ಆಲೋಪಥಿ vs ಆಯುರ್ವೇದಾ ಜಟಾಪಟಿ ತೀವ್ರ ಸಾವಿರ ವೈದ್ಯರನ್ನು ಅಲೋಪಥಿಯಿಂದ ಆಯುರ್ವೇದಕ್ಕೆ ಕರೆತರುತ್ತೇನೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ 

ನವದೆಹಲಿ(ಮೇ.31): ಕೊರೋನಾ ವೈರಸ್ ನಿಯಂತ್ರಿಸಲು ಸಾಧ್ಯವಾಗದ ಕಾರಣ ಆಲೋಪಥಿ ವಿರುದ್ಧವೇ ವಿವಾದಾತ್ಮಕ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮ್‌ದೇವ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅಲೋಪಥಿ ಹಾಗೂ ಆಯುರ್ವೇದ ನಡುವಿನ ಜಟಾಪಟಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಮ್‌ದೇವ್, ಈ ವರ್ಷ 1,000 ಅಲೋಪಥಿ ವೈದ್ಯರನ್ನು ಆಯುರ್ವೇದಾ ವೈದ್ಯರನ್ನಾಗಿ ಪರಿವರ್ತಿಸುತ್ತೇವೆ ಎಂದಿದ್ದಾರೆ.

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!.

ರಾಮ್‌ದೇವ್ ಅವರ ಯೋಗ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದಿರುವ ಹಲವಾರು ಅಲೋಪಥಿ ವೈದ್ಯರು, ಆರೋಗ್ಯ ಸಿಬ್ಬಂಧಿಗಳು ಯೋಗ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷದೊಳಗೆ ಸಾವಿರಕ್ಕೂ ಹೆಚ್ಚು ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಕರೆತರುತ್ತೇನೆ ಎಂದಿದ್ದಾರೆ.

ಅಲೋಪಥಿ ಔಷಧಿಗಳಿಂದ ಈ ವೈದ್ಯರು ಅಡ್ಡಪರಿಣಾಣ ಎದುರಿಸಿದ್ದಾರೆ. ಹೀಗಾಗಿ ಯೋಗ, ಆಯುರ್ವೇದತ್ತ ಆಕರ್ಷಿತರಾಗಿ ಗುಣಮುಖರಾಗಿದ್ದಾರೆ. ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಈಗಾಗಲೇ ಹಲವು ಅಲೋಪಥಿ ವೈದ್ಯರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಯೋಗ, ಆಯುರ್ವೇದತ್ತ ಆಗಮಿಸುತ್ತಿದ್ದಾರೆ ಎಂದು ರಾಮ್‌ದೇವ್ ಹೇಳಿದ್ದಾರೆ.

ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!

ಮುಂದಿನ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಅಲೋಪಥಿ ವೈದ್ಯರನ್ನು ಪ್ರಕೃತಿ ಚಿಕಿತ್ಸಾ ವೈದ್ಯರನ್ನಾಗಿ ಪರಿವರ್ತಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ರಾಮ್‌ದೇವ್ ಹೇಳಿದರು. 

ಆಲೋಪಥಿ ಮೂರ್ಖತನದ ಪದ್ದತಿ, ಆಲೋಪಥಿ ವ್ಯರ್ಥ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ ವಿರುದ್ಧ ವೈದ್ಯರ ಫೆಡರೇಶನ್, ಭಾರತೀಯ ವೈದ್ಯಕೀಯ ಸಂಘ ಸರೇದಂತೆ ಅಲೋಪಥಿಗಳು ಜೂನ್ 1 ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಮ್‌ದೇವ್ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದ್ದಾರೆ.