ಬೆಂಗಳೂರು(ಮೇ 27)  ಮೇಕೆದಾಟು ಯೋಜನೆ ವಿವಾದಕ್ಕೆ ಸಂಬಂಧಿಸಿ ಕಾನೂನು ಹೋರಾಟಕ್ಕೆ  ರಾಜ್ಯ ಸರ್ಕಾರ ಮುಂದಾಗಿದೆ.  ಮೇಕೆದಾಟು ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯಕ್ಕೆ ಸಂಬಂಧಿಸಿದಂತೆ  ಪರಿಶೀಲನೆ ನಡೆಸಲು ಸಮೀತಿ ರಚನೆ ಮಾಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಪ್ರಶ್ನಿಸಲು ರಾಜ್ಯ ಸರ್ಕಾರ ನಿರ್ಧಾರ   ಮಾಡಿದೆ.

ಏನಿದು ಮೇಕೆದಾಟು ಯೋಜನೆ? ಯಾರಿಗೆ ಲಾಭ? 

ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರ ಸಭೆ ನಡೆಸಲಾಗಿದೆ.  ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್,  ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ,  ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ದರು. 

ಮೇಕೆದಾಟು ವಿಚಾರಣೆಗೆ ಜಂಟಿ ಸಮಿತಿ ರಚನೆ

ಮೇಕೆದಾಟು ಯೋಜನೆ ಪ್ರದೇಶ ವ್ಯಾಪ್ತಿಯ ಕಚ್ಚಾ ರಸ್ತೆಯ ಕುರಿತಂತೆ  ತಮಿಳುನಾಡಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.  ಅದನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಹಸಿರು ಪೀಠ ಸಮಿತಿಯೊಂದನ್ನು ರಚನೆ ಮಾಡಿದೆ.  ಅದು ಸಮಂಜಸವಾದ ಕ್ರಮ‌ ಅಲ್ಲ.  ಹೀಗಾಗಿ ಈ ಆದೇಶವನ್ನು ಹಸಿರು ಪೀಠದ ಮುಂದೆಯೇ ಪ್ರಶ್ನಿಸಲು ನಿರ್ಧಾರ ಮಾಡಲಾಗಿದೆ.