Asianet Suvarna News Asianet Suvarna News

UP Election 2022 : ಬಿಜೆಪಿ ತೊರೆದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಅರೆಸ್ಟ್ ವಾರಂಟ್!

2014ರಲ್ಲಿ ದ್ವೇಷ ಭಾಷಣ ನಡೆಸಿದ್ದ ಸ್ವಾಮಿ ಪ್ರಸಾದ್ ಮೌರ್ಯ
ಮಂಗಳವಾರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.
8 ವರ್ಷ ಹಿಂದಿನ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಜಾರಿ
 

Swami Prasad Maurya who quit the Yogi Adityanath government in Uttar Pradesh  now faces arrest over a hate speech san
Author
Bengaluru, First Published Jan 12, 2022, 6:38 PM IST

ಲಖನೌ (ಜ. 12): ಯೋಗಿ ಆದಿತ್ಯನಾಥ್ ( Yogi Adityanath ) ಸರ್ಕಾರದಲ್ಲಿ ಕಾರ್ಮಿಕ, ಉದ್ಯೋಗ, ಸಮನ್ವಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ವಿರುದ್ಧ ಅರೆಸ್ಟ್ ವಾರಂಟ್ (Arrest Warrant)ಜಾರಿಯಾಗಿದೆ. 2014ರಲ್ಲಿ ದ್ವೇಷಭಾಷಣ (hate speech) ನಡೆಸಿದ್ದ ಕುರಿತಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಾಗಿ ಎಂಟು ವರ್ಷದ ಬಳಿಕ ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ವಿಶೇಷವೆಂದರೆ, ಬಿಜೆಪಿ (BJP) ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷವನ್ನು ಸೇರುವ ಹಾದಿಯಲ್ಲಿರುವ ಅವರ ವಿರುದ್ಧ ಈ ವಾರಂಟ್ ಬಂದಿದೆ. ಸುಲ್ತಾನ್ ಪುರದಲ್ಲಿ (Sulthanpur) ಬಂಧನ ವಾರಂಟ್ ಜಾರಿಯಾಗಿದ್ದರೂ, ಅವರು ಈವರೆಗೂ ಹಾಜರಾಗದ ಕಾರಣ ಇನ್ನೂ ಬಂಧನವಾಗಿಲ್ಲ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೌರ್ಯ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಹಾಜರಾಗಲಿಲ್ಲ. ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಪ್ರಕರಣದಲ್ಲಿ ಜನವರಿ 24 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. 2014ರಲ್ಲಿ ಅವರು ದ್ವೇಷಭಾಷಣ ನಡೆಸುವ ವೇಳೆ ಮಾಯವತಿ (Mayawati) ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ನಾಯಕರಾಗಿದ್ದರು.

"ಮದುವೆಯ ಸಂದರ್ಭದಲ್ಲಿ ಗೌರಿ ಅಥವಾ ಗಣೇಶನನ್ನು ಪೂಜಿಸಬಾರದು. ಇದು ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದಾರಿತಪ್ಪಿಸಲು ಮತ್ತು ಗುಲಾಮರನ್ನಾಗಿ ಮಾಡಲು ಮೇಲ್ಜಾತಿ ಮಾಡಿರುವ ಪಿತೂರಿಯಾಗಿದೆ" ಎಂದು ಸ್ವಾಮಿ ಪ್ರಸಾದ್ ಮೌರ್ಯ 2014ರಲ್ಲಿ ತಾವು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದ್ದರು.  2016 ರಲ್ಲಿ ಅಲಹಾಬಾದ್ ಹೈಕೋರ್ಟ್ ಇವರ ವಿರುದ್ಧ ಹೊರಡಿಸಲಾಗಿದ್ದ ಅರೆಸ್ಟ್ ವಾರಂಟ್ ಗೆ ತಡೆ ನೀಡಿತ್ತು. ಅಂದಿನಿಂದ ಈ ಪ್ರಕರಣದಲ್ಲಿ ಸಾಕಷ್ಟು ಬಾರಿ ವಿಚಾರಣೆಗಳು ನಡೆದಿವೆ. ಜನವರಿ 6 ರಂದು ಸುಲ್ತಾನ್ ಪುರ ಕೋರ್ಟ್, ಜನವರಿ 12 ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ, ಅವರು ಹಾಜರಾಗದ ಹಿನ್ನಲೆಯಲ್ಲಿ ಅವರ ವಾರಂಟ್ ಅನ್ನು ಪರಿಷ್ಕರಣೆ ಮಾಡಲಾಗಿದೆ.

Uttar Pradesh elections : ಬಿಜೆಪಿಗೆ ಆಘಾತ, ಒಂದೇ ದಿನ ನಾಲ್ವರು ಶಾಸಕರ ರಾಜೀನಾಮೆ!
ಹಿಂದುಳಿದ ಜಾತಿಯ ಪ್ರಬಲ ನಾಯಕರಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿರುವ ಬಿಜೆಪಿ ಆಸೆಗೆ ಬಹುದೊಡ್ಡ ಪೆಟ್ಟು ನೀಡಿದೆ. ಅದರಲ್ಲೂ ಚುನಾವಣೆ ಸಮೀಪದಲ್ಲಿರುವ ಹೊತ್ತಿನಲ್ಲಿಯೇ ಹಠಾತ್ ಆಗಿ ರಾಜೀನಾಮೆ ನೀಡಿರುವುದು ಬಿಜೆಪಿಯ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ತಮ್ಮ ರಾಜೀನಾಮೆ ಮಾತ್ರವಲ್ಲದೆ, ಸಾಕಷ್ಟು ಶಾಸಕರು ಹಾಗೂ ಸಚಿವರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುವ ಎಚ್ಚರಿಕೆಯನ್ನು ಬಿಜೆಪಿಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಐವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

UP Election 2022 : ಬಿಜೆಪಿಯ ಮತ್ತೊಬ್ಬ ಸಚಿವ ರಾಜೀನಾಮೆ, ಮುಲಾಯಂ ಸಿಂಗ್ ಯಾದವ್ ಆಪ್ತನನ್ನು ಸೆಳೆದುಕೊಂಡ ಬಿಜೆಪಿ!
"ನನ್ನ ರಾಜೀನಾಮೆಯಿಂದ ಬಿಜೆಪಿಯಲ್ಲಿ ಭೂಕಂಪವಾದಂತೆ ಆಗಿದೆ" ಎಂದು ಸ್ವಾಮಿ ಪ್ರಸಾದ್ ಮೌರ್ಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. "ಈಗಾಗಲೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿಯಿಂದಲೂ ನಿರ್ಗಮಿಸಲಿದ್ದೇನೆ. ತಕ್ಷಣದ ಮಟ್ಟಿಗೆ ನಾನು ಸಮಾಜವಾದಿ ಪಕ್ಷವನ್ನು ಸೇರುತ್ತಿಲ್ಲ' ಎಂದು ತಿಳಿಸಿದ್ದಾರೆ. ನಾನು ಬಿಜೆಪಿಯನ್ನು ರಿಜೆಕ್ಟ್ ಮಾಡಿದ್ದೇನೆ. ಮತ್ತೆ ಆ ಪಕ್ಷಕ್ಕೆ ಮರಳಿ ಹೋಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೌರ್ಯ ಅವರು ಎರಡು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಅವರನ್ನು ಭೇಟಿಯಾಗಿ ಯೋಗಿ ಆದಿತ್ಯನಾಥ್ ಅವರ ಕಾರ್ಯಶೈಲಿಯ ಬಗ್ಗೆ ದೂರು ನೀಡಿದ್ದರು ಎಂದು ವರದಿಯಾಗಿದೆ. ಆದರೆ, ಹೈಕಮಾಂಡ್ ನಿಂದ ಯಾವುದೇ ರೀತಿಯ ಸೂಚನೆಗಳನ್ನು ಯೋಗಿ ಆದಿತ್ಯನಾಥ್ ಅವರಿಗೆ ನೀಡಲಾಗಿರಲಿಲ್ಲ ಎನ್ನುವುದು ತಿಳಿದುಬಂದಿದೆ.

Follow Us:
Download App:
  • android
  • ios