ಬ್ಯಾಂಕಾಕ್‌ನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನದ ಸಿಬ್ಬಂದಿಗೆ ಕುಡಿದು ಕಿರುಕುಳ ನೀಡಿದ ಆರೋಪದಡಿ ಸ್ವೀಡನ್‌ನ 63 ವರ್ಷದ ಪ್ರಜೆಯನ್ನು ಗುರುವಾರ ಬಂಧಿಸಲಾಗಿದೆ.
ಮುಂಬೈ: ವಿಮಾನದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ ಪ್ರಕರಣಗಳು ಮುಂದುವರಿದಿವೆ. ಬ್ಯಾಂಕಾಕ್‌ನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನದ ಸಿಬ್ಬಂದಿಗೆ ಕುಡಿದು ಕಿರುಕುಳ ನೀಡಿದ ಆರೋಪದಡಿ ಸ್ವೀಡನ್‌ನ 63 ವರ್ಷದ ಪ್ರಜೆಯನ್ನು ಗುರುವಾರ ಬಂಧಿಸಲಾಗಿದೆ. ಈತನನ್ನು ರಿಕ್ ಹರಾಲ್ಡ್ ಜೋನಸ್(63) ಎಂದು ಗುರುತಿಸಲಾಗಿದ್ದು, ವಿಮಾನ ಮುಂಬೈನಲ್ಲಿ ಇಳಿಯುತ್ತಿದ್ದಂತೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಈತ ಮಾಡಿದ್ದೇನು?:
ವಿಮಾನದಲ್ಲಿ ಊಟ ನೀಡುತ್ತಿದ್ದಾಗ 24 ವರ್ಷದ ವಿಮಾನ ಸಿಬ್ಬಂದಿ ಜೊತೆ ಈ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ. ಆತ ಸೀ ಫುಡ್‌ಗಾಗಿ (sea food) ಬೇಡಿಕೆ ಇಟ್ಟ, ಆದರೆ ಸೀಫುಡ್ ಇಲ್ಲ ಎಂದು ನಾನು ಆತನಿಗೆ ಚಿಕನ್ (chicken) ನೀಡಿದೆ. ಈ ವೇಳೆ ಆತ ನನ್ನ ಕೈಹಿಡಿದು ಎಳೆದ. ಇತರ ಪ್ರಯಾಣಿಕರ ನಡುವೆಯೇ ನನಗೆ ಕಿರುಕುಳ ನೀಡಿದ. ನಾನು ಕಿರುಚಿದ ಬಳಿಕ ತನ್ನ ಸೀಟಿಗೆ ಹಿಂದಿರುಗಿದ ಎಂದು ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 3 ತಿಂಗಳಲ್ಲಿ ಇದು ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ವಿದೇಶಿ ಪ್ರಜೆಗಳು ಬಂಧಿತರಾಗುತ್ತಿರುವ 8ನೇ ಪ್ರಕರಣ ಇದಾಗಿದೆ. ಇತ್ತೀಚೆಗಷ್ಟೇ ವಿಮಾನಗಳಲ್ಲಿ ಸಹ ಪ್ರಯಾಣಿಕರ ಮೇಲೆ ವಾಂತಿ ಮಾಡಿದ, ಮೂತ್ರ (Urinate) ಮಾಡಿದ ಪ್ರಕರಣಗಳು ವರದಿಯಾಗಿದ್ದವು.
ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ ಕೋಳ!
ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಲ್ಲಿ ವಾಂತಿ, ಮಲ ವಿಸರ್ಜಿಸಿದ ಪ್ರಯಾಣಿಕ
ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಪ್ರಯಾಣಿಕರು ಓಡಾಟುವ ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದಾನಲ್ಲದೇ ಶೌಚಾಲಯದ ಸುತ್ತ ಮಲ ವಿಸರ್ಜನೆ ಮಾಡಿ ಉಳಿದ ಪ್ರಯಾಣಿಕರಿಗೆ ತೀವ್ರ ಅಸಹ್ಯ ಮತ್ತು ಮುಜುಗರ ಉಂಟು ಮಾಡಿದ್ದಾನೆ. ಘಟನೆ ಕುರಿತು ಟ್ವೀಟರ್‌ನಲ್ಲಿ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಇತ್ತೀಚೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರು ಪಾನಮತ್ತರಾಗಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಂತಹ ಅಸಹ್ಯಕರ ಘಟನೆಗಳನ್ನೇ ನೆನಪಿಸುವಂತಿದೆ.
ಬೆಂಗಳೂರು ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿದ ಯುವಕ: ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ
ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಭಾಸ್ಕರ್ ದೇವ್ ಕೊನ್ವಾರ್ ಎಂಬುವವರು ಟ್ವೀಟರ್‌ನಲ್ಲಿ ಘಟನೆಯ ಫೋಟೊ ಹಂಚಿಕೊಂಡಿದ್ದು, ವಿಮಾನದ ಮಹಿಳಾ ಸಿಬ್ಬಂದಿಗಳು ಕೂಡಲೇ ಇದನ್ನು ಶುಚಿಗೊಳಿಸಿದರು. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಸೆಲ್ಯೂಟ್ ಗರ್ಲ್ಸ್ ಪವರ್ ಎಂದು ಬರೆದುಕೊಂಡಿದ್ದಾರೆ. ಸಿಬ್ಬಂದಿಗಳು ಕೈಕವಚ ಮತ್ತು ಮಾಸ್ಕ್ ಧರಿಸಿ ಪಾನಮತ್ತ ಮಾಡಿದ ವಾಂತಿಯನ್ನು ಶುಚಿಗೊಳಿಸಿ ಸ್ಪ್ರೇ ಮಾಡುತ್ತಿರುವ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ಮಾರ್ಚ್ 26 ರಂದು ಈ ಘಟನೆ ನಡೆದಿದೆ.
