ಸನ್‌ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್‌ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಲಹೆ ನೀಡಿದ್ದಾರೆ.

ಚೆನ್ನೈ: ಸನ್‌ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್‌ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಲಹೆ ನೀಡಿದ್ದಾರೆ.

2003 ರಲ್ಲಿ ನಡೆದ ಸನ್ ಟಿವಿ ನೆಟ್‌ವರ್ಕ್‌ನ ಷೇರು ವಹಿವಾಟುಗಳನ್ನು ಆಕ್ಷೇಪಿಸಿ, ಡಿಎಂಕೆ ಸಂಸದರಾಗಿರುವ ದಯಾನಿಧಿ ಮಾರನ್‌ ಅವರು ತಮ್ಮ ಹಿರಿಯ ಸಹೋದರ ಕಲಾನಿಧಿ ಮಾರನ್‌ ಹಾಗೂ ಇನ್ನೂ 7 ಜನಕ್ಕೆ ಕೆಲ ತಿಂಗಳ ಹಿಂದೆ ನೋಟಿಸ್‌ ನೀಡಿದ್ದರು.

ಇದೀಗ ಸಹೋದರರ ನಡುವೆ ನಡುವೆ ಸಂಧಾನ ಮಾಡಿಸಲು, ಅವರ ಸಂಬಂಧಿ ಸ್ಟಾಲಿನ್‌ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, ದಯಾನಿಧಿ ಅವರು ನೋಟಿಸ್‌ ಹಿಂಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಸ್ತಿಗಾಗಿ ಕಾನೂನು ಸಮರಕ್ಕೆ ಮುಂದಾಗಿರುವ ಮಾರನ್ ಸೋದರರಲ್ಲಿ ಯಾರು ಅತೀ ಶ್ರೀಮಂತರು

ಚೆನ್ನೈ: ಮಾಜಿ ಕೇಂದ್ರ ಸಚಿವ ಮತ್ತು ಈಗಿನ ಡಿಎಂಕೆ ಸಂಸದ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಮತ್ತು ಸನ್ ಟಿವಿ ನೆಟ್‌ವರ್ಕ್‌ನ ಮುಖ್ಯಸ್ಥ ಕಲಾನಿಧಿ ಮಾರನ್ ನಡುವೆ ವಿರಸ ಉಂಟಾಗಿದೆ. 2003 ರಲ್ಲಿ ತಂದೆ ಮುರಸೊಲಿ ಮಾರನ್ ಅವರ ಮರಣದ ನಂತರ ಕಲಾನಿಧಿ ಮಾರನ್ ತಮ್ಮ ತಂದೆ ಸ್ಥಾಪಿಸಿದ್ದ ಮಾಧ್ಯಮ ಸಾಮ್ರಾಜ್ಯವನ್ನು ವಂಚನೆಯಿಂದ ವಶಪಡಿಸಿಕೊಂಡಿದ್ದಾರೆ ಎಂದು ಸಂಸದ ದಯಾನಿಧಿ ಮಾರನ್ ಆರೋಪಿಸಿದ್ದು, ಸೋದರನಿಗೆ ಕಾನೂನು ನೋಟೀಸ್ ಕಳುಹಿಸಿದ್ದಾರೆ.

ಕಾನೂನು ನೋಟೀಸ್‌ನಲ್ಲಿ, ಇತರ ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಕಲಾನಿಧಿ ಮಾರನ್ ಸನ್ ಟಿವಿಯ ಷೇರುಗಳನ್ನು ಕಾನೂನುಬಾಹಿರವಾಗಿ ವರ್ಗಾಯಿಸಿದ್ದಾರೆ ಎಂದು ದಯಾನಿಧಿ ಮಾರನ್ ಆರೋಪಿದಿದ್ದಾರೆ. ಕಲಾನಿಧಿ ಮಾರನ್ ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ ಎಂದು ದಯಾನಿಧಿ ಮಾರನ್ ಆರೋಪಿಸಿ ಪರಿಹಾರ ಕೋರುತ್ತಿದ್ದಾರೆ. ಈ ಆರೋಪ ಸಾಬೀತಾದರೆ, ಸನ್ ಟಿವಿಯ ₹30,000 ಕೋಟಿ ಸಾಮ್ರಾಜ್ಯವನ್ನು ಮರುರೂಪಿಸಬೇಕಾಗುತ್ತದೆ. ಇದು ಅದರ ಷೇರು ಮತ್ತು ಆಡಳಿತದ ಮೇಲೆ ಭಾರಿ ಪರಿಣಾಮ ಬೀರಲಿದೆ.

ಮಾರನ್ ಕುಟುಂಬದ ಪರಂಪರೆ 

ಮಾರನ್ ಕುಟುಂಬವು ತಮಿಳುನಾಡಿನ ಮಾಧ್ಯಮ ಮತ್ತು ರಾಜಕೀಯದಲ್ಲಿ ಭಾರಿ ಪ್ರಾಬಲ್ಯ ಹೊಂದಿದೆ. ಕಲಾನಿಧಿ ಮಾರನ್ ಸನ್ ಟಿವಿಯನ್ನು ಭಾರತದ ಅತಿದೊಡ್ಡ ನೆಟ್‌ವರ್ಕ್ ಆಗಿ ನಿರ್ಮಿಸಿದರೆ, ದಯಾನಿಧಿ ಮಾರನ್ ರಾಜಕೀಯದತ್ತ ಗಮನ ಹರಿಸಿ, ದೂರಸಂಪರ್ಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅಣ್ಣ ತಮ್ಮಂದಿರ ನಡುವಿನ ಈ ಸ್ಪರ್ಧೆಯು ಕುಟುಂಬದ ವ್ಯಾಪಕ ವ್ಯಾಪಾರ ಹಿತಾಸಕ್ತಿಗಳ ಉತ್ತರಾಧಿಕಾರ ಮತ್ತು ನಿಯಂತ್ರಣದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.

ಕಲಾನಿಧಿ ಮಾರನ್ ಸಾಮ್ರಾಜ್ಯ

₹25,000 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಕಲಾನಿಧಿ ಮಾರನ್ ಸನ್ ಟಿವಿ, ಸನ್ NXT ಮತ್ತು ರೆಡ್ FM ಅನ್ನು ನಿಯಂತ್ರಿಸುತ್ತಿದ್ದಾರೆ. ₹200 ಕೋಟಿ ಮೌಲ್ಯದ ಚೆನ್ನೈ ಮಹಲು, ಖಾಸಗಿ ಜೆಟ್ ವಿಮಾನಗಳು ಮತ್ತು ಐಷಾರಾಮಿ ಕಾರುಗಳು ಅವರ ಐಷಾರಾಮಿ ಜೀವನಶೈಲಿಯಲ್ಲಿ ಸೇರಿವೆ. ಅವರ ಪತ್ನಿ ಕಾವೇರಿ ಮಾರನ್ ಸನ್ ಗ್ರೂಪ್‌ನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ದಯಾನಿಧಿ ಮಾರನ್ ರಾಜಕೀಯ ಪ್ರಭಾವ

ಇತ್ತ ₹500+ ಕೋಟಿ ನಿವ್ವಳ ಮೌಲ್ಯ ಹೊಂದಿರುವ ದಯಾನಿಧಿ ಮಾರನ್ ಡಿಎಂಕೆಯಲ್ಲಿ ರಾಜಕೀಯ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಸನ್ ಗ್ರೂಪ್‌ನಲ್ಲಿ ಗಮನಾರ್ಹ ರಿಯಲ್ ಎಸ್ಟೇಟ್ ಮತ್ತು ಷೇರುಗಳನ್ನು ಹೊಂದಿದ್ದಾರೆ. ಅವರ ಕಾನೂನು ಕ್ರಮವು ಅವರ ಷೇರುಗಳನ್ನು ಸಕ್ರಿಯವಾಗಿ ಮರಳಿ ಪಡೆಯುವುದರ ಸೂಚನೆಯಾಗಿದೆ.

ಸನ್ ಟಿವಿಯ ಷೇರು ಮೇಲೆ ಪರಿಣಾಮ

ಕಲಾನಿಧಿ ಮಾರನ್ ಮತ್ತು ಅವರ ಕುಟುಂಬವು ಸನ್ ಟಿವಿಯ 75% ಷೇರುಗಳನ್ನು ಹೊಂದಿದೆ. ಪ್ರತಿ ಷೇರುಗಳು ₹600–700 ರ ನಡುವೆ ವಹಿವಾಟು ನಡೆಸುತ್ತಿವೆ. ವಿಶೇಷವಾಗಿ ದಯಾನಿಧಿ ಮಾರನ್ ಕಾನೂನು ಮೊರೆ ಹೋರಗಿರುವುದರಿಂದ ನ್ಯಾಯಾಲಯದ ಆದೇಶ ಬಂದು ಷೇರು ಮರುಹಂಚಿಕೆ ಅಥವಾ ಪರಿಹಾರ ಪಡೆದರೆ. ದೀರ್ಘಕಾಲದ ಕಾನೂನು ಹೋರಾಟವು ಸಂಸ್ಥೆಯ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.