Asianet Suvarna News Asianet Suvarna News

Digital Transformation ಭಾರತದ ಡಿಜಿಟಲ್ ರೂಪಾಂತರದಲ್ಲಿ ಐಬಿಎಂ ಕೊಡುಗೆ ಶ್ಲಾಘಿಸಿದ ರಾಜೀವ್ ಚಂದ್ರಶೇಖರ್!

  • ಬೆಂಗಳೂರಿನ ಐಬಿಎಂ ಕಚೇರಿಗೆ ರಾಜೀವ್ ಚಂದ್ರಶೇಖರ್ ಭೇಟಿ
  • ಸೈಬರ್‌ ಸೆಕ್ಯುರಿಟಿ, ಹೈಬ್ರಿಡ್ ಕ್ಲೌಡ್ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು
  • ಭಾರತವನ್ನು ಇನೋವೇಶನ್ ಹಬ್ ಮಾಡಲು ಪ್ರಯತ್ನ
Technologies help to bring PM Modi vision of making India hub of innovation and growth says Rajeev Chandrasekhar ckm
Author
Bengaluru, First Published Apr 11, 2022, 4:47 PM IST

ಬೆಂಗಳೂರು(ಏ.11); ಡಿಜಿಟಲ್ ಇಂಡಿಯಾ(Digital India) ಯೋಜನೆಯಡಿ ಭಾರತ ಅತೀ ವೇಗವಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನವ ಭಾರತ ನಿರ್ಮಾಣ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಯೋಜನೆಯಿಂದ ಭಾರತ ಬಹುತೇಕ ಕ್ಷೇತ್ರಗಳು ಸಂಪೂರ್ಣವಾಗಿ ಡಿಜಿಟಲೀಕರಣವಾಗಿದೆ. ಭಾರತದ ಡಿಜಿಟಲ್ ಮಿಶನ್ ಹಾಗೂ ಡಿಜಿಟಲ್ ರೂಪಾಂತರಕ್ಕೆ(Digital Transformation) ಕೂಡುಗೆ ನೀಡುತ್ತಿರುವ ಐಬಿಎಂ ಕಂಪನಿ ಕಾರ್ಯಕ್ಕೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಐಬಿಎಂ ಕಚೇರಿಗೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್(Rajeev Chandrasekhar), ವಿಶ್ವ ಅತೀ ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿದೆ. ಹೀಗಾಗಿ ಸೈಬರ್‌ ಸೆಕ್ಯುರಿಟಿ, ಹೈಬ್ರಿಡ್ ಕ್ಲೌಡ್ ಹಾಗೂ ಆರ್ಟಿಫೀಶಿಯಲ್ ಇಂಟಿಲಿಜೆನ್ಸ್( AI) ತಂತ್ರಜ್ಞಾನಗಳಲ್ಲಿ ಭಾರತ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ದೇಶದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯ ಅಗತ್ಯವಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಮುಂದಿನ 10 ವರ್ಷ Tech Decade: ಡಿಜಿಟಲ್‌ ಇಂಡಿಯಾಕ್ಕೆ 6 ಗುರಿ, 1000 ದಿನಗಳ ನಿಖರ ಯೋಜನೆ

ಭಾರತವನ್ನು ಇನೋವೇಶನ್ ಹಬ್ ಹಾಗೂ ಅಭಿವೃದ್ಧಿ ಕೇಂದ್ರಗಳನ್ನಾಡಿ ಮಾಡುವ ಪ್ರಧಾನಿ ಮೋದಿ ಕನಸನ್ನು ನಾವು ಸಾಕಾರಗೊಳಿಸಬೇಕಿದೆ. ಇದಕ್ಕೆ ಐಬಿಎಂ ಸೇರಿದಂತೆ ಹಲವು ಕಂಪನಿಗಳು ಅಮೂಲ್ಯ ಕೂಡುಗೆ ನೀಡುತ್ತಿದೆ. ಐಬಿಎಂ ಹಲವು ಕಂಪನಿಗಳನ್ನು ಡಿಜಿಟಲ್ ರೂಪಾಂತರಗೊಳಿಸುತ್ತಿದೆ. ಈ ಮೂಲಕ ಭಾರತದ ಡಿಜಿಟಲ್ ಮಿಶನ್ ವೇಗ ಹೆಚ್ಚಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

 

 

ರಾಜೀವ್ ಚಂದ್ರಶೇಕರ್ IBMನ ಸೈಬರ್‌ ಸೆಕ್ಯುರಿಟಿ ಹಬ್ ಮತ್ತು ಕ್ಲೈಂಟ್ ಇನ್ನೋವೇಶನ್ ಸೆಂಟರ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇಂದಿನ ಯುಗದಲ್ಲಿ ಸೈಬರ್ ಸೆಕ್ಯೂರಿಟಿ ಕುರಿತು ಹೆಚ್ಚಿನ ಮುತುವರ್ಜಿ ವಹಿಸುವ ಕೆಲಸವಾಗಬೇಕು. ಇದಕ್ಕಾಗಿ ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ರಾಜೀವ್ ಚಂದ್ರಶೇಖರ್ ಭೇಟಿಗೆ ಸಂತಸ ವ್ಯಕ್ತಪಡಿಸಿದ ಐಬಿಎಂ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಮೇಕ್ ಇನ್ ಇಂಡಿಯಾದಲ್ಲಿ ಕಂಪನಿ ಬದ್ಧತೆಯನ್ನು ಪುನರುಚ್ಚರಿಸಿದರು. ಸಚಿವರಿಗೆ ಆತಿಥ್ಯ ನೀಡಿರುವುದು ಹೆಮ್ಮೆ ಹಾಗೂ ಗೌರವ ತಂದಿದೆ. ಐಬಿಎಂ ಇನ್ನೋವೇಶನ್ ಹಬ್ ಹಾಗೂ ಸೈಬರ್ ಸೆಕ್ಯೂರಿಟಿ ವಿಂಗ್ ಸದಾ ಸರ್ಕಾರದ ಆಶೋತ್ತರಗಳನ್ನು ಈಡೇರಿಸಲು ಹಾಗೂ ಭಾರತ ಹಾಗೂ ವಿಶ್ವದಲ್ಲಿ ಡಿಜಿಟಲ್ ರೂಪಾಂತರಕ್ಕೆ ಯತ್ನಿಸಲಿದೆ ಎಂದು ಸಂದೀಪ್ ಪಟೇಲ್ ಹೇಳಿದ್ದಾರೆ.

ಕಾಚರಕನಹಳ್ಳಿ ರಾಮ ದೇಗುಲಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ ಭೇಟಿ

ಟ್ವೀಟರ್‌ ಬಳಕೆದಾರರ ಗುರುತು ದೃಢೀಕರಣ ಕಡ್ಡಾಯ ಇಲ್ಲ: ರಾಜೀವ್‌ ಚಂದ್ರಶೇಖರ್‌
ಗೌಪ್ಯತೆಯ ದೃಷ್ಟಿಯಿಂದಾಗಿ ಟ್ವೀಟರ್‌ನಂಥ ಸಾಮಾಜಿಕ ಮಾಧ್ಯಮ ಬಳಕೆದಾರರ ಗುರುತು ದೃಢೀಕರಣವನ್ನು ಕಡ್ಡಾಯಗೊಳಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದು ಎಲೆಕ್ಟ್ರಾನಿಕ್‌ ಮತ್ತು ಐಟಿ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಲೋಕಸಭೆಗೆ ತಿಳಿಸಿದ್ದಾರೆ.

ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ನಾಯಕ ಅಬ್ದುಲ್‌ ಖಲೀಕ್‌ ಪ್ರಶ್ನೆಗೆ ಉತ್ತರಿಸಿದ ಅವರು ‘ಇಂಟರ್‌ನೆಟ್‌ ಬಳಕೆಯು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕಳೆದ ವರ್ಷ ಫೆಬ್ರವರಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ… ಮೀಡಿಯಾ ನೈತಿಕ ನಿಯಮಾವಳಿ) ನಿಯಮಗಳನ್ನು ಸೂಚಿಸಿದೆ. ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಗಟ್ಟಲು ಈ ನಿಯಮಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಆದರೆ ಗೌಪ್ಯತೆಯ ದೃಷ್ಟಿಯಿಂದಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಸರ್ಕಾರ ಹೊಂದಿಲ್ಲ ಎಂದರು. 

Follow Us:
Download App:
  • android
  • ios