ತಮಿಳುನಾಡಿನ 21 ದೇವಸ್ಥಾನಗಳಿಗೆ ಭಕ್ತರು ದಾನ ರೂಪದಲ್ಲಿ ನೀಡಿದ್ದ 1000 ಕೆ.ಜಿ. ಚಿನ್ನದ ಆಭರಣಗಳನ್ನು ಕರಗಿಸಿ 24 ಕ್ಯಾರೆಟ್ ಚಿನ್ನದ ಗಟ್ಟಿಗಳನ್ನಾಗಿ ಪರಿವರ್ತಿಸಲಾಗಿದೆ. ಈ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು ಬರುವ ಬಡ್ಡಿಯಿಂದ ದೇಗುಲಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಚೆನ್ನೈ: ತಮಿಳುನಾಡಿನ 21 ದೇವಸ್ಥಾನಗಳಿಗೆ ಭಕ್ತರು ದಾನ ರೂಪದಲ್ಲಿ ನೀಡಿದ್ದ ಹಾಗೂ ಬಳಕೆಯಾಗದ 1000 ಕೆ.ಜಿ. ಚಿನ್ನದ ಆಭರಣಗಳನ್ನು ಕರಗಿಸಲಾಗಿದೆ. ಅವನ್ನು 24 ಕ್ಯಾರೆಟ್ ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಿ ಬ್ಯಾಂಕ್‌ನಲ್ಲಿಡಲಾಗಿದೆ. ಈ ಚಿನ್ನದಿಂದಾಗಿಯೇ ವಾರ್ಷಿಕ 17.81 ಕೋಟಿ ರು. ಆದಾಯ ಬರುತ್ತಿದೆ ಎಂದು ತಮಿಳುನಾಡು ಸರ್ಕಾರ ಗುರುವಾರ ತಿಳಿಸಿದೆ. ಹಿಂದೂ ಧಾರ್ಮಿಕ ಮತ್ತು ದಾನ ಹಾಗೂ ದತ್ತಿ ಇಲಾಖೆಯ ಟಿಪ್ಪಣಿಯನ್ನು ತಮಿಳುನಾಡಿನ ವಿಧಾನಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವ ಪಿ.ಕೆ.ಶೇಖರ್ ಬಾಬು ಮಂಡಿಸಿ ಈ ಮಾಹಿತಿ ನೀಡಿದ್ದಾರೆ.
ಭಕ್ತರು ದಾನವಾಗಿ ನೀಡಿದ ಆದರೆ ದೇವರ, ದೇವಸ್ಥಾನದ ಕಾರ್ಯಕ್ಕೆ ಬಳಸದ ಚಿನ್ನವನ್ನು ಮುಂಬೈನಲ್ಲಿರುವ ಸರ್ಕಾರಿ ಟಂಕಕಸಾಲೆಯಲ್ಲಿ ಕರಗಿಸಿ 24 ಕ್ಯಾರೆಟ್‌ನ ಬಾರ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇದನ್ನು ನಂತರ ಸ್ಟೇಟ್ ಬ್ಯಾಂಕ್‌ನ ಗೋಲ್ಡ್ ಇನ್‌ವೆಸ್ಟ್ ಮೆಂಟ್ ಸ್ಕೀಂನಡಿ ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯಿಂದ ಬರುವ ಬಡ್ಡಿದರದಿಂದ ಸಂಬಂಧಿಸಿದ ದೇಗುಲಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಸಮಿತಿಯನ್ನೂ ರಚಿಸಲಾಗಿದೆ.
ಮಾ.31, 2025ರ ವರೆಗೆ ಒಟ್ಟಾರೆ 10,74,123.488 ಗ್ರಾಂ. ಶುದ್ಧ ಚಿನ್ನವನ್ನು 21 ದೇವಸ್ಥಾನಗಳಿಂದ ಸಂಗ್ರಹಿಸಲಾಗಿದ್ದು, ಇದಕ್ಕೆ ವಾರ್ಷಿಕ 1,781.25 ಲಕ್ಷ ಬಡ್ಡಿದರ ಸಿಗುತ್ತಿದೆ. ಇದರಲ್ಲಿ ತಿರುಚಿನಾಪಳ್ಳಿಯ ಸಮಯಪುರಂನ ಅರುಳ್‌ಮಿಗು ಮಾರಿಯಮ್ಮನ್ ದೇಗುಲದ ಪಾಲು 424.26 ಕೆ.ಜಿ. ಆಗಿದೆ. ಇದೇ ರೀತಿ ಈವರೆಗೆ ಬಳಕೆ ಮಾಡದ ಮತ್ತು ಬಳಕೆ ಮಾಡಲಾಗದ ಬೆಳ್ಳಿಯ ವಸ್ತುಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ? ಸುಪ್ರೀಂ ವಿರುದ್ಧ ಉಪರಾಷ್ಟ್ರಪತಿ ಕಟುಟೀಕೆ
DMK ಸಚಿವನ ವಿರುದ್ಧ FIR ಹಾಕಿ : ಮದ್ರಾಸ್ ಹೈಕೋರ್ಟ್
ಚೆನ್ನೈ: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳುನಾಡು ಡಿಎಂಕೆ ಸರ್ಕಾರದ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸದ ತಮಿಳುನಾಡು ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೂಡಲೇ ಸಚಿವ ಪೊನ್ಮುಡಿ ವಿರುದ್ಧ ಎಫ್‌ಐಆರ್ ಹಾಕಿ ಅಥವಾ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಲು ಸಿದ್ಧರಾಗಿ ಎಂದು ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪೊನ್ಮುಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಆಗ್ರಹಿಸಿದ ನಂತರ ಮದ್ರಾಸ್ ಹೈಕೋರ್ಟ್ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. ಈ ಬಗ್ಗೆ ಕೂಡಲೇ ವಿಚಾರಣೆ ಆರಂಭಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಈಗ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ನಿಮಗೆ ಯಾವುದೇ ದೂರುಗಳು ಬಾರದೇ ಹೋದರು ಕೂಡ ಈ ಬಗ್ಗೆ ಕೇಸ್ ದಾಖಲಿಸಿ ವಿಚಾರಣೆ ನಡೆಸಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ಸೂಚಿಸಿದೆ. ಅಲ್ಲದೇ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿಕೆ ಮಾಡಿದೆ.
ವಕ್ಫ್ ತಿದ್ದುಡಪಡಿ ಕಾನೂನಿಗೆ ತಡೆ ನೀಡಲು ಸುಪ್ರೀಂ ನಕಾರ, 2 ಅಂಶಗಳಲ್ಲಿ ಯಥಾ ಸ್ಥಿತಿ ಪಾಲನೆ
ಏಪ್ರಿಲ್ 6 ರಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ಮಹಿಳೆಯರು, ಶೈವರು ಹಾಗೂ ವೈಷ್ಣವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದಾತ್ಮಕ ಹೇಳಿಕೆಯ ನಂತರ ಡಿಎಂಕೆ ಅವರಿಗೆ ಪಕ್ಷದಲ್ಲಿ ನೀಡಿದ್ದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ತೆಗೆದು ಹಾಕಿತ್ತು. ಆದರೆ ಸಚಿವ ಸ್ಥಾನದಲ್ಲಿ ಉಳಿಸಿಕೊಂಡಿತ್ತು. ಅಲ್ಲದೇ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕೆ. ಪೊನ್ಮುಡಿ ಅವರು ಕ್ಷಮೆ ಕೇಳಿದ್ದರು. ತಂತೈ ಪೆರಿಯಾರ್ ದ್ರಾವಿಡರ್ ಕಳಗಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಾನು ಬಳಸಿದ ಅನುಚಿತ ಪದಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ದೀರ್ಘಕಾಲದವರೆಗೆ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯಾಗಿ, ನನ್ನಿಂದಾದ ಈ ತಪ್ಪಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಎಂದು ಅವರು ಕ್ಷಮೆ ಕೇಳಿದ್ದರು.
