ದೆಹಲಿಯಿಂದ ವಡೋದರಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ 6 ಇ-859 ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಎಂಜಿನ್ ಕಂಪನದ ನಂತರ ಈ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಸದ್ಯಕ್ಕೆ ವಿಮಾನವನ್ನು ಪರಿಶೀಲಿಸಲಾಗುತ್ತಿದೆ.

ಜೈಪುರ (ಜುಲೈ 14): ಕಳೆದ ವಾರವಷ್ಟೇ ಸ್ಪೈಸ್‌ ಜೆಟ್‌ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬೆನ್ನಲ್ಲಿಯೇ ಗುರುವಾರ ದೇಶದಲ್ಲಿ ಮತ್ತೊಂದು ಅದೇ ರೀತಿಯ ಪ್ರಕರಣ ವರದಿಯಾಗಿದೆ. ದೆಹಲಿಯಿಂದ ವಡೋದರಾಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನ 6ಇ-859 ಇಂಜಿನ್‌ ಕಂಪನದ ಕಾರಣಕ್ಕಾಗಿ ಜೈಪುರದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ್ದು, ಸದ್ಯ ವಿಮಾನವನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಂಡಿಗೋ ಎಂಜಿನ್ ಈ ರೀತಿ ಕಂಪಿಸಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ಬಗ್ಗೆ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿಲ್ಲ. ಕೆಲವು ತಾಂತ್ರಿಕ ದೋಷದಿಂದ ದೆಹಲಿಯಿಂದ ವಡೋದರಾಗೆ ಹೋಗುತ್ತಿದ್ದ ವಿಮಾನವು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದಷ್ಟೇ ಮಾಹಿತಿ ಸಿಕ್ಕಿದೆ. ಅಂದಹಾಗೆ, ಸ್ಪೈಸ್‌ಜೆಟ್ ವಿಮಾನವು ಈ ಸಮಯದಲ್ಲಿ ಇಂಐ ವಿಚಾರಗಳಿಗಾಗಿ ಹೆಚ್ಚಾಗಿ ಚರ್ಚೆಯಾಗಿತ್ತು. ಕೆಲವೇ ದಿನಗಳಲ್ಲಿ, ಇಂತಹ ಅನೇಕ ಪ್ರಕರಣಗಳು ನಡೆದಿವೆ, ಇದರಿಂದಾಗಿ ವಿಮಾನಯಾನ ಸಂಸ್ಥೆಯ ಇಮೇಜ್ ಕೂಡ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಪಾಟ್ನಾದಲ್ಲಿ ಚಲಿಸುವ ವಿಮಾನಕ್ಕೆ ಹಕ್ಕಿ ಬಡಿದು ಇಂಜಿನ್‌ ವೈಫಲ್ಯ ಕಂಡಿದ್ದರೆ, ಪಾಕಿಸ್ತಾನದಲ್ಲಿ ಲ್ಯಾಂಡ್‌ ಆದ ವಿಮಾನದಲ್ಲಿಯೂ ತಾಂತ್ರಿಕ ದೋಷ ಕಂಡು ಬಂದಿತ್ತು. ಕಳೆದ 3 ತಿಂಗಳಲ್ಲಿ ಅಂದಾಜು 8 ಬಾರಿ ಇಂಥ ಘಟನೆಗಳು ಕಂಡುಬಂದಿದೆ.

ಇತ್ತೀಚೆಗೆ 23 ಸಾವಿರ ಅಡಿ ಎತ್ತರದಲ್ಲಿರುವ ಸ್ಪೈಸ್ ಜೆಟ್ ನ (SpiceJet) ಕ್ಯೂ-400 ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದಾದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ತಕ್ಷಣವೇ ಕಾಂಡ್ಲಾ-ಮುಂಬೈ ವಿಮಾನವನ್ನು ಇಳಿಸಲು ನಿರ್ಧರಿಸಲಾಗಿತ್ತು. ಆ ಘಟನೆಯಲ್ಲೂ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿರಬೇಕು ಆದರೆ ವಿಮಾನಯಾನ ಸಂಸ್ಥೆಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿದವು. ಇದೀಗ ಆ ಎಲ್ಲ ಘಟನೆಗಳ ನಡುವೆ ಇಂಡಿಗೋ (Indigo) ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನವನ್ನು (Flight) ಜೈಪುರದಲ್ಲಿ (Jaipur) ಸುರಕ್ಷಿತವಾಗಿ ಇಳಿಸಲಾಗಿದ್ದು, ವಿಮಾನಯಾನ ಸಂಸ್ಥೆ ಹೆಚ್ಚಿನ ತನಿಖೆ ಆರಂಭಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಲ್ಯಾಂಡ್‌ ಆದ ಸ್ಪೈಸ್‌ಜೆಟ್‌ ವಿಮಾನ, ಇಂಧನ ಸೋರಿಕೆ ಶಂಕೆ!

ಸದ್ಯಕ್ಕೆ ಈ ಪ್ರಯಾಣಿಕರು ಜೈಪುರದಲ್ಲಿ ಎಷ್ಟು ಸಮಯ ಕಾಯಬೇಕು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವಿವರವಾದ ತನಿಖೆಯ ನಂತರವೇ ವಿಮಾನವನ್ನು ಮತ್ತೆ ಹಾರಲು ವಿಮಾನಯಾನ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಲಿದೆ.