ಶಿಕ್ಷಕರಿಗೆ ಗುಡ್‌ನ್ಯೂಸ್: TET ಸರ್ಟಿಫಿಕೇಟ್‌ಗೆ ಲೈಫ್‌ಟೈಂ ವಾಲಿಡಿಟಿ ಘೋಷಿಸಿದ ಕೇಂದ್ರ

  • ಲಾಕ್‌ಡೌನ್‌ ಸಂದರ್ಭ ಶಿಕ್ಷಕರಿಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ
  • ಟೆಟ್ ವಾಲಿಡಿಟಿ ಲೈಫ್‌ಟೈಂ ತನಕ
Teacher Eligibility Test Pass Certificate Valid For Lifetime says Government dpl

ದೆಹಲಿ(ಜೂ.03): ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಅರ್ಹತಾ ಪ್ರಮಾಣಪತ್ರದ ಮಾನ್ಯತೆಯ ಅವಧಿಯನ್ನು 2011 ರಿಂದ ಅನ್ವಯವಾಗುವಂತೆ ವಾಲಿಡಿಟಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ.

ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದ್ದಾರೆ. ಈ ಹಿಂದೆ ಈ ಸರ್ಟಿಫಿಕೇಟ್ ವಾಲಿಡಿಟಿ 7 ವರ್ಷವಿತ್ತು.

12ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಎಂಪಿ ಸರ್ಕಾರ.

ಈಗಾಗಲೇ 7 ವರ್ಷಗಳ ಅವಧಿ ಮುಗಿದಿರುವ ಅಭ್ಯರ್ಥಿಗಳಿಗೆ ಹೊಸ ಟಿಇಟಿ ಪ್ರಮಾಣಪತ್ರಗಳನ್ನು ಮರುಮೌಲ್ಯಮಾಪನ ಮಾಡಲು ಅಥವಾ ವಿತರಿಸಲು ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ಕ್ರಮ ಕೈಗೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್‌ಸಿಟಿಇ) ಫೆಬ್ರವರಿ 11, 2011 ರ ಮಾರ್ಗಸೂಚಿಗಳಿಗೆ ಈ ಬದಲಾವಣೆಯನ್ನು ಮಾಡಲಾಗಿದೆ. ಈ ಹಿಂದೆ ಟಿಇಟಿ ವಾಲಿಡಿಟಿ 7 ವರ್ಷಗಳಿತ್ತು. ಶಿಕ್ಷಕರ ಅರ್ಹತಾ ಪರೀಕ್ಷೆಯು ಒಬ್ಬ ವ್ಯಕ್ತಿಯು ಶಾಲೆಗಳಲ್ಲಿ ಶಿಕ್ಷಕನಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಅಗತ್ಯವಾದ ಅರ್ಹತೆಗಳಲ್ಲಿ ಒಂದಾಗಿದೆ.

ಟಿಇಟಿ: ಎರಡು ಲಕ್ಷ ಅಭ್ಯರ್ಥಿಗಳಲ್ಲಿ 8000 ಪಾಸ್‌..!.

ಈ ಮೊದಲು, ಟಿಇಟಿ ಪಾಸ್ ಪ್ರಮಾಣಪತ್ರದ ಸಿಂಧುತ್ವವು 7 ವರ್ಷಗಳಾಗಿದ್ದರೂ, ಪ್ರಮಾಣಪತ್ರವನ್ನು ಪಡೆಯಲು ವ್ಯಕ್ತಿಯು ಎಷ್ಟು ಪ್ರಯತ್ನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ವ್ಯಕ್ತಿಗೆ ಅಂಕ ಸುಧಾರಿಸಲು ಮತ್ತೆ ಹಾಜರಾಗಲು ಅವಕಾಶ ನೀಡಲಾಗಿತ್ತು. ರಾಜ್ಯಗಳು ತಮ್ಮದೇ ಆದ ಟಿಇಟಿಯನ್ನು ನಡೆಸುತ್ತಿದ್ದರೆ, ಕೇಂದ್ರ ಟಿಇಟಿ ಅಥವಾ ಸಿಟಿಇಟಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸುತ್ತದೆ.

Latest Videos
Follow Us:
Download App:
  • android
  • ios