ಚೆನ್ನೈ(ಏ18): ಕೊರೋನಾ ವೈರಸ್ ಭಾರತದ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕಳೆದೆರಡು ದಿನದಿಂದ 2.5 ಲಕ್ಷ ಪ್ರಕರಣ ಪ್ರತಿ ದಿನ ದಾಖಲಾಗುತ್ತಿದೆ. ಇದೀಗ ತಮಿಳುನಾಡು ಲಾಕ್‌ಡೌನ್ ಘೋಷಿಸಿದೆ. ತಮಿಳುನಾಡಿನಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.

ಪ್ರಧಾನಿ ಮೋದಿಗೆ ಮನ್‌ಮೋಹನ್ ಸಿಂಗ್ ಪತ್ರ; ಕೊರೋನಾ ನಿಯಂತ್ರಣಕ್ಕೆ ಹೇಳಿದ್ರು 5 ಸೂತ್ರ!.

ಭಾನುವಾರ ಲಾಕ್‌ಡೌನ್ ಆದರೆ, ಇತರ ದಿನ ನೈಟ್ ಕರ್ಫ್ಯೂ ಹೇರಲಾಗಿದೆ. ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆ ವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಇದೇ ವೇಳೆ ಅಂತರ್ ರಾಜ್ಯ ಪ್ರಯಾಣವನ್ನು ನಿಷೇಧಿಸಿದೆ. ಇನ್ನು 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಹೊಸ ನಿಯಮ ಏಪ್ರಿಲ್ 20 ರಿಂದ ಜಾರಿಯಾಗಲಿದೆ.

ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್: ಬೆಚ್ಚಿಬೀಳಿಸಿದ ಏ.18ರ ಅಂಕಿ ಸಂಖ್ಯೆ

ಶುಕ್ರವಾರ ಭಾರತದಲ್ಲಿ 2.6 ಲಕ್ಷ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲೂ ಕೊರೋನಾ ಪ್ರಕರಣ ಮಿತಿ ಮೀರುತ್ತಿದೆ. ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.  ಇತ್ತ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. 92 ದಿನದಲ್ಲಿ ಭಾರತದಲ್ಲಿ 12 ಕೋಟಿ ವ್ಯಾಕ್ಸಿನ್ ನೀಡಲಾಗಿದೆ. ಇತ್ತ ಲಸಿಕೆ ಅಭಾವ ನೀಗಿಸಲು ಸರ್ಕಾರ ಕ್ರಮಕೈಗೊಂಡಿದೆ.