Asianet Suvarna News Asianet Suvarna News

ಅಮಿತ್‌ ಶಾ, ನಡ್ಡಾ ಭೇಟಿಯಾದ ಚಂದ್ರಬಾಬು ನಾಯ್ಡು: ಮತ್ತೆ ಬಿಜೆಪಿ ಜತೆ ಮೈತ್ರಿ!

ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಟಿಡಿಪಿ ಮೈತ್ರಿ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಜತೆಗೆ 2024ರ ಲೋಕಸಭೆ ಚುನಾವಣೆಗೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ

tdp s chandrababu naidu meets amit shah may ally with bjp for telangana polls ash
Author
First Published Jun 4, 2023, 12:31 PM IST

ನವದೆಹಲಿ (ಜೂನ್ 4, 2023): ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತೆ ಎನ್‌ಡಿಎಗೆ ಸೇರಬಹುದು ಎಂದು ಹೇಳಲಾಗ್ತಿದೆ. ಏಕೆಂದರೆ, ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತೆಲಂಗಾಣ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. 

ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಟಿಡಿಪಿ ಮೈತ್ರಿ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಜತೆಗೆ 2024ರ ಲೋಕಸಭೆ ಚುನಾವಣೆಗೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಸುಮಾರು ಒಂದು ಗಂಟೆ ಕಾಲ ಬಿಜೆಪಿ ಹಾಗೂ ಟಿಡಿಪಿ ನಾಯಕರ ನಡುವೆ ಸಭೆ ನಡೆದಿದೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಆಂಧ್ರದಲ್ಲಿ ಚಂದ್ರಬಾಬು, ಪವನ್‌ ಕಲ್ಯಾಣ್‌ ಮೈತ್ರಿ..? ಜಗನ್‌ ವಿರುದ್ಧ ಪ್ರಬಲ ಮೈತ್ರಿಕೂಟ ಸೃಷ್ಟಿಗೆ ಯತ್ನ..!

ಸಭೆಯು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಮತ್ತು ಉಭಯ ನಾಯಕರು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ. ಆದರೆ, ಮೈತ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. 

ಟಿಡಿಪಿ 2014 ರಲ್ಲಿ ಎನ್‌ಡಿಎ ಭಾಗವಾಗಿತ್ತು. ಆದರೆ 2019 ರ ಚುನಾವಣೆಯ ಮೊದಲು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಷಯದ ಮೇಲೆ ಮಾರ್ಚ್ 2018 ರಲ್ಲಿ ಆಡಳಿತ ಮೈತ್ರಿಕೂಟವನ್ನು ತ್ಯಜಿಸಿತು. ಆದರೂ, ಪೋರ್ಟ್ ಬ್ಲೇರ್‌ನಲ್ಲಿ ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆಯ ನಂತರ ಎರಡೂ ಪಕ್ಷಗಳು ಒಗ್ಗೂಡಿವೆ.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಮತ್ತೆ ಕಾಲ್ತುಳಿತ: ಮೂವರ ಸಾವು, ಹಲವರಿಗೆ ಗಾಯ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಟಿಡಿಪಿಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗಿನ ಸಂಬಂಧವನ್ನು ಮುರಿದುಕೊಂಡ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು ಚಂದ್ರಬಾಬು ನಾಯ್ಡು. ಆದರೀಗ, ತಮ್ಮ ಪಕ್ಷವು ಬಿಜೆಪಿಯೊಂದಿಗೆ ಸಂಬಂಧವನ್ನು ಸರಿಪಡಿಸಲು ಉತ್ಸುಕವಾಗಿದೆ ಎಂಬ ಸಂಕೇತಗಳನ್ನು ಕಳುಹಿಸುತ್ತಿದೆ ಎಂದು ತಿಳಿದುಬಂದಿದೆ.

ಏಪ್ರಿಲ್‌ನಲ್ಲಿ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯನ್ನು ರಾಷ್ಟ್ರದ ಪ್ರತಿಷ್ಠೆಯನ್ನು ಎತ್ತಿಹಿಡಿಯುತ್ತಿರುವ ಮತ್ತು ಭಾರತದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುತ್ತಿರುವ ದಾರ್ಶನಿಕ ಎಂದು ಬಣ್ಣಿಸಿದರು. ಅಲ್ಲದೆ, ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಮೋದಿ ಅವರೊಂದಿಗೆ ಸಹಭಾಗಿತ್ವ ಹೊಂದಲು ಸಿದ್ಧರಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌

ಈ ಹಿನ್ನೆಲೆ ಎರಡೂ ಪಕ್ಷಗಳು ಬಾಂಧವ್ಯವನ್ನು ನವೀಕರಿಸಿದರೆ, ಆಂಧ್ರಪ್ರದೇಶ ಮತ್ತು ಉಳಿದ ದಕ್ಷಿಣ ಭಾರತದ ಪ್ರದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿರುವ ಬಿಜೆಪಿಗೆ ಇದು ಲಾಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ತೆಲಂಗಾಣದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದರೂ, ಆಂಧ್ರಪ್ರದೇಶದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಜಾತಿಗಳ ನಡುವೆ ಬೆಂಬಲವನ್ನು ಪಡೆಯಲು ಬಿಜೆಪಿ ಪಕ್ಷವು ಹೆಣಗಾಡುತ್ತಿದೆ.

ಇದನ್ನೂ ಓದಿ: ಕೆಸಿಆರ್ ಪತನ ಆರಂಭವಾಗಿದೆ: ತೆಲಂಗಾಣ ರ‍್ಯಾಲಿಯಲ್ಲಿ ಅಮಿತ್ ಶಾ ಗುಡುಗು

Follow Us:
Download App:
  • android
  • ios