ರಾಮನಗರ(ಮಾ.24): ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧದ ಭಕ್ತೆ ಮೇಲಿನ ಅತ್ಯಾ​ಚಾರ ಪ್ರಕರಣದ ವಿಚಾ​ರ​ಣೆ​ಯನ್ನು ಇಲ್ಲಿನ ಜಿಲ್ಲಾ 3ನೇ ಹೆಚ್ಚು​ವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ​ಲಯ ಕೊರೋನಾ ವೈಸರ್‌ ಭೀತಿ ಹಿನ್ನೆ​ಲೆ​ಯಲ್ಲಿ ಏ.15ಕ್ಕೆ ಮುಂದೂ​ಡಿದೆ.

ದೇಶಾದ್ಯಂತ ನಿತ್ಯಾನಂದಸ್ವಾಮಿ ಹೆಸರಿನಲ್ಲಿರುವ ಚರ-ಸ್ಥಿರ ಆಸ್ತಿಯ ವಿವರ ಸಂಗ್ರಹಿಸುವಂತೆ ನ್ಯಾಯಾ​ಲಯ ಮಾ.4ರಂದು ಸಿಐಡಿ ಪೊಲೀಸರಿಗೆ ಆದೇಶಿಸಿ ಪ್ರಕ​ರ​ಣದ ವಿಚಾ​ರ​ಣೆ​ಯನ್ನು ಮಾ.23ಕ್ಕೆ ಮುಂದೂ​ಡಿತ್ತು.

ಆದ​ರೀಗ ವೈರಸ್‌ ಭೀತಿ ಹಿನ್ನೆ​ಲೆಯಲ್ಲಿ ನ್ಯಾಯಾ​ಲ​ಯ​ದಲ್ಲಿ ಎಲ್ಲಾ ವಿಚಾ​ರ​ಣೆ​ಗಳನ್ನು ಸ್ಥಗಿ​ತ​ಗೊ​ಳಿ​ಸಿ​ರು​ವು​ದ​ರಿಂದ ಪ್ರಕ​ರ​ಣ​ವನ್ನು ಮುಂದೂಡಿದೆ.