ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಶಿಕಲಾ ನಟರಾಜನ್ ನಾಲ್ಕು ವರ್ಷದ ಬಳಿಕ ಇಂದು ಬಿಡುಗಡೆ ಆದರು. 

ಬೆಂಗಳೂರು (ಜ.27):  ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಬಂಧಿತರಾಗಿ ಶಿಕ್ಷೆ ಅನುಭವಿಸಿದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್‌ ಇಂದು ಜೈಲಿನಿಂದ ಬಿಡುಗಡೆಯಾದರು. 

 ಸದ್ಯ ಕೊರೋನಾ ಸೋಂಕಿಗೆ ಒಳಗಾಗಿರುವ ಶಶಿಕಲಾ ಬೆಂಗಳೂರಿನ ವಿಕ್ಟೋರಿಯಾ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿರವಾಗಿದ್ದು, ಎಂದಿನಂತೆ ಇದ್ದು ಇದೀಗ ಅವರನ್ನು ರುಲೀಸ್ ಮಾಡಲಾಗಿದೆ. 

ಬೆಂಗಳೂರು ಜೈಲಿಂದ ಜ.27ರಂದು ಶಶಿಕಲಾ ಬಿಡುಗಡೆ: ವಕೀಲ ..

ಬರೋಬ್ಬರಿ ನಾಲ್ಕು ವರ್ದ ಬಳಿಕ ಶಶಿಕಲಾರನ್ನು ಜೈಲಿಂದ ಬಿಡುಗಡೆ ಮಾಡಿದ್ದು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ. ಆಸ್ಪತ್ರೆಯಿಂಲೇ ರಿಲೀಸ್‌ಗೆ ಸಂಬಂಧಿಸಿದ ವಿಚಾರಗಳನ್ನು ಪೂರ್ಣ ಮಾಡಲಾಗಿದೆ. 

 ಶಶಿಕಲಾ ಬಿಡುಗಡೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಬಳಿ 20ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

10 ಕೋಟಿ ರು.ಪಾವತಿಸಿದ ಶಶಿಕಲಾ : ತಿಂಗಳ ಮೊದಲೇ ರಿಲೀಸ್..? ...

ಅಕ್ರಮ ಆಸ್ತಿ ​ಗ​ಳಿಕೆ ಪ್ರಕ​ರ​ಣ​ದಲ್ಲಿ 2017ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ, ಶಶಿ​ಕಲಾ ನಟ​ರಾ​ಜನ್‌ ಮತ್ತು ಅವರ ಆಪ್ತೆ ಇಳವರಸಿ ಸೇರಿ ನಾಲ್ವ​ರಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ, 10 ಕೋಟಿ ರು. ದಂಡ ವಿಧಿಸಿತ್ತು. ನ್ಯಾಯಾಲಯದ ಆದೇಶದ ಅನ್ವಯ ಜ.27ಕ್ಕೆ ಅವರ ಶಿಕ್ಷೆ ಪೂರ್ಣಗೊಂಡಿದೆ.