Asianet Suvarna News Asianet Suvarna News

ತಮಿಳುನಾಡಿನಿಂದ ಬಂದು ಬಾಂಬ್ ಹಾಕ್ತಾರೆ: ಶೋಭಾ ಕರಂದ್ಲಾಜೆ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಕಿಡಿ

ನಾನು ಶೋಭಾ ಕರಂದ್ಲಾಜೆ ಅವರ ಆಧಾರ ರಹಿತ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ನೀಡ ಬೇಕೆಂದರೆ ಅವರು ಒಂದೋ ಎನ್‌ಐಎ ಅಧಿಕಾರಿ ಇಲ್ಲವೇ ರಾಮೇಶ್ವರಂ ಕೆಫೆ ಅವರಾಗಿರಬೇಕು. ಆದರೆ ಶೋಭಾ ಹೇಳಿಕೆ ಆಧಾರರಹಿತ. ಈ ಮಾತನ್ನು ಕನ್ನಡಿಗರು ಹಾಗೂ ತಮಿಳಿಗರು ತಿರಸ್ಕರಿಸುತ್ತಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗದ ಬಳಿ ಮನವಿ ಮಾಡುತ್ತೇನೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 

Tamil Nadu CM MK Stalin React to Union Minister Shobha Karandlaje Statement grg
Author
First Published Mar 20, 2024, 9:27 AM IST

ಚೆನ್ನೈ(ಮಾ.20): ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ರಾಮೇಶ್ವರಂ ಕೆಫೆ' ಸ್ಪೋಟ ಪ್ರಕರಣದಲ್ಲಿ ಬಾಂಬ್ ಇಟ್ಟವರು ತಮಿಳುನಾಡಿನ ವರು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ. ಅಲ್ಲದೆ ಈ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. 

ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಶೋಭಾ, 'ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದುಕೊಂಡು ಬಾಂಬ್ ಇಡುತ್ತಾರೆ' ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಸ್ಟಾಲಿನ್ ಕಿಡಿ ಕಾರಿದ್ದಾರೆ.

A Raja: "ಭಾರತ ದೇಶವೇ ಅಲ್ಲ, ಅದೊಂದು ಉಪಖಂಡ" ಅಂದ ಡಿಎಂಕೆ ಲೀಡರ್..!

'ನಾನು ಶೋಭಾ ಕರಂದ್ಲಾಜೆ ಅವರ ಆಧಾರ ರಹಿತ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ನೀಡ ಬೇಕೆಂದರೆ ಅವರು ಒಂದೋ ಎನ್‌ಐಎ ಅಧಿಕಾರಿ ಇಲ್ಲವೇ ರಾಮೇಶ್ವರಂ ಕೆಫೆ ಅವರಾಗಿರಬೇಕು. ಆದರೆ ಶೋಭಾ ಹೇಳಿಕೆ ಆಧಾರರಹಿತ. ಈ ಮಾತನ್ನು ಕನ್ನಡಿಗರು ಹಾಗೂ ತಮಿಳಿಗರು ತಿರಸ್ಕರಿಸುತ್ತಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗದ ಬಳಿ ಮನವಿ ಮಾಡುತ್ತೇನೆ. ಬಿಜೆಪಿಯಲ್ಲಿ ಪ್ರಧಾನಿ ಮೋದಿಯಿಂದ ಎಲ್ಲರೂ ಇಂಥಹ ನೀಚ ರಾಜಕೀಯವನ್ನು ಬಿಡಬೇಕು' ಎಂದಿದ್ದಾರೆ.

Follow Us:
Download App:
  • android
  • ios