ನವದೆಹಲಿ(ಜು.16): ಕೊರೋನಾದಿಂದ ಉಂಟಾಗಿರುವ ಮಹಾನಷ್ಟಕ್ಕೆ ಬೆಚ್ಚಿ ಬಿದ್ದಿರುವ ಏರ್‌ ಇಂಡಿಯಾ ವಿಮಾನ ಸಂಸ್ಥೆ, ಹಲವು ಉದ್ಯೋಗಿಗಳನ್ನು ಬರೋಬ್ಬರಿ 5 ವರ್ಷದಗಳ ವರೆಗೆ ವೇತನ ರಹಿತ ರಜೆಯಲ್ಲಿ ಕಳುಹಿಸಲು ಮುಂದಾಗಿದೆ.

ಈ ಬಗ್ಗೆ ಕಂಪನಿಯ ನಿರ್ವಾಹಕ ನಿರ್ದೇಶಕ ರಾಜೀವ್‌ ಬನ್ಸಾಲ್‌ ಅವರಿಗೆ ನಿರ್ದೇಶಕ ಮಂಡಳಿ ಸೂಚನೆ ನೀಡಿದ್ದು, ನೌಕರರನ್ನು ದಕ್ಷತೆ, ಆರೋಗ್ಯ ಹಾಗೂ ಅನಗತ್ಯ ಹೀಗೆ ಮೂರು ವಿಭಾಗಗಳಲ್ಲಿ ವಿಂಗಡಿಸಿ ವರದಿ ನೀಡಬೇಕು ಎಂದು ಹೇಳಿದೆ.

1966ರಲ್ಲಿ ಪತನವಾದ ಏರಿಂಡಿಯಾದಲ್ಲಿದ್ದ 2 ಭಾರತೀಯ ಪತ್ರಿಕೆ ಪತ್ತೆ!

ವರದಿ ಆಧರಿಸಿ ನೌಕರರನ್ನು ಆರು ತಿಂಗಳಿನಿಂದ ಹಿಡಿದು ಎರಡು ವರ್ಷಗಳ ವರೆಗೆ ರಜೆಯಲ್ಲಿ ಕಳುಹಿಸಲಾಗುದು. ಇದನ್ನು ಐದು ವರ್ಷದ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಇಲಾಖೆ ಮುಖ್ಯಸ್ಥರು ಹಾಗೂ ಪ್ರಾದೇಶಿಕ ನಿರ್ದೇಶಕರು ನೌಕರರನ್ನು ಈ ಮೇಲಿನ ಮಾನದಂಡಗಳ ಮೂಲಕ ಅಳೆದು ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದಲ್ಲಿ ನೌಕರರ ವೇತನ ರಹಿತ ರಜೆಯ ಅವಧಿ ನಿರ್ಣಯವಾಗಲಿದೆ.