Video ಉದಯನಿಧಿ ಸ್ಟಾಲಿನ್ ಬರ್ತ್‌ಡೆ ಪಾರ್ಟಿಯಲ್ಲಿ ಅಶ್ಲೀಲ ನೃತ್ಯಕ್ಕೆ ಸಚಿವರ ಚಪ್ಪಾಳೆ, ಭಾರಿ ವಿವಾದ, ಜನಪ್ರತಿನಿಧಿನಿ ಈ ರೀತಿಯ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಡ್ಯಾನ್ಸ್ ಹಾಗೂ ಸಚಿವರು ಆಸ್ವಾದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಚೆನ್ನೈ (ನ.28) ತಮಿಳುನಾಡು ಉಪ ಮುಖ್ಯಮಂತ್ರಿ ಉದನಿಧಿ ಸ್ಟಾಲಿನ್ ಸನಾತನ ಧರ್ಮ ವಿರುದ್ದ ನಿರಂತರ ವಿವಾದತ್ಮಾಕ ಹೇಳಿಕ ನೀಡುತ್ತಲೇ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಸಭ್ಯತೆ ಪಾಠ ಮಾಡುವ ಉದಯನಿಧಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿಯಲ್ಲಿ ಸಭ್ಯತೆ ಗೆರೆ ಮೀರದ ಘಟನೆ ನಡೆದಿದೆ. ಉದನಿಧಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಪಾರ್ಟಿಯಲ್ಲಿನ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಯುವತಿಯರ ಅಶ್ಲೀಲ ನೃತ್ಯಕ್ಕೆ ತಮಿಳನಾಡು ಸಚಿವ ಎಸ್ ಪೆರಿಯಕರೂಪನ್ ಚಪ್ಪಾಳೆ ತಟ್ಟುತ್ತಾ ಅಸ್ವಾದಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಜನಪ್ರತಿನಿಧಿಯ ನಡೆ ಇದಲ್ಲ, ಸಭ್ಯತೆ ಗೆರೆ ಮೀರಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ.

ವೇದಿಕೆ ಮೇಲಿದ್ದ ಯುವತಿಯರ ಹತ್ತಿರಕ್ಕೆ ಕರೆದ ಸಚಿವ

ಉದನಿಧಿ ಸ್ಟಾಲಿನ್ ಬರ್ತ್‌ಡೇ ಪಾರ್ಟಿ ಅದ್ಧೂರಿಯಾಗಿ ನಡೆದಿದೆ. ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿತ್ತು. ಜಿಲ್ಲಾ ನಾಯಕರು ಸೇರಿದಂತೆ ಹಲವರು ಈ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ವೇದಿಕೆಯಲ್ಲಿ ಯುವತಿಯರ ಅಶೀಲ ನೃತ್ಯ ನಡೆಯುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಸಚಿವ ಎಸ್ ಪೆರಿಯಕರೂಪನ್ ಥ್ರಿಲ್ ಆಗಿದ್ದಾರೆ. ಡ್ಯಾನ್ಸ್ ನೋಡಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಗಳ ಪ್ರಕಾರ ಎಸ್ ಪೆರಿಯಕರೂಪನ್ ವೇದಿಕೆ ಮೇಲೆ ನಡೆಯುತ್ತಿದ್ದ ಯುವತಿಯರನ್ನು ತನ್ನ ಹತ್ತಿರಕ್ಕೆ ಕರೆದಿದ್ದಾರೆ. ಹೀಗಾಗಿ ವೇದಿಕೆ ಮೇಲಿಂದ ಕೆಳಗಿಳಿದು ಬಂದ ಯುವತಿಯರ ಗುಂಪು ಸಚಿವರ ಹತ್ತಿರದಲ್ಲೇ ಡ್ಯಾನ್ಸ್ ಮಾಡಿದ್ದಾರೆ.ಇತ್ತ ಸಚಿವರು ಚಪ್ಪಾಳ ತಟ್ಟುತ್ತಾ ಆಸ್ವಾದಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇತ್ತ ಬಿಜೆಪಿ ಇದೇ ವಿಡಿಯೋ ಪೋಸ್ಟ್ ಮಾಡಿ ಡಿಎಂಕೆ, ಉದನಿಧಿ ಸ್ಟಾಲಿನ್ ಹಾಗೂ ಪಿ ಪೆರಿಯಕರೂಪನ್ ವಿರುದ್ದ ವಾಗ್ದಾಳಿ ನಡೆಸಿದೆ. ಸಚಿವರ ವರ್ತನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಲನಾಡಿನ ಮಹಿಳೆಯರು ಈ ಸರ್ಕಾರದ ಸಚಿವರ ಮುಂದೆ ತಮ್ಮ ದೂರು ದುಮ್ಮಾನಗಳನ್ನು ಹೇಗೆ ತೆಗೆದುಕೊಂಡು ಹೋಗಿ ನೀಡುತ್ತಾರೆ. ಅರೆ ನಗ್ನ ವೇಷದ ಮಹಿಳೆಯರನ್ನು ಪಕ್ಕಕ್ಕೆ ಕೆರಿಯಿಸಿಕೊಂಡು ಅವರ ಬಳಿ ನಿೃತ್ಯ ಮಾಡಿಸಿದ್ದಾರೆ. ಇದಕ್ಕೆ ಚಪ್ಪಾಳೆ ತಟ್ಟುತ್ತಾ ಸಂತೋಷದಿಂದ ಸಂಭ್ರಮಿಸಿದ್ದಾರೆ. ಇಂತಹ ನಾಯಕರನ್ನು ತಮಿಳುನಾಡು ಮಹಿಳೆಯರು ಅವಲಂಬಿಸುವುದು ಹೇಗೆ? ಎಂದು ಬಿಜೆಪಿ ಪ್ರಶ್ನಿಸಿದೆ.

Scroll to load tweet…

ಬಿಜೆಪಿ ಬೆನ್ನಲ್ಲೇ ಎಐಎಡಿಎಂಕೆ ನಾಯಕ ಪಶುಪತಿ ಸೆಂಥಿಲ್ ಸಚಿವರ ವರ್ತನೆಗೆ ಕಿಡಿ ಕಾರಿದ್ದಾರೆ. ಇದು ಸಾರ್ವಜನಿಕ ಜೀವನದಲ್ಲಿರುವ ಹಾಗೂ ಸಚಿವರ ಜವಾಬ್ದಾರಿ ಹೊತ್ತಿರುವ ನಾಯಕನಿಗೆ ಹೇಳಿದ್ದಲ್ಲ. ಇದು ಬೆಳಗಿನ ಜಾವವೇ ನಡೆದಿದೆ ಎಂದಿದ್ದಾರೆ. ಇದು ಡಿಎಂಕೆ ಪಾರ್ಟಿಯ ಸ್ತ್ರೀವಾದವೇ? ಅಥವಾ ತಮಿಳುನಾಡಿನ ಮಹಿಳೆಯರಿಗೆ ಕೊಟ್ಟ ಗೌರವವೇ ಎಂದು ಹಲವು ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಮಾತು ಎತ್ತಿದ್ದರೆ, ತಮಿಳು, ದ್ರಾವಿಡ ಎಂದು ಭಾಷಣ ಮಾಡುವ ಡಿಎಂಕೆ ನಾಯಕರೇ ಇದು ಯಾವ ತಮಿಳು ಸಂಸ್ಕೃತಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋದಿಂದ ಸಚಿವ ಪೆರಿಯಕರೂಪನ್ ಮಾತ್ರವಲ್ಲ, ಡಿಎಂಕೆ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ.