ಕೆಲಸದ ಕೊನೆ ದಿನ ಭಾವುಕರಾಗಿ ಬಸ್‌ನ್ನು ತಬ್ಬಿ ಮುತ್ತಿಕ್ಕಿದ ಚಾಲಕ: ವಿಡಿಯೋ ವೈರಲ್

ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರಿಗೆ ನಿವೃತ್ತಿಯಾಗಿದೆ. ನಿವೃತ್ತಿ ವೇಳೆ ಅವರು ತಮ್ಮ ಕೆಲಸದ ಕೊನೆ ದಿನ ಬಸ್‌ನ್ನು ತಬ್ಬಿಕೊಂಡು ಭಾವುಕರಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 

Tamilnadu driver hugs and kisses bus on last day of work Emotional Video goes viral akb

ನಿವೃತ್ತಿ ಎಂಬುದು ಬಹುತೇಕರಿಗೆ ದುಃಖ ನೀಡುವ ವಿಚಾರ ಹಲವು ದಶಕಗಳಿಂದ ಮಾಡುತ್ತಿದ್ದ ಕೆಲಸಕ್ಕೆ ವಿದಾಯ ಹೇಳುವುದಕ್ಕೆ ಬಹಳ ನೋವಾಗುತ್ತದೆ. ಇದೇ ಕಾರಣಕ್ಕೆ ನಿವೃತ್ತಿಯ ಸಮಯದಲ್ಲಿ ಅನೇಕರು ಬಹಳ ಭಾವುಕರಾಗಿ ಕಣ್ಣೀರಿಟುವುದನ್ನು ನೋಡಿದ್ದೇವೆ. ತಾವು ಇಷ್ಟು ದಿನ ಮಾಡಿದ ಮಾಡುತ್ತಿದ್ದ ಕೆಲಸಕ್ಕೆ ಶಾಶ್ವತವಾಗಿ ಗುಡ್ ಬಾಯ್ ಹೇಳುವುದು ಅನೇಕರ ಪಾಲಿಗೆ ಸ್ವಲ್ಪ ಕಷ್ಟದ ವಿಚಾರವೇ. ಅದೇ ರೀತಿ ಇಲ್ಲೊಬ್ಬರು ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರಿಗೆ ನಿವೃತ್ತಿಯಾಗಿದೆ. ನಿವೃತ್ತಿ ವೇಳೆ ಅವರು ತಮ್ಮ ಕೆಲಸದ ಕೊನೆ ದಿನ ಬಸ್‌ನ್ನು ತಬ್ಬಿಕೊಂಡು ಭಾವುಕರಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 

ಕೆಲಸ ಯಾವುದೇ ಇರಬಹುದು. ನಿವೃತ್ತಿ ಮಾತ್ರ ಬಹಳ ಬೇಸರ ಕೊಡುತ್ತದೆ. ದಿನವೂ ಕೆಲಸಕ್ಕೆ ಹೋಗುವ ಕೆಲಸವನ್ನೇ ಬದುಕಾಗಿಸಿರುವ ಅನೇಕರಿಗೆ ನಿವೃತ್ತಿ ನಂತರ ಮನೆಯಲ್ಲಿ ಕೂರುವುದು ಬಹಳ ಕಷ್ಟದ ವಿಚಾರ ಇದೇ ಕಾರಣಕ್ಕೆ ಕೆಲವರು ನಿವೃತ್ತಿಯ ನಂತರ ಬೇರೆನಾದರೂ ಪ್ರವೃತ್ತಿಯಲ್ಲಿ ತೊಡಗುತ್ತಾರೆ.  

ನಟನೆಗೆ ಗುಡ್ ಬೈ ಹೇಳ್ತಾರಂತೆ ಸೂಪರ್ ಸ್ಟಾರ್ ರಜನಿಕಾಂತ್: ಏನಾಯ್ತು ತಲೈವಾಗೆ?

ಮಧುರೈನ 60 ವರ್ಷದ ಬಸ್ ಚಾಲಕ ಮುತ್ತುಪಾಂಡಿ ಅವರಿಗೆ ನಿವೃತ್ತಿಯಾಗಿದ್ದು, ತನ್ನ ಕೆಲಸದ ಕೊನೆ ದಿನ ಅವರು ಬಸ್ಸನ್ನು ಅಪ್ಪಿ ಮುತ್ತಿಕ್ಕಿದ್ದಾರೆ. ಮಧುರೈನ ಮುತ್ತುಪಾಂಡಿ, ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಧುರೈನ ಅನುಪಾನಡಿ ತಿರುಪನಂಗ್ರು ಮಹಾಲಕ್ಷ್ಮಿ ಕಾಲೋನಿ (Mahalakshmi colony) ಮಾರ್ಗದಲ್ಲಿ ಅವರು ಕಳೆದ 30 ವರ್ಷಗಳಿಂದ ಬಸ್ ಚಾಲನೆ ಮಾಡುತ್ತಿದ್ದರು. ಈಗ 60 ವರ್ಷವಾದ ಹಿನ್ನೆಲೆಯಲ್ಲಿ ಬಸ್‌ನ ಸ್ಟೇರಿಂಗ್‌ಗೆ ಮುತ್ತಿಕ್ಕುವ ಮೂಲಕ ಅವರು ತಮ್ಮ ಕೆಲಸದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ. 

35 ವರ್ಷದಲ್ಲಿ ಒಮ್ಮೆಯೂ ಅಪಘಾತ ಮಾಡದ ಬಿಎಂಟಿಸಿ ಚಾಲಕನಿಗೆ ಪ್ರಶಸ್ತಿ

ಈ ಕೆಲಸವೂ ನನಗೆ ಸಮಾಜದಲ್ಲಿ ಗೌರವ ನೀಡಿದೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ (Good Education) ನೀಡಲು ಪತ್ನಿ ಮಕ್ಕಳು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಲು ಈ ವೃತ್ತಿಯಿಂದ ಸಾಧ್ಯವಾಯ್ತು ಎಂದು ನಿವೃತ್ತಿ ವೇಳೆ ಮುತ್ತುಪಾಂಡಿ ಭಾವುಕವಾಗಿ ನುಡಿದ್ದಿದ್ದಾರೆ. ಇವರು ಕೆಲಸದ ಕೊನೆ ದಿನ ಬಸ್‌ನ ಸ್ಟೇರಿಂಗ್‌ಗೆ ಮುತ್ತಿಕ್ಕುವ ದೃಶ್ಯ ಹಾಗೂ ಬಸ್‌ನ್ನು ಅಪ್ಪಿಕೊಳ್ಳುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಅನೇಕರು ಈ ವಿಡಿಯೋ ನೋಡಿ ಮುತ್ತುಪಾಂಡಿ ಸೇವೆಗೆ ಧನ್ಯವಾದ ತಿಳಿಸಿ ಶುಭಕೋರಿದ್ದಾರೆ. ಇದು ಕೃತಜ್ಞತೆ ಇದು ಧನ್ಯವಾದ ತಿಳಿಸುವ ರೀತಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ. 

 

Latest Videos
Follow Us:
Download App:
  • android
  • ios