಣ ಕೈಗಾರಿಕೆಗಳು, ರೈತರಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಈ ಮೂಲಕ ಈ ಬಜೆಟ್ ಜನಪಯೋಗಿಯಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!
ಕೋವಿಡ್ ಸೇರಿದಂತೆ ಗಂಭೀರ ಬಿಕ್ಕಟ್ಟಿನಿಂದ ಭಾರತವನ್ನು ಹೊರತಂದು ದಿಟ್ಟ ಹೆಜ್ಜೆ ಇಡಲು ಮಾರ್ಗದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.