ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಕ್ಯಾಬ್ ಡ್ರೈವರ್‌ಗೆ 9,000 ಕೋಟಿ ರೂಪಾಯಿಗಳನ್ನು ತಪ್ಪಾಗಿ ಜಮೆ ಮಾಡಿದ್ದು ಸುದ್ದಿಯಾದ ಬೆನ್ನಲ್ಲಿಯೇ ಬ್ಯಾಂಕ್‌ನ ಸಿಇಒ ಎಸ್ ಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ನವದೆಹಲಿ (ಸೆ.29):  ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ (ಟಿಎಂಬಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಸ್. ಕೃಷ್ಣನ್‌, "ವೈಯಕ್ತಿಕ ಕಾರಣಗಳಿಂದ" ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನಾನು ಇನ್ನೂ ಸುಮಾರು ಕೆಲ ವರ್ಷಗಳ ಅಧಿಕಾರದ ಅವಧಿಯ ಅವಧಿಯನ್ನು ಹೊಂದಿದ್ದರೂ, ವೈಯಕ್ತಿಕ ಕಾರಣಗಳಿಗಾಗಿ, ನಾನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ" ಎಂದು ಕೃಷ್ಣನ್ ಅವರ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.ಕೃಷ್ಣನ್ ಅವರು ಸೆಪ್ಟೆಂಬರ್ 2022 ರಲ್ಲಿ ಬ್ಯಾಂಕಿನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ತೂತುಕುಡಿ ಮೂಲದ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಗುರುವಾರ ಸಭೆ ನಡೆಸಿ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಮತ್ತು ಅದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ರವಾನಿಸಿದೆ. ಎಸ್ ಕೃಷ್ಣನ್, ಆರ್‌ಬಿಐನಿಂದ ಮಾರ್ಗದರ್ಶನ/ಸಲಹೆಯನ್ನು ಸ್ವೀಕರಿಸುವವರೆಗೆ, ಎಂಡಿ ಮತ್ತು ಸಿಇಒ ಆಗಿ ಮುಂದುವರಿಯುತ್ತಾರೆ, ಅವರು ಹೊರಹೋಗುವ ಸಮಯವನ್ನು ಸರಿಯಾದ ರೀತಿಯಲ್ಲಿ ತಿಳಿಸಲಾಗುವುದು" ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಕೆಲ ತಿನಗಳ ಹಿಂದೆಯಷ್ಟೇ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ಖಾತೆದಾರರಾಗಿರುವ ಕ್ಯಾಬ್ ಡ್ರೈವರ್‌ಗೆ ಬ್ಯಾಂಕ್‌ ಮಿಸ್‌ ಆಗಿ 9 ಸಾವಿರ ಕೋಟಿ ರೂಪಾಯಿಯನ್ನು ಟ್ರಾನ್ಸ್‌ಫರ್‌ ಮಾಡಿತ್ತು. ಈ ಘಟನೆ ನಡೆದ ಒಂದು ವಾರದ ಬಳಿಕ ಎಸ್‌.ಕೃಷ್ಣನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಗಮನಾರ್ಹ ಅಂಶವಾಗಿದೆ.

ಇನ್ನು 9 ಸಾವಿರ ಕೋಟಿ ರೂಪಾಯಿಯನ್ನು ತನ್ನ ಅಕೌಂಟ್‌ನಲ್ಲಿ ಪಡೆದುಕೊಂಡಿದ್ದ ಕ್ಯಾಬ್‌ ಡ್ರೈವರ್‌ ರಾಜ್‌ಕುಮಾರ್‌, ಮೊದಲಿಗೆ ಇದು ಸ್ಪ್ಯಾಮ್‌ ಮೆಸೇಜ್‌ ಆಗಿರಬಹುದು ಎಂದು ಭಾವಿಸಿದ್ದರು. ಮೊತ್ತ ಅಕೌಂಟ್‌ಗೆ ಬಂದಿದ್ದು ಹೌದೋ, ಅಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ 21 ಸಾವಿರ ರೂಪಾಯಿಯ ಸಣ್ಣ ಮೊತ್ತವನ್ನು ಸ್ನೇಹಿತರಿಗೆ ವರ್ಗಾವಣೆ ಮಾಡಿದ್ದರು. ಈ ಟ್ರಾನ್ಸ್‌ಫರ್‌ ಯಾವುದೇ ಸಮಸ್ಯೆಯಿಲ್ಲದೆ ನಡೆದಾಗ ರಾಜ್‌ಕುಮಾರ್‌ಗೆ ಖಾತೆಯಲ್ಲಿ ಹಣ ಬಂದಿರುವುದು ಗೊತ್ತಾಗಿದೆ.

Deadline Alert: 2,000ರೂ. ನೋಟು ಬದಲಾವಣೆಗೆ ನಾಳೆ ಕೊನೆಯ ದಿನ; ಗಡುವು ವಿಸ್ತರಣೆಯಾಗುತ್ತಾ?

ಆದರೆ, ಮತ್ತೊಂದು ಟ್ರಾನ್ಸ್‌ಫರ್‌ ಮಾಡುವುದರ ಒಳಗಾಗಿ ಎಚ್ಚೆತ್ತ ಬ್ಯಾಂಕ್‌ ಅವರ ಖಾತೆಯಲ್ಲಿದ್ದ ಉಳಿದ ಹಣವನ್ನು ಡೆಬಿಟ್‌ ಮಾಡಿದೆ. ಈ ವರ್ಷದ ಜೂನ್‌ನಲ್ಲಿ, ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ನಲ್ಲಿ ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಿತು ಮತ್ತು ಕೆಲವು ಅಕ್ರಮಗಳನ್ನು ಎಚ್ಚರಿಸಿತ್ತು ಎಂದೂ ವರದಿಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಈ 5 ಹಣಕಾಸು ನಿಯಮಗಳಲ್ಲಿ ಬದಲಾವಣೆ;ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!