ಚೆನ್ನೈ, [ಏ.13] : ತಮಿಳು ನಟ ಹಾಗೂ ರಾಜಕಾರಣಿ ಜೆಕೆ ರಿತೇಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 

46 ವರ್ಷದ, ಎಐಎಡಿಎಂಕೆ ಮಾಜಿ ಸಂಸದ ಜೆಕೆ ರಿತೇಶ್ ಅವರು ಇಂದು [ಶನಿವಾರ] ತಮಿಳುನಾಡಿದ ರಾಮನಾಥಪುರಂನಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು.

ಈ ವೇಳೆ  ರಿತೇಶ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಎಐಎಡಿಎಂಕೆ ನಾಯಕ ಅಪಾರವಾದ ಅಭಿಮಾನಿಗಳು ಮತ್ತು ಕುಟುಂಬದವರನ್ನು ಅಗಲಿದ್ದಾರೆ. ಜೆಕೆ ರಿತೇಶ್ ಅವರು ಕೊನೆಯದಾಗಿ ತಮಿಳು ಚಿತ್ರ 'ಎಲ್‌ಕೆಜಿ' ಯಲ್ಲಿ ಕಾಣಿಸಿಕೊಂಡಿದ್ದರು.