ನವದೆಹಲಿ(ಆ.18):  ಭಾರತದಿಂದ ಪರಾರಿಯಾಗಿ ದಕ್ಷಿಣ ಅಮೆರಿಕದ ದ್ವೀಪವೊಂದರಲ್ಲಿ ಕೈಲಾಸ ಎಂಬ ದೇಶ ಸ್ಥಾಪಿಸಿರುವ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮಿ ನಿತ್ಯಾನಂದ, ತನ್ನ ಹೊಸ ದೇಶದಲ್ಲಿ ರಿಸವ್‌ರ್‍ ಬ್ಯಾಂಕ್‌ ಸ್ಥಾಪಿಸಿರುವುದಾಗಿ ಘೋಷಿಸಿದ್ದಾನೆ. ಗಣೇಶ ಚತುರ್ಥಿಯಂದು ಕೈಲಾಸ ದೇಶದ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿಯೂ ಪ್ರಕಟಿಸಿದ್ದಾನೆ.

ಕೊರೋನಾ ವೈರಸ್ ನಾಶಕ ‘ಮಂತ್ರ ’ ಹೇಳಿ, ರೋಗಿಯ ಗುಣಪಡಿಸಿದ ನಿತ್ಯಾನಂದ!?

ಅಜ್ಞಾತ ಸ್ಥಳವೊಂದರಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ನಿತ್ಯಾನಂದ, ‘ನಾನೊಂದು ಮಹತ್ವದ ಘೋಷಣೆ ಮಾಡುತ್ತಿದ್ದೇನೆ. ಗಣೇಶ ಚತುರ್ಥಿಯಂದು ನಾನು ಕೈಲಾಸ ದೇಶದ ಕರೆನ್ಸಿಯನ್ನು ಬಿಡುಗಡೆ ಮಾಡಲಿದ್ದೇನೆ. ಎಲ್ಲಾ ಆರ್ಥಿಕ ಯೋಜನೆಗಳು ಸಿದ್ಧವಾಗಿವೆ. 300 ಪುಟಗಳ ಸಮಗ್ರ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು ಕಾನೂನು ಸಮ್ಮತವಾಗಿಯೇ ನಡೆದಿವೆ. ನಮ್ಮ ರಿಸವ್‌ರ್‍ ಬ್ಯಾಂಕ್‌ ಕೂಡ ಕಾನೂನು ಸಮ್ಮತವಾಗಿಯೇ ಸ್ಥಾಪನೆಗೊಂಡಿದೆ. ವ್ಯಾಟಿಕನ್‌ ಬ್ಯಾಂಕಿನ ಮಾದರಿಯಲ್ಲಿ ಈ ಬ್ಯಾಂಕ್‌ ರಚನೆ ಮಾಡಲಾಗಿದೆ. ವಿಶ್ವದೆಲ್ಲೆಡೆಯಿಂದ ಭಕ್ತರಿಂದ ಸಂಗ್ರಹಿಸಿದ ಹಣವನ್ನು ಇಲ್ಲಿ ಇಡಲಾಗುತ್ತದೆ. ಈ ಹಣವನ್ನು ಸಂಘಟಿತ ವಿಧಾನದ ಮೂಲಕ ಬಳಕೆ ಮಾಡಲಾಗುತ್ತದೆ. ಕೈಲಾಸ ದೇಶದ ಉದ್ದೇಶಿತ ಯೋಜನೆಗಳಿಗಾಗಿ ಹಣವನ್ನು ಬಳಸಲಾಗುವುದು. ಆ.22ರಂದು ಕರೆನ್ಸಿಯ ಹೆಸರು ಮತ್ತು ವಿನ್ಯಾಸವನ್ನು ಬಿಡುಗಡೆ ಮಾಡಲಾಗುವುದು’ ಎಂದು ಹೇಳಿಕೊಂಡಿದ್ದಾನೆ.

ಇದೇ ವೇಳೆ ನಿತ್ಯಾನಂದ ಬಿಡುಗಡೆ ಮಾಡಲಿದ್ದಾನೆ ಎಂದು ಹೇಳಲಾಗಿರುವ ಕರೆನ್ಸಿಯ ಫೋಟೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಕರೆನ್ಸಿಯಲ್ಲಿ ನಿತ್ಯಾನಂದನ ಫೋಟೋವನ್ನು ಮುದ್ರಿಸಲಾಗಿದ್ದು, ಅದರ ಕೆಳಗೆ ‘ನಿತ್ಯಾನಂದ ಪರಮ ಶಿವಂ’ ಎಂದು ಬರೆಯಲಾಗಿದೆ.

ಕೊರೋನಾ ತಡೆಯಲು ಟಿಪ್ಸ್‌ ಕೊಟ್ಟಿದ್ದ ನಿತ್ಯಾನಂದನಿಗೇ ಮಹಾಮಾರಿ ಕಾಟ!

ಅತ್ಯಾಚಾರ ಹಾಗೂ ವಂಚನೆ ಆರೋಪ ಎದುರಿಸುತ್ತಿರುವ ನಿತ್ಯಾನಂದ ಬೆಂಗಳೂರಿನ ಬಿಡದಿಯ ಸಮೀಪ ಆಶ್ರಮವೊಂದನ್ನು ಸ್ಥಾಪಿಸಿದ್ದು, ಬಂಧನ ಭೀತಿಯಿಂದ ಭಾರತ ಬಿಟ್ಟು ಪರಾರಿ ಆಗಿದ್ದಾನೆ. ದಕ್ಷಿಣ ಅಮೆರಿಕದ ಈಕ್ವೆಡಾರ್‌ನಿಂದ ಖಾಸಗಿ ದ್ವೀಪವೊಂದನ್ನು ಖರೀದಿಸಿ ಅದನ್ನು ಸ್ವಾಯತ್ತ ದೇಶ ಎಂಬುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ ಕೈಲಾಸ ಎಂಬುದಾಗಿಯೂ ನಿತ್ಯಾನಂದ ಹೆಸರನ್ನು ಇಟ್ಟಿದ್ದಾನೆ. ಕೈಲಾಸ ದ್ವೀಪದಲ್ಲಿ ನಿತ್ಯಾನಂದನ ಸಾವಿರ ಭಕ್ತರು ತಂಗಿದ್ದಾರೆ ಎನ್ನಲಾಗಿದೆ. ತನ್ನ ದ್ವೀಪಕ್ಕೆ ಸ್ವತಂತ್ರ ದೇಶದ ಸ್ಥಾನಮಾನ ನೀಡುವಂತೆ ವಿಶ್ವಸಂಸ್ಥೆಗೂ ಪತ್ರ ಬರೆದು ನಿತ್ಯಾನಂದ ಸುದ್ದಿಯಾಗಿದ್ದ. ಆದರೆ, ಕೈಲಾಸಕ್ಕೆ ಇನ್ನೂ ದೇಶದ ಸ್ಥಾನಮಾನ ಲಭ್ಯವಾಗಿಲ್ಲ. ಅದು ಇನ್ನೂ ಈಕ್ವೆಡಾರ್‌ ಸ್ವಾಧೀನದಲ್ಲೇ ಇದೆ.

ನಿತ್ಯಾ​ನಂದ​ನಿಗೆ ವರ​ವಾದ ಕೊರೋನಾ ವೈರಸ್ ಭೀತಿ!

ನಿತ್ಯಾನಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಆರೋಪವನ್ನು ಎದುರಿಸುತ್ತಿದ್ದು, ಆತನ ಪತ್ತೆಗೆ ಇಂಟರ್‌ಪೋಲ್‌ ಈಗಾಗಲೇ ರೆಡ್‌ ಕಾರ್ನರ್‌ ನೋಟಿಸ್‌ ಅನ್ನು ಜಾರಿ ಮಾಡಿದೆ.