Asianet Suvarna News Asianet Suvarna News

ಈ Pakistaniಗೆ ಒಂದಲ್ಲ 5 ಬಾರಿ ಮದುವೆ: ಈತನಿಗೆ 11 ಮಕ್ಕಳು, 40 ಮೊಮ್ಮಕ್ಕಳು..!

ಪಾಕಿಸ್ತಾನದ ಈ ವ್ಯಕ್ತಿ ಒಬ್ಬರಲ್ಲ ಇಬ್ಬರಲ್ಲ, ಬರೋಬ್ಬರಿ ಐದು ಬಾರಿ ಮದುವೆಯಾಗಿದ್ದಾನೆ. ಈತನ ಕುಟುಂಬದಲ್ಲೇ ಒಟ್ಟು 62 ಸದಸ್ಯರಿದ್ದಾರಂತೆ. ಇವರ ಯೂಟ್ಯೂಬ್‌ ಸಂದರ್ಶನದ ವಿಡಿಯೋ ವೈರಲ್‌ ಆಗಿದೆ.

shaukat pakistani man who married for the 5th time alongside his daughters has a family of 62 ash
Author
First Published Oct 1, 2022, 6:34 PM IST

ಎಷ್ಟೋ ಜನ ನಿಜವಾದ ಪ್ರೀತಿ ಸಿಗಲಿಲ್ಲವೆಂದು ಮದುವೆಯಾಗದೆ (Marriage) ಉಳಿಯುತ್ತಾರೆ. ಇನ್ನು, 1 ಅಥವಾ 2 ಮದುವೆಯಾಗೋದನ್ನು ಕೇಳಿರ್ತೀರಾ. ಆದರೆ, ಇಲ್ಲೊಬ್ಬರು ಪಾಕಿಸ್ತಾನಿ (Pakistan) ವ್ಯಕ್ತಿ ಬರೋಬ್ಬರಿ 5 ಮದುವೆಯಾಗಿದ್ದಾರೆ. 11 ಮಕ್ಕಳ ತಂದೆಯಾಗಿರುವ ಶೌಕತ್ ಕಳೆದ ವರ್ಷವೇ 5ನೇ ವಿವಾಹವಾಗಿದ್ದರು. ಇನ್ನು, ಈ ಹಿಂದಿನ 4 ಪತ್ನಿಯರಿಂದ 10 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ, 40 ಮೊಮ್ಮಕ್ಕಳು ಮತ್ತು 11 ಅಳಿಯಂದಿರು ಇದ್ದಾರೆ. ಒಟ್ಟಾರೆ, ಇವರ ಕುಟುಂಬದಲ್ಲಿ ಒಟ್ಟು 62 ಸದಸ್ಯರಿದ್ದಾರೆ ಎಂದು ತಿಳಿದುಬಂದಿದೆ. ಯೂಟ್ಯೂಬರ್ (YouTuber) ಮತ್ತು ಕಂಟೆಂಟ್ ಕ್ರಿಯೇಟರ್ (Content Creator) ಯಾಸಿರ್ ಶಮಿ ಅವರೊಂದಿಗೆ 56 ವರ್ಷದ ಶೌಕತ್‌ನ ಮಾರ್ಚ್ 2021 ರ ಸಂದರ್ಶನವು ಇತ್ತೀಚೆಗೆ ವೈರಲ್ ಆದ ನಂತರ ಅವರ ಜೀವನದ ಕಥೆ ಬೆಳಕಿಗೆ ಬಂದಿದೆ.

ಇನ್ನು, ಅಪ್ಪ 5ನೇ ಮದುವೆಯಾಗುವ ಮೊದಲೇ, ಆತನ 8 ಹೆಣ್ಣು ಮಕ್ಕಳು (Daughters) ಹಾಗೂ ಏಕೈಕ ಪುತ್ರನಿಗೆ ಮದುವೆಯಾಗಿವೆ. ಇನ್ನು, ತನ್ನ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳು ತನಗೆ ಐದನೇ ಬಾರಿ ಹಾಗೂ ಕೊನೆಯ ಬಾರಿ ಮದುವೆಯಾಗಲು ಒತ್ತಾಯ ಮಾಡಿದರು ಎಂದು ಅವರು ಪಾಕ್‌ ಮಾಧ್ಯಮಕ್ಕೆ ವಿವರಿಸಿದರು. ಅಲ್ಲದೆ, ಆ ಇಬ್ಬರು ಹೆಣ್ಣು ಮಕ್ಕಳು ಮದುವೆಯಾದ ದಿನವೇ ಅವರ ತಂದೆಯ 5ನೇ ಮದುವೆಯೂ ಆಗಿದೆ.

ಇದನ್ನು ಓದಿ: Africa: ಈತನಿಗೆ 15 ಪತ್ನಿಯರು, 107 ಮಕ್ಕಳು; ಜಗತ್ತಿನ ಅತಿ ದೊಡ್ಡ ಕುಟುಂಬಗಳಲ್ಲಿ ಇದೂ ಒಂದು..!

ಈ ಮಧ್ಯೆ, ಈ ಮದುವೆಯ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಆತನ 5ನೇ ಪತ್ನಿಗೆ ಕೇಳಿದ್ದಕ್ಕೆ, ಅವರು ತಾನು ಸಂತೋಷವಾಗಿದ್ದೇನೆ ಮತ್ತು ಸಾಮಾನ್ಯಕ್ಕಿಂತ ದೊಡ್ಡ ಕುಟುಂಬದೊಂದಿಗೆ ಇದ್ದೇನೆ ಎಂದು ಹೇಳಿದರು. ಹಾಗೆ, ಅವರ ಮನೆಯಲ್ಲಿ ಇಬ್ಬರು 2 ರೋಟಿ ತಿಂದರೂ ಒಂದು ಹೊತ್ತಿಗೆ 124 ರೋಟಿ ಅಥವಾ 124 ಚಪಾತಿ ಮಾಡಬೇಕು ಎಂದೂ ಅವರು ಹೇಳಿಕೊಂಡರು. 

ಇತ್ತೀಚೆಗೆ, 63 ವರ್ಷ ವಯಸ್ಸಿನ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು  "ಸ್ಥಿರತೆ" ಗಾಗಿ 53 ಬಾರಿ ಮದುವೆಯಾಗಿದ್ದೇನೆ ಮತ್ತು ಸಂತೋಷಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದರು. "ನಾನು ಮೊದಲ ಬಾರಿಗೆ ಮದುವೆಯಾದಾಗ, ನಾನು ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಯೋಜಿಸಿರಲಿಲ್ಲ.   ಏಕೆಂದರೆ ನಾನು ಆರಾಮದಾಯಕವಾಗಿದ್ದೆ ಮತ್ತು ಮಕ್ಕಳನ್ನು ಹೊಂದಿದ್ದೆ ಎಂದೂ ಅಬು ಅಬ್ದುಲ್ಲಾ ಮಾಧ್ಯಮವೊಂದಕ್ಕೆ ಹೇಳಿದ್ದರು. 

ಆದರೂ, ತನಗಿಂತ 6 ವರ್ಷ ದೊಡ್ಡ ಹೆಂಡತಿಯೊಂದಿಗಿನ ಜಗಳದ ಕಾರಣದಿಂದ ಮತ್ತೊಬ್ಬ ಮಹಿಳೆಯನ್ನು ಮದುವೆಯಾದೆ. ಆದರೆ, ಶೀಘ್ರದಲ್ಲೇ, ಎರಡನೇ ಸಂಗಾತಿಯೊಂದಿಗೂ ಪರಸ್ಪರ ಸಹಬಾಳ್ವೆ ನಡೆಸಲು ಸಮಸ್ಯೆ ಹೊಂದಿದ್ದೆ. ನಂತರ, ಮತ್ತೆ 2 ವಿವಾಹವಾಗಿ ಮೊದಲನೆಯ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇಷ್ಟಕ್ಕೇ ಸುಮ್ಮನಾಗದ ಇವರು ಅಂತಿಮವಾಗಿ ತನ್ನನ್ನು ಸಂತೋಷಪಡಿಸುವ ಪತ್ನಿಯನ್ನು ಕಂಡುಕೊಳ್ಳುವವರೆಗೂ ದಶಕಗಳ ಕಾಲ ಮದುವೆಯಾಗುತ್ತಲೇ ಹೋದರು. ಹೀಗೆ, ಒಟ್ಟಾರೆ 53 ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು
  
ಇದೇ ರೀತಿ, ಆಫ್ರಿಕಾದ ಕೀನ್ಯಾದ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬರು 15 ಪತ್ನಿಯರು ಮತ್ತು 107 ಮಕ್ಕಳೊಂದಿಗೆ ಒಟ್ಟಿಗೆ ಜೀವನ ನಡೆಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿತ್ತು. ಆಫ್ರಿಕಾದ ಡೇವಿಡ್‌ ಸಕಾಯೋ ಕಲುಹಾನಾ ಎಂಬ ಈ ವ್ಯಕ್ತಿಗೆ ವಯಸ್ಸು 61 ಆಗಿದ್ದು, ಪಶ್ಚಿಮ ಕೀನ್ಯಾದಲ್ಲಿ ತನ್ನ 15 ಜನ ಹೆಂಡತಿಯರೊಂದಿಗೆ ವಾಸವಾಗಿದ್ದಾನೆ. ಈತ ತನ್ನನ್ನು 700 ಜನ ಹೆಂಡತಿಯರು 300 ಪ್ರೇಯಸಿಯರಿದ್ದ ಕಿಂಗ್‌ ಸೊಲೋಮನ್‌ ಜೊತೆ ಹೋಲಿಸಿಕೊಂಡಿದ್ದಾರೆ. 

Follow Us:
Download App:
  • android
  • ios