Asianet Suvarna News Asianet Suvarna News

ಮೇಕೆ​ದಾ​ಟು, ಕಾವೇರಿ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ದೂರು

  • ಕರ್ನಾ​ಟ​ಕದ ಮಹ​ತ್ವಾ​ಕಾಂಕ್ಷೆಯ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆ ವಿರುದ್ಧ ದೂರು
  • ತಮಿ​ಳು​ನಾಡು ರಾಜ್ಯದಿಂದ ಕೇಂದ್ರ ಸರ್ಕಾ​ರಕ್ಕೆ ದೂರು
  •   ಮೋದಿ ಅವ​ರನ್ನು ಭೇಟಿ ಮಾಡಿ​ರುವ ತಮಿ​ಳು​ನಾಡು ಮುಖ್ಯ​ಮಂತ್ರಿ ಎಂ.ಕೆ ಸ್ಟಾಲಿನ್‌
Tamilnadu cm Stalin Meets PM Modi On Mekedatu And Cauvery issue snr
Author
Bengaluru, First Published Jun 18, 2021, 10:36 AM IST
  • Facebook
  • Twitter
  • Whatsapp

ನವ​ದೆ​ಹ​ಲಿ (ಜೂ.18): ಬೆಂಗ​ಳೂರು, ರಾಮ​ನ​ಗರ ಸೇರಿ ಇನ್ನಿ​ತರ ಪ್ರದೇ​ಶ​ಗ​ಳಿಗೆ ಕುಡಿ​ಯುವ ನೀರು ಪೂರೈ​ಸಬ​ಹು​ದಾದ ಕರ್ನಾ​ಟ​ಕದ ಮಹ​ತ್ವಾ​ಕಾಂಕ್ಷೆಯ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆ ವಿರುದ್ಧ ನೆರೆಯ ತಮಿ​ಳು​ನಾಡು ರಾಜ್ಯ ಕೇಂದ್ರ ಸರ್ಕಾ​ರಕ್ಕೆ ದೂರು ಸಲ್ಲಿ​ಸಿದೆ. 

ಗುರು​ವಾರ ದಿಲ್ಲಿಯ ಪ್ರಧಾನಿ ನರೇಂದ್ರ ಮೋದಿ ನಿವಾ​ಸ​ದಲ್ಲಿ ಮೋದಿ ಅವ​ರನ್ನು ಭೇಟಿ ಮಾಡಿ​ರುವ ತಮಿ​ಳು​ನಾಡು ಮುಖ್ಯ​ಮಂತ್ರಿ ಎಂ.ಕೆ ಸ್ಟಾಲಿನ್‌ ಅವರು, ಕರ್ನಾ​ಟ​ಕದ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆಗೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ.

ಮೇಕೆದಾಟು; ಕಾನೂನು ಹೋರಾಟ ಮತ್ತು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಅಲ್ಲದೆ ಪ್ರಸಕ್ತ ವರ್ಷ ಕರ್ನಾಟಕದಿಂದ ತಮಿಳ್ನಾಡಿಗೆ ಬಿಡುಗಡೆಯಾಗಬೇಕಿರುವ ಕಾವೇರಿ ನದಿ ನೀರಿನ ಪೂರ್ಣ ಹಂಚಿಕೆಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಸ್ವತಃ ಟ್ವೀಟ್‌ ಮಾಡಿ​ರುವ ಎಂ.ಕೆ ಸ್ಟಾಲಿನ್‌ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಭೇಟಿಯಾಗಿ ತಮಿ​ಳು​ನಾ​ಡಿ​ನ ಉದ್ಯೋಗ, ಜಲ ಸಂಪ​ನ್ಮೂ​ಲ, ಶಿಕ್ಷಣ, ಆರೋಗ್ಯ, ಕೈಗಾ​ರಿ​ಕೋ​ದ್ಯ​ಮ ಸೇರಿ​ದಂತೆ ರಾಜ್ಯದ ಹಲವು ಬೇಡಿ​ಕೆ​ಗ​ಳನ್ನು ಸಲ್ಲಿ​ಸಿ​ದ್ದೇನೆ. ಜೊತೆಗೆ ನೀಟ್‌, ಸಿಎಎ ಸೇರಿ​ದಂತೆ ಇನ್ನಿತರ ವಿಚಾ​ರ​ಗಳ ಕುರಿ​ತಾ​ಗಿಯೂ ಮೋದಿ ಅವರ ಬಳಿ ಮಾತು​ಕತೆ ನಡೆ​ಸಿ​ದ್ದಾ​ಗಿ’ ತಿಳಿ​ಸಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಮೇಕೆ​ದಾಟು ಯೋಜ​ನೆ ಮತ್ತಷ್ಟುವಿಳಂಬ​ವಾ​ಗುವ ಸಾಧ್ಯತೆ ಎದು​ರಾ​ಗಿದೆ.

Follow Us:
Download App:
  • android
  • ios