ಚೆನ್ನೈ(ಫೆ.25): ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಬಹುತೇಕ ಎಲ್ಲಾ ಪಕ್ಷಗಳು ಜನರ ವಿಶ್ವಾಸ ಗಳಿಸುವ ಹಾಗೂ ಅವರ ಬೇಡಿಕೆ ಪೂರೈಸಲು ಯತ್ನಿಸುವುದರೊಂದಿಗೆ, ಅನೇಕ ಭರವಸೆಗಳನ್ನೂ ನೀಡುತ್ತಿದ್ದಾರೆ. ಹೀಗಿರುವಾಗಲೇ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಪಳನಿಸ್ವಾಮಿ ಮಾಡಿದ ಘೋಷಣೆಗಳಲ್ಲಿ ಮೊದಲನೆಯದ್ದು ನಿವೃದ್ಧಿ ವಯಸ್ಸು ಹೆಚ್ಚಿಸಿರುವುದು. ಹೌದು ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಅವಧಿಯನ್ನು 59 ರಿಂದ 60ಕ್ಕೇರಿಸಲಾಗಿದೆ.

ಸಿಎಂ ಪಳನಿಸ್ವಾಮಿ ಮಾಡಿದ ಎರಡನೇ ಪ್ರಮುಖ ಘೋಷಣೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದೆ. ಹೌದು ಕೊರೋನಾ ಕಾಲದಲ್ಲಿ ಅತೀ ಹೆಚ್ಚು ಸಮಸ್ಯೆ ಅನುಭವಿಸಿದ್ದು ವಿದ್ಯಾರ್ಥಿಗಳು. ತರಗತಿಗೆ ತೆರಳಲಾಗದೆ ಪರದಾಡಿದ್ದುಂಟು. ಹೀಗಿರುವಾಗ 9, 10 ಹಾಗೂ 11 ತರಗತಿ ವಿದ್ಯಾರ್ಥಿಗಳನ್ನು ಯಾಔಉದೇ ಪರೀಕ್ಷೆ ಇಲ್ಲದೇ, ಮುಂದಿನ ತರಗತಿಗೆ ತೇರ್ಗಡೆಗೊಳಿಸಲು ಸರ್ಕಾರ ನಿರ್ಧರಿಸಿದೆ.

ನಿಯಮ 110ರಡಿ ತಮಿಳುನಾಡು ಸಿಎಂ ಪಳನಿಸ್ವಾಮಿ ವಿಧಾನಸಭೆಯಲ್ಲಿ ಇಂತಹುದ್ದೊಂದು ಘೋಷಣೆ ಮಾಡಿದ್ದಾರೆ.

ಇನ್ನು ನಿವೃತ್ತಿ ಮಿತಿ ಸ್ಥಳೀಯ ಆಡಳಿತ ಹಾಗೂ ರಾಜ್ಯ ಸರ್ಕಾರ ಹೀಗೆ 31 ಮೇ 2021ರೊಳಗೆ ನಿವೃತ್ತಿಗೊಳ್ಳುವ ಎಲ್ಲಾ ಸರ್ಕಾರಿ ಉದ್ಯೋಗಗಿಗಳಿಗೆ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.