Asianet Suvarna News Asianet Suvarna News

ಮಾವುತನೊಂದಿಗೆ ಎದ್ದು ಬಿದ್ದು ಮೊಬೈಲ್ ನೋಡ್ತಿರುವ ಆನೆ... ವಿಡಿಯೋ ವೈರಲ್

ಆನೆಯೊಂದು ಮೊಬೈಲ್ ನೋಡಲು ಹಾತೊರೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Tamilnadu Elephant watching mobile phone with his mahouts in kumbakonam temple video goes viral in social Media akb
Author
First Published Oct 31, 2022, 3:30 PM IST

ಮುಂಬೈ: ಇತ್ತೀಚೆಗೆ ಪ್ರಾಣಿಗಳು ಕೂಡ ಸ್ಮಾರ್ಟ್‌ಫೋನ್‌ಗೆ ಆಕರ್ಷಿತರಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೋತಿಗಳು ಗುಂಪಾಗಿ ಕುಳಿತು ಮೊಬೈಲ್ ನೋಡುತ್ತಿರುವ ದೃಶ್ಯ ಸೆರೆ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಅಜಾನುಬಾಹು ಆನೆಯ ಸರದಿ. ಆನೆಯ ಬಳಿ ಕುಳಿತು ಮಾವುತ ಮೊಬೈಲ್ ನೋಡುತ್ತಿದ್ದರೆ, ಮೊಬೈಲ್‌ನಲ್ಲಿ ಬರುವ ದೃಶ್ಯವನ್ನು ನೋಡಲು ಆನೆಯೂ ಹಾತೊರೆಯುತ್ತಿದೆ. ದೇಗುಲವೊಂದರ ಕಟ್ಟೆಯ ಮೇಲೆ ಮಾವುತ ಆನೆಯ ಬಳಿಯೇ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾನೆ. ಈ ವೇಳೆ ಆನೆಯೂ ಮೊಬೈಲ್ ನೋಡಲು ಹಾತೊರೆಯುತ್ತಿದ್ದು, ತನ್ನ ಮುಂಭಾಗದ ಎರಡು ಕಾಲುಗಳನ್ನು ಮಡಚಿ ಮಾವುತನತ್ತ ಬಗ್ಗಿ ಬಗ್ಗಿ ಮೊಬೈಲ್ ನೋಡ್ತಿದೆ. 

ತಮಿಳುನಾಡಿನ (Tamil Nadu) ಕುಂಭಕೋಣಂ (Kumbakonam) ಪ್ರದೇಶದ ಕುಂಬೇಶ್ವರ ದೇಗುಲದಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಈ ವಿಡಿಯೋವನ್ನು ಕೇರಳ ಎಲಿಫೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆನೆ ಹಾಗೂ ಮಾವುತನ ನಡುವಿನ ಒಡನಾಟ ತುಂಬಾ ವಿಭಿನ್ನ, ಅನನ್ಯ ಹಾಗೂ ಬೆಲೆ ಕಟ್ಟಲಾಗದಂತಹದ್ದು. ಆನೆಗಳನ್ನು (Elephant) ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿದಾಗ ಪ್ರೀತಿಯ ಜೊತೆ ಗೌರವವು ತುಂಬಿರುತ್ತದೆ. ಅಲ್ಲದೇ ಅದು ಶೀಘ್ರದಲ್ಲೇ ಆಳವಾದ ಬಂಧವಾಗಿ ರೂಪುಗೊಳ್ಳುತ್ತದೆ. ಕುಂಭಕೋಣಂನಲ್ಲಿ ಆನೆಯ ತನ್ನ ಪೋಷಕನೊಂದಿಗೆ (Care Taker) ಮೊಬೈಲ್ ವೀಕ್ಷಿಸುತ್ತಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

 

ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಖುಷಿ ವ್ಯಕ್ತಪಡಿಸಿದ್ದು, ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಆನೆ ಮಾವುತ ಮೊಬೈಲ್‌ನಲ್ಲಿ ಏನು ನೋಡ್ತಿದ್ದಾನೆ ಎಂಬುದನ್ನು ನೋಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಆನೆಯನ್ನು ಸಂಕೋಲೆಯಲ್ಲಿ ಕಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಈ ವಿಡಿಯೋ ಬಹಳ ಮುದ್ದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆನೆಗಳು ತಮ್ಮ ಮಾವುತರೊಂದಿಗೆ ಬಹಳ ಮುದ್ದಾದ ಒಡನಾಟವನ್ನು (Bonding) ಹೊಂದಿರುತ್ತವೆ. ಮಾವುತ ಅಪಾಯಕ್ಕೊಳಗಾದದ ಆನೆಗಳು ರಕ್ಷಿಸಿದಂತಹ ಹಲವು ಘಟನೆಗಳು ನಡೆದಿವೆ. ಕೆಲ ದಿನಗಳ ಹಿಂದೆ ಉಕ್ಕಿ ಹರಿಯುತ್ತಿರುವ ಗಂಗಾ ನದಿಯನ್ನು ಆನೆಯೊಂದು ತನ್ನ ಬೆನ್ನ ಮೇಲೆ ಮಾವುತನನ್ನು ಕೂರಿಸಿಕೊಂಡು ದಾಟುತ್ತಿರುವ ದೃಶ್ಯ ವೈರಲ್ ಆಗಿತ್ತು. 

ಕೆಸರಿನಿಂದ ರಕ್ಷಿಸಿದ ಮಹಿಳೆಗೆ ಧನ್ಯವಾದ ಹೇಳಿದ ಮರಿ ಆನೆ: ವಿಡಿಯೋ ವೈರಲ್

ಇತ್ತೀಚೆಗಷ್ಟೇ ಕೆಸರಿನಲ್ಲಿ ಸಿಲುಕಿಕೊಂಡ ಆನೆಯೊಂದಕ್ಕೆ ಯುವತಿಯೊಬ್ಬಳು ಮೇಲೆ ಬರಲು ಸಹಾಯ ಮಾಡಿದ್ದು, ಇದಾದ ಬಳಿಕ ಆನೆ ಆ ಮಹಿಳೆಗೆ ಧನ್ಯವಾದ ಹೇಳಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಆ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (sushanth Nanda) ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಕಾಣಿಸುವಂತೆ ಆನೆ ಮರಿಯೊಂದು ರಸ್ತೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯ ಹೊಲದಲ್ಲಿ ಕೆಸರಿನ ಮಧ್ಯೆ ಸಿಲುಕಿಕೊಂಡಿದೆ. ಇದನ್ನು ನೋಡಿದ ಮಹಿಳಯೊಬ್ಬರು ಅದರ ರಕ್ಷಣೆಗೆ ಧಾವಿಸಿದ್ದು, ಆ ಆನೆಗೆ ಕೆಸರು ನೀರಿನಿಂದ ಮೇಲೆ ಬರಲು ಸಹಾಯ ಮಾಡುತ್ತಾಳೆ. ಆನೆಯೂ ಆಕೆಯ ಸಹಾಯವನ್ನು ಬಯಸಿದ್ದು, ಆಕೆಯ ಸಹಾಯದಿಂದಾಗಿ ಕೆಸರಿನಿಂದ ಮೇಲೆ ಬರುವಲ್ಲಿ ಯಶಸ್ವಿಯಾಗುತ್ತದೆ. 

Kanakapura; ತಾಯಿ ಆನೆ ನಿಧ​ನ, ದನದ ಹಿಂಡಿನ ಜೊತೆ ಬಂದ ಅನಾ​ಥ​ವಾದ ಮರಿ ಆನೆ ರಕ್ಷಣೆ

ಕೆಸರಿನಿಂದ(Mud) ಮೇಲೆ ಬಂದ ಆನೆ (elephant) ಆಕೆಯತ್ತ ಕೃತಜ್ಞತೆಯ ನೋಟ ಬೀರಿ ಸೊಂಡಿಲೆತ್ತಿ ನಮಸ್ಕರಿಸಿದೆ. 'ಅವಳು ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡು ಸಂಕಟ ಪಡುತ್ತಿದ್ದ ಆನೆ ಮರಿಗೆ ಮೇಲೆ ಬರಲು ಸಹಕರಿಸಿದಳು. ಅದಕ್ಕೆ ಪ್ರತಿಯಾಗಿ ಆನೆ ಆಕೆಗೆ ಆಶೀರ್ವದಿಸಿದೆ ಎಂದು ಅವರು ಈ ವಿಡಿಯೋ ಜೊತೆ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಆನೆಗೆ ಸಹಾಯ ಮಾಡಿದ ಮಹಿಳೆಗೆ ಧನ್ಯವಾದ ತಿಳಿಸಿದ್ದಾರೆ
 

Follow Us:
Download App:
  • android
  • ios