ಸ್ವಿಜರ್‌ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಬಂಡವಾಳದ ಪ್ರಮಾಣ 2021ಕ್ಕೆ ಹೋಲಿಸಿದರೆ ಶೇ.11ರಷ್ಟುಕುಸಿತ ಕಂಡಿದ್ದು, ಪ್ರಸ್ತುತ 30 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ನ ವಾರ್ಷಿಕ ದತ್ತಾಂಶದಿಂದ ತಿಳಿದು ಬಂದಿದೆ. 

ನವದೆಹಲಿ/ ಜ್ಯೂರಿಚ್‌: ಸ್ವಿಜರ್‌ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಬಂಡವಾಳದ ಪ್ರಮಾಣ 2021ಕ್ಕೆ ಹೋಲಿಸಿದರೆ ಶೇ.11ರಷ್ಟುಕುಸಿತ ಕಂಡಿದ್ದು, ಪ್ರಸ್ತುತ 30 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ ಎಂದು ಬ್ಯಾಂಕ್‌ನ ವಾರ್ಷಿಕ ದತ್ತಾಂಶದಿಂದ ತಿಳಿದು ಬಂದಿದೆ. 2021ರಲ್ಲಿ ಭಾರತೀಯರು, ಭಾರತ ಮೂಲದ ಬ್ರಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರು.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಆದರೆ ಇದೀಗ ಠೇವಣಿಯ ಪ್ರಮಾಣ ಕುಸಿತ ಕಂಡಿರುವುದರಿಂದ ಇದು 30 ಸಾವಿರ ಕೋಟಿ ರು.ಗೆ ಇಳಿಕೆಯಾಗಿದೆ. 2006ರಲ್ಲಿ ಸಾರ್ವಕಾಲಿಕ ಗರಿಷ್ಠ 60 ಸಾವಿರ ಕೋಟಿ ರು.ನಷ್ಟುಭಾರತೀಯರ ಹಣ ಸ್ವಿಸ್‌ ಬ್ಯಾಂಕ್‌ನಲ್ಲಿತ್ತು.

ಭಾರ​ತದ ಜಿಡಿಪಿ ಬೆಳ​ವ​ಣಿಗೆ ದರ ಶೇ.6.3: ಫಿಚ್‌

ನವದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಬರುವ 2024ರ ಹಣಕಾಸಿನ ವರ್ಷದಲ್ಲಿ ಶೇ.6.3ರಷ್ಟುಬೆಳವಣಿಗೆಯಾಗಲಿದೆ ಇದು ಅತ್ಯಂತ ವೇಗ ಪಡೆದುಕೊಳ್ಳಲಿದೆ ಎಂದು ಜಾಗ​ತಿ​ಕ ರೇಟಿಂಗ್‌ ಏಜೆನ್ಸಿ ಫಿಚ್‌ (Global rating agency Fitch) ಭವಿಷ್ಯ ನುಡಿ​ದಿ​ದೆ. ಮಾರ್ಚ್‌ನಲ್ಲಿ ಭಾರತದ ಜಿಡಿಪಿ ಶೇ.6ರಷ್ಟು ಮಾತ್ರ ಪ್ರಗತಿ ಸಾಧಿಸಲಿದೆ ಎಂದು ಫಿಚ್‌ ಹೇಳಿತ್ತು. ಆದರೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಬೆಳವಣಿಗೆ ಪ್ರಗತಿಗೆ ಬಲ ನೀಡಿದೆ ಎಂದು ಈಗ ಫಿಚ್‌ ಹೇಳಿ​ದ್ದು, ಬೆಳ​ವ​ಣಿ​ಗೆಗೆ ಇದು ಪ್ರಮುಖ ಕಾರ​ಣ​ವಾ​ಗ​ಲಿದೆ ಎಂದಿ​ದೆ. ಈ ವರ್ಷ ಮೂಲಭೂತ ಸೌಕರ್ಯ ವಲ​ಯ​ಗ​ಳಲ್ಲಿ ಸಾಕಷ್ಟು ಖರ್ಚು ಮಾಡ​ಲಾ​ಗಿದೆ. ಇದು ಈ ಪ್ರಗತಿಗೆ ಪೂರಕವಾಗಲಿದೆ ಎಂದೂ ಅದು ನುಡಿ​ದಿ​ದೆ. ಈ ವರ್ಷದ ಮೊದಲ ಹಣಕಾಸಿನ ಅವಧಿಯಲ್ಲಿ ಆರ್‌ಬಿಐ ನಿರೀಕ್ಷೆ ಮಟ್ಟ ದಾಟಿ ಶೇ.6.1ರಷ್ಟು ಬೆಳವಣಿಗೆ ಆಗಿತ್ತು. ಹೀಗಾ​ಗಿ ಈ ವರ್ಷದ ಜಿಡಿಪಿ ಶೇ.6.5ರ ದರ​ದಲ್ಲಿ ಪ್ರಗತಿ ಕಾಣ​ಲಿ​ದೆ ಎಂದು ಆರ್‌​ಬಿ​ಐ ಅಂದಾ​ಜಿ​ಸಿದೆ.

ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌

ಕೋವಿನ್‌ ಮಾಹಿತಿ ಸೋರಿಕೆ: ಅಪ್ರಾಪ್ತ ಸೇರಿ ಬಿಹಾರದ ಇಬ್ಬರ ಸೆರೆ

ನವದೆಹಲಿ: ಸರ್ಕಾರದ ಕೋವಿನ್‌ ಪೋರ್ಟಲ್‌ನಿಂದ ಕೋವಿಡ್‌ ಲಸಿಕೆ ಪಡೆದವರ ಮಾಹಿತಿ ಸೋರಿಕೆಯಾಗಿ, ಪೋರ್ಟಲ್‌ ಹ್ಯಾಕ್‌ ಆಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಿಹಾರ ಮೂಲದ ಓರ್ವ ವ್ಯಕ್ತಿ ಮತ್ತು ಒಬ್ಬ ಅಪ್ರಾಪ್ತನನ್ನು ಬಂಧಿಸಲಾಗಿದೆ. ವ್ಯಕ್ತಿಯು ಟೆಲಿಗ್ರಾಮ್‌ ಆ್ಯಪ್‌ (Teligram App) ಬಳಸಿ ಕೋವಿನ್‌ನ ದತ್ತಾಂಶಗಳನ್ನು ಅನಧಿಕೃತ ವಾಗಿ ಸೋರಿಕೆ ಮಾಡಿದ್ದರು. ಬಂಧಿ​ತರಲ್ಲಿ ಒಬ್ಬನ ತಾಯಿ ವೈದ್ಯ​ಕೀಯ ಸಿಬ್ಬಂದಿ​ಯಾ​ಗಿದ್ದು, ಆಕೆ​ ಕೋವಿನ್‌ ಖಾತೆ​ಯ ವೆಬ್‌​ಸೈ​ಟ್‌ನ ಪಾಸ್‌​ವರ್ಡ್‌ ಬಳ​ಸಿ​ಕೊಂಡು ಅದ​ರ​ಲ್ಲಿನ ಮಾಹಿತಿ ಕದ್ದಿದ್ದರು ಹಾಗೂ ಟೆಲಿ​ಗ್ರಾಂನಲ್ಲಿ ಮಾಹಿತಿ ಸೋರಿಕೆ ಮಾಡಿ​ದ್ದರು ಎಂದು ಪೊಲೀ​ಸರು ಹೇಳಿ​ದ್ದಾ​ರೆ. ಇತ್ತೀ​ಚೆಗೆ ಕೋವಿನ್‌ನ​ಲ್ಲಿನ ಕೆಲವರ ಮಾಹಿತಿ ಸೋರಿಕೆ ಆಗಿದೆ ಎಂಬ ಆರೋ​ಪ​ಗಳು ಕೇಳಿ​ಬಂದ ಬೆನ್ನಲ್ಲೇ ಜನರ ವೈಯಕ್ತಿಕ ಮಾಹಿತಿ ಬಗ್ಗೆ ಸುರಕ್ಷತೆ ಇಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿದ್ದವು. ಆದರೆ ಪೋರ್ಟಲ್‌ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿ​ತ್ತು.

ಇಲ್ಲಿದೆ 100 ಬೋಗಿಗಳ ವಿಶ್ವದ ಅತಿ ಉದ್ದದ ರೈಲು... ದಾಖಲೆ ಬರೆದ ಸ್ವಿಸ್ ಸಂಸ್ಥೆ