ಬಹು ಪತ್ನಿತ್ವಕ್ಕೆ ಬ್ರೇಕ್: ಸರ್ಕಾರಿ ನೌಕರರು 2ನೇ ಮದುವೆಯಾಗೋಕೆ ಬೇಕೇಬೇಕು ಈ ರಾಜ್ಯ ಸರ್ಕಾರದ ಅನುಮತಿ!
ಉದ್ಯೋಗಿಯ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ದ್ವಿಪತ್ನಿತ್ವವನ್ನು ಅನುಮತಿಸಿದರೂ ಸಹ ಅಸ್ಸಾಂ ಸರ್ಕಾರದ ಅನುಮೋದನೆ ಇಲ್ಲದೆ ಮೊದಲನೇ ಪತ್ನಿ ಜೀವಂತವಾಗಿದ್ದರೆ ಎರಡನೇ ಮದುವೆಯಾಗಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದೆ.

ಗುವಾಹಟಿ (ಅಕ್ಟೋಬರ್ 27, 2023): ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನನ್ನು ತರಲು ಮುಂದಾಗಿರುವ ಅಸ್ಸಾಂ ತನ್ನ ನಾಲ್ಕು ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ನಿಯಮವನ್ನು ನೆನಪಿಸಿದ್ದು, ಸರ್ಕಾರದ ಅನುಮತಿಯಿಲ್ಲದೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ ಎಂದಿದೆ.
ಉದ್ಯೋಗಿಯ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ದ್ವಿಪತ್ನಿತ್ವವನ್ನು ಅನುಮತಿಸಿದರೂ ಸಹ ಅಸ್ಸಾಂ ಸರ್ಕಾರದ ಅನುಮೋದನೆ ಇಲ್ಲದೆ ಮೊದಲನೇ ಪತ್ನಿ ಜೀವಂತವಾಗಿದ್ದರೆ ಎರಡನೇ ಮದುವೆಯಾಗಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದೆ. ಒಂದು ವೇಳೆ, ಸರ್ಕಾರದ ಅನುಮತಿ ಪಡೆಯದೆ 2ನೇ ಮದುವೆಯಾದರೆ ಕಡ್ಡಾಯ ನಿವೃತ್ತಿ ಸೇರಿದಂತೆ ದೊಡ್ಡ ಮೊತ್ತದ ದಂಡ ವಿಧಿಸುತ್ತದೆ ಎಂದು ಅಸ್ಸಾಂ ರಾಜ್ಯ ವೈಯಕ್ತಿಕ ಇಲಾಖೆಯು ಅಕ್ಟೋಬರ್ 20 ರ ಕಚೇರಿಯ ಜ್ಞಾಪಕ ಪತ್ರವು ಸೂಚಿಸಿದೆ.
ಇದನ್ನು ಓದಿ: ಬಾಲ್ಯವಿವಾಹಕ್ಕೆ ಬ್ರೇಕ್ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್ ಮಾಡಲು ಮುಂದಾದ ಅಸ್ಸಾಂ ಸಿಎಂ
ದ್ವಿಪತ್ನಿ ವಿವಾಹಗಳು ಸರ್ಕಾರಿ ನೌಕರನ ದುರ್ನಡತೆಯಾಗಿದೆ ಮತ್ತು ಸಮಾಜದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಜ್ಞಾಪಕ ಪತ್ರವು ಹೇಳುತ್ತದೆ. ಯಾವುದೇ ಪುರುಷ ಉದ್ಯೋಗಿ ತನ್ನ ಪತ್ನಿ ಜೀವಂತವಾಗಿದ್ದರೆ ಎರಡನೇ ಮದುವೆಯಾಗಲು ಸಾಧ್ಯವಿಲ್ಲ ಮತ್ತು ಸರ್ಕಾರದ ಪೂರ್ವಾನುಮತಿಯಿಲ್ಲದೆ ಇನ್ನೂ ಜೀವಂತವಾಗಿರುವ ಹೆಂಡತಿಯನ್ನು ಹೊಂದಿರುವ ಪುರುಷನನ್ನು ಯಾವುದೇ ಮಹಿಳಾ ಸಿಬ್ಬಂದಿ ಮದುವೆಯಾಗಬಾರದು ಎಂದೂ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
ವೈಯಕ್ತಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅವರು ಹೊರಡಿಸಿದ ಜ್ಞಾಪನಾ ಪತ್ರದಲ್ಲಿ, ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1965 ರ ನಿಯಮ 26 ರ ಪ್ರಕಾರ “ಹೆಂಡತಿ ಜೀವಂತವಾಗಿರುವಾಗ ಯಾವುದೇ ಸರ್ಕಾರಿ ನೌಕರನು ಮೊದಲು ಅನುಮತಿಯನ್ನು ಪಡೆಯದೆ ಮತ್ತೊಂದು ವಿವಾಹ ಮಾಡಿಕೊಳ್ಳಬಾರದು’ ಎಂದಿದೆ. ಒಂದು ವೇಳೆ, ಈ ನಿಯಮ ಉಲ್ಲಂಘಿಸಿದ್ರೆ, ಅಧಿಕಾರಿಗಳು, ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದರ ಜೊತೆಗೆ, ದ್ವಿಪತ್ನಿ ವಿವಾಹದಲ್ಲಿ ಕಂಡುಬರುವ ಉದ್ಯೋಗಿಯ ವಿರುದ್ಧ ನ್ಯಾಯಾಲಯದ ಮೂಲಕ ದಂಡದ ಕ್ರಮವನ್ನು ವಿಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಈ Pakistaniಗೆ ಒಂದಲ್ಲ 5 ಬಾರಿ ಮದುವೆ: ಈತನಿಗೆ 11 ಮಕ್ಕಳು, 40 ಮೊಮ್ಮಕ್ಕಳು..!
ಸರ್ಕಾರವು ಅಂತಹ ವಿವಾಹಗಳನ್ನು ಗಮನಾರ್ಹವಾದ ಸಾಮಾಜಿಕ ಪರಿಣಾಮಗಳೊಂದಿಗೆ ಘೋರ ದುರ್ನಡತೆ ಎಂದು ಪರಿಗಣಿಸುತ್ತದೆ. ಈ ನೀತಿಯು ಪುರುಷ ಮತ್ತು ಮಹಿಳಾ ಸರ್ಕಾರಿ ನೌಕರರಿಗೂ ಸಹ ಅನ್ವಯಿಸುತ್ತದೆ. ಇದು ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ಅನ್ನು ಆಧರಿಸಿದೆ ಎಂದೂ ಅಸ್ಸಾಂ ಸರ್ಕಾರ ತಿಳಿಸಿದೆ.