ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ತಮಿಳುನಾಡಿನ ಸಚಿವ ವಿ ಸೆಂಥಿಲ್‌ನನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಲಾಗಿದೆ. ರಾಜ್ಯಪಾಲರು ಈ ನಿರ್ಧಾರ ಘೋಷಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಚೆನ್ನೈ(ಜೂ.29) ಉದ್ಯೋಗಕ್ಕಾಗಿ ಲಂಚ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಅರೆಸ್ಟ್ ಆಗಿರವ ವಿ ಸೆಂಥಿಲ್‌ಗೆ ಇದೀದ ರಾಜ್ಯಪಾಲರು ಶಾಕ್ ನೀಡಿದ್ದಾರೆ. ಬಂಧಿತ ಸೆಂಥಿಲ್ ಬಾಲಾಜಿಯನ್ನ ರಾಜ್ಯಪಾಲರು ಮಂತ್ರಿ ಮಂಡಲದಿಂದ ವಜಾಗೊಳಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿ ಸೆಂಥಿಲ್ ಬಾಲಾಜಿಯನ್ನು ಈ ತಕ್ಷಣದಿಂದಲೇ ಮಂತ್ರಿ ಮಂಡಲದಿಂದ ವಜಾಗೊಳಿಸಲಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಆದೇಶ ಹೊರಡಿಸಿದ್ದಾರೆ. ಇದೀಗ ರಾಜ್ಯಾಪಾಲರ ಆದೇಶ ವಿವಾದಕ್ಕೆ ಕಾರಣವಾಗಿದೆ. ಕ್ಯಾಬಿನೆಟ್‌ನಲ್ಲಿ ನಿರ್ಧಾರವಾಗಬೇಕಿದ್ದ ಘೋಷಣೆ ರಾಜ್ಯಪಾಲರು ಮಾಡಿದ್ದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
2014ರಲ್ಲಿ ಸಾರಿಗೆ ಇಲಾಖೆಯಲ್ಲಿ ನೌಕರಿ ನೀಡಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ತಮಿಳುನಾಡಿನ ಅಬಕಾರಿ ಸಚಿವ ಹಾಗೂ ಪ್ರಭಾವಿ ಡಿಎಂಕೆ ಮುಖಂಡ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ಬಂಧಿಸಿತ್ತು. ಸೆಂಥಿಲ್ ಬಾಲಾಜಿ 2011ರಿಂದ 2014ರವರೆಗೆ ಅಣ್ಣಾಡಿಎಂಕೆಯಲ್ಲಿದ್ದರು ಹಾಗೂ ಜಯಲಲಿತಾ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು. ಆಗ ಅವರು ಸಾರಿಗೆ ಇಲಾಖೆಯಲ್ಲಿ ನೌಕರಿ ಕೊಡಿಸಲು ಸಾವಿರಾರು ಜನರಿಂದ ಕೋಟ್ಯಂತರ ರು. ಲಂಚ ಪಡೆದಿದ್ದರು ಎಂಬ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇ.ಡಿ. ನಡೆಸುತ್ತಿದೆ.
ಬಂಧನಕ್ಕೆ ಒಳಪಟ್ಟ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ
ತಮಿಳುನಾಡಿನ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿತ್ತ. ಇತ್ತ ಬಾಲಾಜಿ ಅವರ ಕರೂರಿನ ಆಸ್ತಿಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ಬುಧವಾರ ನಸುಕಿನಲ್ಲಿ ಅವರನ್ನು ಬಂಧಿಸಿತು. ಈ ವೇಳೆ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು. ಬಾಲಾಜಿ ಅವರು ತಾವು ಅಸ್ವಸ್ಥಗೊಂಡಿದ್ದಾಗಿ ಇ.ಡಿ. ಸಿಬ್ಬಂದಿಯ ಜೀಪಿನಲ್ಲೇ ರೋದಿಸಿದರು. ಬಳಿಕ ಅವರನ್ನು ಚೆನ್ನೈನ ಒಮಂದುರಾರ್ನಲ್ಲಿರುವ ಮಲ್ಟಿಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಬೆಳಗ್ಗೆ 10.40ಕ್ಕೆ ಅವರಿಗೆ ಕೊರೋನರಿ ಆ್ಯಂಜಿಯೋಗ್ರಾಂ ಮಾಡಲಾಯಿತು. ವೈದ್ಯರು ಅವರಿಗೆ ಹೃದಯದ ಬೈಪಾಸ್ ಸರ್ಜರಿಯ ಸಲಹೆ ನೀಡಿದ್ದರು. ಇತ್ತೀಚೆಗೆ ಸೆಂಥಿಲ್‌ಗೆ ಯಶಸ್ವಿ ಹೃದಯ ಚಿಕಿತ್ಸೆ ಮಾಡಲಾಗಿತ್ತು.
Breaking: ತಮಿಳುನಾಡು ಸರ್ಕಾರಕ್ಕೆ ಶಾಕ್: ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧಿಸಿದ ಇಡಿ
ಬಾಲಾಜಿ ಕರೂರು ಹಾಗೂ ಕೊಯಮತ್ತೂರು ಭಾಗದ ಪ್ರಭಾವಿ ನಾಯಕ. 2000ದ ದಶಕದಲ್ಲಿ ಡಿಎಂಕೆಯಿಂದ ರಾಜಕೀಯ ಆರಂಭಿಸಿದರು. ಆದರೆ ಕಾಲಾನಂತರ ಅಣ್ಣಾಡಿಎಂಕೆಗೆ ಹೋಗಿ 2011-14ರ ಅವಧಿಯಲ್ಲಿ ಜಯಾ ಸಂಪುಟದ ಸಚಿವರಾದರು. ಜಯಾ ಜೈಲಿಗೆ ಹೋದಾಗ ಕ್ಷೌರ ಮಾಡಿಸಿಕೊಳ್ಳದೇ ವ್ರತಾಚರಣೆಯನ್ನೂ ಮಾಡಿದರು. ಆದರೆ ಜಯಾ ಜೈಲಿಂದ ಹೊರಬಂದ ನಂತರ ಬಾಲಾಜಿ ಅವರನ್ನು ಅದ್ಯಾವುದೋ ಕಾರಣಕ್ಕೆ ಪಕ್ಷದಿಂದ ಹೊರದಬ್ಬಿದರು. ಬಳಿಕ ಬಾಲಾಜಿ ಟಿಟಿವಿ ದಿನಕರನ್ರ ಪಕ್ಷ ಸೇರಿದರು. ಆದರೆ ಕೆಲ ದಿನಗಳಲ್ಲೇ ಡಿಎಂಕೆ ತೆಕ್ಕೆಗೆ ಮರಳಿದ ಬಾಲಾಜಿ, ಸ್ಟಾಲಿನ್ ಸಂಪುಟದಲ್ಲಿ ಅಬಕಾರಿ ಹಾಗೂ ವಿದ್ಯುತ್ ಸಚಿವರಾದರು. ಸಂಘಟನಾ ಚತುರನಾದ ಬಾಲಾಜಿ ಕರೂರು ಹಾಗೂ ಕೊಯಮತ್ತೂರು ಜಿಲ್ಲೆಗಳಲ್ಲಿ ಪಕ್ಷದ ಉಸ್ತುವಾರಿ ವಹಿಸಿ ಒಂದು ಸೀಟನ್ನೂ ಅಣ್ಣಾ ಡಿಎಂಕೆಗೆ ಗೆಲ್ಲಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಸಿಎಂ ಸ್ಟಾಲಿನ್ಗೆ ಬಾಲಾಜಿ ಎಂದರೆ ಇನ್ನಿಲ್ಲದ ಅಚ್ಚುಮೆಚ್ಚು.
