Asianet Suvarna News Asianet Suvarna News

ಮಗಳನ್ನು ಓಡಿಸಿಕೊಂಡು ಹೋದ ಅಂತ ಹುಡುಗಿ ಕಡೆಯವರಿಂದ ಹುಡುಗನ ಅಮ್ಮನ ಕಿಡ್ನ್ಯಾಪ್

ತಮ್ಮ ಮಗಳನ್ನು ಓಡಿಸಿಕೊಂಡು ಹೋದ ಅಂತ ಹುಡುಗನ ಅಮ್ಮನನ್ನೇ ಹುಡುಗಿ ಕಡೆಯವರು ಕಿಡ್ನ್ಯಾಪ್ ಮಾಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.

Tamil nadu woman parents kidnapped mans mother after he eloped with girlfriend in dharmavaram akb
Author
First Published Aug 15, 2024, 2:51 PM IST | Last Updated Aug 15, 2024, 2:51 PM IST

ಧರ್ಮಪುರಿ: ತಮ್ಮ ಮಗಳನ್ನು ಓಡಿಸಿಕೊಂಡು ಹೋದ ಅಂತ ಹುಡುಗನ ಅಮ್ಮನನ್ನೇ ಹುಡುಗಿ ಕಡೆಯವರು ಕಿಡ್ನ್ಯಾಪ್ ಮಾಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.  ಓಡಿ ಹೋಗಿರುವ ಜೋಡಿ ಎಲ್ಲಿದ್ದಾರೆ ಎಂಬುದನ್ನು ತಿಳಿಯಲು, ಹಾಗೂ ಅಮ್ಮನನ್ನೇ ಕಿಡ್ನ್ಯಾಪ್  ಮಾಡಿದ್ರೆ ಮಗ ಬಂದೇ ಬರ್ತಾನೆ ಎಂಬ ನಿರೀಕ್ಷೆಯಲ್ಲಿ ಹುಡುನ ತಾಯಿಯನ್ನು ಹುಡುಗಿ ಕಡೆಯವರು ಕಿಡ್ನ್ಯಾಪ್ ಮಾಡಿದ್ದಾರೆ. ಧರ್ಮಪುರಿಯ ಮೊರಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಹೀಗೆ ಓಡಿ ಹೋಗಿರುವ ಯುವಕ ಯುವತಿ ಇಬ್ಬರೂ ಬೆಂಗಳೂರಿನಲ್ಲಿ ಓದಿದ್ದು, ಬೆಂಗಳೂರಿನಲ್ಲೇ ಉದ್ಯೋಗದಲ್ಲಿದ್ದರು. ಹುಡುಗಿ ಮೇಲ್ವರ್ಗಕ್ಕೆ ಸೇರಿದರೆ ಹುಡುಗ ಕೆಳವರ್ಗಕ್ಕೆ ಸೇರಿದ್ದ. ಮಂಗಳವಾರ ರಾತ್ರಿ ಈ ಜೋಡಿ ಓಡಿ ಹೋಗಿದ್ದು, ಇದರಿಂದ ಕುಪಿತಗೊಂಡ ಯುವತಿ ಕಡೆಯವರು ಯುವಕನ ತಾಯಿಯನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ಹೀಗಾಗಿ ಪೊಲೀಸರಿಗೆ ಈಗ ಓಡಿ ಹೋದ ಜೋಡಿಯನ್ನು ಹುಡುಕುವ ಜೊತೆ ಹುಡುಗಿ ಕಡೆಯವರಿಂದ ಅಪಹರಣಕ್ಕೊಳಗಾಗಿರುವ ಹುಡುಗನ ತಾಯಿಯನ್ನು ಕೂಡ ಪತ್ತೆ ಮಾಡಬೇಕಾದ ಹೆಚ್ಚುವರಿ ಕೆಲಸ ಸಿಕ್ಕಿದೆ. 

Bengaluru: ನ್ಯಾಯಾಲಯದಲ್ಲಿ ತಂದೆ ಪಾಲಾದ ಮಗುವನ್ನು ಸ್ನೇಹಿತನ ಜೊತೆ ಸೇರಿ ಕಿಡ್ನಾಪ್ ಮಾಡಿದ ತಾಯಿ!

ಘಟನೆಯ ಬಳಿಕ ಈ ಓಡಿಹೋದ ಜೋಡಿ ಹಾಗೂ ಹುಡುಗನ ತಾಯಿಯನ್ನು ಕಿಡ್ನ್ಯಾಪ್ ಮಾಡಿದ ಹುಡುಗಿ ಕಡೆಯವರು ಇವರಿಬ್ಬರೂ ಮನೆಗೆ ಹೊರಗಿನಿಂದ ಬೀಗ ಹಾಕಿ ಎಸ್ಕೇಪ್ ಆಗಿದ್ದು, ಫೋನ್ ಕೂಡ ಸ್ವಿಚ್ ಆಫ್ ಮಾಡಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. 

ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂಬ ವಿಚಾರ ತಿಳಿದ ನಂತರ ಸಿಟ್ಟಿಗೆದ್ದ ಪೋಷಕರ ಕೋಪ ಹುಡುಗನ ತಾಯಿಯತ್ತ ತಿರುಗಿದ್ದು, ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಓಡಿ ಹೋಗಿರುವ ಹುಡುಗ ಹಾಗೂ ಹುಡುಗಿ ಇಬ್ಬರು ಒಳ್ಳೆಯ ವಿದ್ಯಾಭ್ಯಾಸ ಮಾಡಿದ್ದು, ಕೃಷಿ ವಿಜ್ಞಾನದಲ್ಲಿ ಪದವಿ ಮಾಡಿದ್ದಾರೆ. ಮೊದಲಿಗೆ ಹುಡುಗನನ್ನು ಸಂಪರ್ಕಿಸಲು ಯತ್ನಿಸಿದ ಹುಡುಗಿ ಪೋಷಕರು ಆತ ಫೋನ್‌ಗೂ ಸಿಗದೇ ಹೋದಾಗ ಆತನ ತಾಯಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಐಎಎಸ್ ಗಂಡನ ಬಿಟ್ಟು ತಮಿಳುನಾಡಿನ ರೌಡಿ ಜೊತೆ ಓಡಿ ಹೋಗಿದ್ದ ಮಹಿಳೆ ಆತ್ಮಹತ್ಯೆ

ಇತ್ತ ಮಗನ ಈ ಪ್ರೇಮ ಪ್ರಕರಣದ ಬಗ್ಗೆ ತಾಯಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಹುಡುಗಿ ಪೋಷಕರು ಮನೆಗೆ ಬಂದು ನುಗ್ಗಿದ್ದಾಗಲೇ ಆಕೆಗೆ ವಿಚಾರ ಗೊತ್ತಾಗಿದ್ದು ಶಾಕ್ ಆಗಿದ್ದಾರೆ. ಅಲ್ಲದೇ ಮಗನಿಗೆ ಆಗಲೇ ಅವರು ಕರೆ ಮಾಡಿದ್ದು, ಆತನ ಫೋನ್ ಸ್ವಿಚ್ ಆಫ್ ಆಗಿದೆ. ಈ ವೇಳೆ ಹುಡುಗಿ ಪೋಷಕರು ಆಕೆಯನ್ನು ವಾಹನ ಹತ್ತಿಸಿ ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಆದರೆ ನಂತರದಲ್ಲಿ ಆಕೆಯನ್ನು ವಿಶೇಷ ಪೊಲೀಸ ತಂಡ ರಕ್ಷಿಸಿದೆ ಎಂದು ವರದಿಯಾಗಿದೆ. 

Latest Videos
Follow Us:
Download App:
  • android
  • ios