'ಸಯ್ಯದ್ ಭಾಯ್ ಗುಡ್ ಇನ್ ಬೆಡ್..' ವೈರಲ್ ಆಯ್ತು ಬೆಂಗಳೂರು ಕಾರ್ಪೆಂಟರ್ ಗೂಗಲ್ ರಿವ್ಯೂ!
ಬೆಂಗಳೂರು ಮೂಲದ ಕಾರ್ಪೆಂಟರ್ ಒಬ್ಬರಿಗೆ ನೀಡಿರುವ ಗೂಗಲ್ ರಿವ್ಯೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗ್ರಾಹಕ ನೀಡಿರುವ ರಿವ್ಯೂ ಅಲ್ಲಿ, ಕಾರ್ಪೆಂಟರ್ 'ಗುಡ್ ಇನ್ ಬೆಡ್' ಎಂದು ಬರೆದಿದ್ದಾರೆ.

ಬೆಂಗಳೂರು (ಅ.11): ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾಗಳು ಹಾಗೂ ಅದಕ್ಕೆ ಬರುವ ಕಾಮೆಂಟ್ಸ್ ಬಹಳ ಮಜವಾಗಿರುತ್ತದೆ. ಇದರ ನಡುವೆ ಬೆಂಗಳೂರಿನ ಕಾರ್ಪೆಂಟರ್ ಒಬ್ಬರಿಗಾಗಿ ಮಾಡಿರುವ ಗೂಗಲ್ ರಿವ್ಯೂನ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಗೂಗಲ್‌ನಲ್ಲಿ ಒಂದು ವರ್ಷದ ಹಿಂದೆ ಬಂದಿರುವ ರಿವ್ಯೂ ಆಗಿದೆ. ಆದರೆ, ಇದನ್ನು ಗಮನಿಸಿದ ಯಾರೋ ಒಬ್ಬರು ಸ್ಕ್ರೀನ್‌ಶಾಟ್ ತೆಗೆದು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಿವ್ಯೂ ಬರೆದ ರೀತಿಯನ್ನು ಕಂಡು ಬಿದ್ದು ಬಿದ್ದು ನಗುವಂತೆ ಮಾಡಿದೆ. ಎಕ್ಸ್‌ನಲ್ಲಿ ಈ ರಿವ್ಯೂನ ಸ್ಕ್ರೀನ್ ಶಾಟ್‌ಅನ್ನು ಪೋಸ್ಟ್ ಮಾಡಲಾಗಿದ್ದು, ಬೆಂಗಳೂರಿನ ಕಾರ್ಪೆಂಟರ್ ಶಾಪ್‌ಗೆ ಬಂದಿರುವ ರಿವ್ಯೂ ಇದು ಎಂದು ನಗುವ ಇಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಗೂಗಲ್ ರಿವ್ಯೂ ಪೇಜ್‌ನಲ್ಲಿ ಕಾರ್ಪೆಂಟರ್ ಶಾಪ್ ನೀಡುವ ಸರ್ವೀಸ್, 'ಫರ್ನೀಚರ್ ಎಸೆಂಬ್ಲಿ' ಎಂದು ಬರೆಯಲಾಗಿದೆ. ಅಂದರೆ, ಪೀಠೋಪಕರಣಗಳನ್ನು ಜೋಡಿಸುವ ಕೆಲಸ. ಬಡಗಿಗೆ "ವೃತ್ತಿಪರತೆ, ಸಮಯಪ್ರಜ್ಞೆ, ಗುಣಮಟ್ಟ, ಸ್ಪಂದಿಸುವಿಕೆ ಮತ್ತು ಮೌಲ್ಯ" ತೋರಿಸಿದ ಕಾರಣಕ್ಕೆ ಪಾಸಿಟಿವ್ ರಿವ್ಯೂ ಅನ್ನೂ ನೀಡಲಾಗಿದೆ. ಇದರ ಬೆನ್ನಲ್ಲಿಯೇ ಬರೆದಿರುವ ರಿವ್ಯೂನಲ್ಲಿ 'ಸಯ್ಯದ್ ಭಾಯ್ ಗುಡ್ ಇನ್ ಬೆಡ್' ಎಂದು ಬರೆಯಲಾಗಿದೆ. ವಿಚಿತ್ರವಾದರೂ, ಇಂಥದ್ದೊಂದು ರಿವ್ಯೂ ಬರೆದಿರುವುದು ನಿಜ. ಅದರ ಬೆನ್ನಲ್ಲಿಯೇ ಮತ್ತೊಂದು ಸಾಲು ಬರೆದಿರುವ ಆದ, 'ಬೆಸ್ಟ್ ಬೆಡ್ಡರ್ ಇನ್ ಬೆಂಗಳೂರು..' ಎಂದು ಬರೆದಿದ್ದಾನೆ. ಇನ್ನು ಈ ರಿವ್ಯೂಗೆ ಪ್ರತಿಕ್ರಿಯೆ ನೀಡಿರುವ ಸಯ್ಯದ್ ಭಾಯ್, ಥ್ಯಾಂಕ್ಸ್ ಎಂದು ಬರೆದಿದ್ದಾರೆ. ಸಾಮಾನ್ಯವಾಗಿ 'ಗುಡ್ ಇನ್ ಬೆಡ್' ಅನ್ನು, ವ್ಯಕ್ತಿಯೊಬ್ಬ ಸೆಕ್ಸ್‌ನಲ್ಲಿ ಉತ್ತಮವಾಗಿದ್ದರೆ ಆತನನ್ನು ಹೊಗಳಲು ಬಳಸಲಾಗುತ್ತದೆ.
ಅಕ್ಟೋಬರ್ 10 ರಂದು ಮಾಡಲಾಗಿರುವ ಈ ಟ್ವೀಟ್‌ಗೆ ಇಲ್ಲಿಯವರೆಗೂ 2 ಲಕ್ಷ ವೀವ್ಸ್‌ಗಳು ಬಂದಿದ್ದು, ಸಾಕಷ್ಟು ಮಂದಿ ಫನ್ನಿ ಕಾಮೆಂಟ್ ಬರೆದಿದ್ದಾರೆ. 'ಸಯ್ಯದ್ ಭಾಯ್ ಏನ್ ಬೇಕಾದರೂ ಮಾಡ್ತಾರೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, 'ಸಯ್ಯದ್ ಭಾಯ್ ಮಂಚ ಮುರಿಯುವ ಕೆಲಸ ಮಾಡೋದಿಲ್ಲ, ಬದಲಿಗೆ ನೀವು ಏನು ಬೇಕಾದ್ರೂ ಮಾಡಿ, ಇವರು ಮಾಡಿಕೊಟ್ಟ ಮಂಚ ಮುರಿಯೋದೇ ಇಲ್ಲ' ಎಂದು ಬರೆದಿದ್ದಾರೆ.
ಇನ್ನೊಬ್ಬ ವ್ಯಕ್ತಿ, 'ಅಬ್ಬಾ.. ಕೊನೆಗೂ ಆತ 2ನೇ ಸಾಲು ಬರೆದಿದ್ದಾರೆ. ಕೇವಲ ಮೊದಲ ಸಾಲು ಬರೆದಿದ್ದರೆ, ಅದು ಶಾಪ್‌ನ ರಿವ್ಯೂ ಆಗಿರ್ತಿರಲಿಲ್ಲ' ಎಂದು ಬರೆದಿದ್ದಲ್ಲದೆ, ಶಾಪ್‌ನ ಮಾಲೀಕ ಇದಕ್ಕೆ ಥ್ಯಾಂಕ್ಸ್ ಎಂದೂ ರಿಪ್ಲೈ ಮಾಡಿದ್ದನ್ನು ಗೇಲಿ ಮಾಡಿದ್ದಾರೆ. ಈತನ ರಿವ್ಯೂ ನೋಡಿಕೊಂಡು ಹೋದಲ್ಲಿ, ಬಹುಶಃ ಅವರ ಅಂಗಡಿಯ ಮುಂದೆ ಈಗ ದೊಡ್ಡ ಸಾಲು ಆಗಿರಬಹುದು ಎಂದಿದ್ದಾರೆ.
ಸೀರಿಯಲ್‌ನಲ್ಲಿ ಗೌರಮ್ಮ, ರಿಯಲ್‌ನಲ್ಲಿ ಬಿಚ್ಚಮ್ಮ; ನಟಿ ಜ್ಯೋತಿ ರೈ ಬೋಲ್ಡ್ ಫೋಟೋಸ್ ವೈರಲ್
ಈ ಪೋಸ್ಟ್‌ಗೆ ಒಂದು ವರ್ಷವಾಗಿದೆ, ಸಯ್ಯದ್ ಭಾಯ್ ಹ್ಯಾಪಿ ಬೆಡ್ಡಿಂಗ್ ಆನಿವರ್ಸರಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಸಯ್ಯದ್ ಭಾಯ್ ಅವರ ಫೋನ್ ರಿಂಗ್ ಆಗೋದು ಈಗಲೂ ನಿಂತಿರಲಿಕ್ಕಿಲ್ಲ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಈಗ ಸಯ್ಯದ್ ಭಾಯ್ ಗುಡ್ ಇನ್ ಬೆಡ್ ಎಂದು ಎಲ್ಲರಿಗೂ ಗೊತ್ತಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ.
BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!