ಗುವಾಯಾಕ್ವಿಲ್‌ (ಏ.30‌): ಕೊರೋನಾ ವೈರಸ್‌ನಿಂದ ಈಕ್ವೆಡಾರ್‌ ದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಮೃತಪಡುತ್ತಿರುವುದರಿಂದ ಶವಗಳನ್ನು ಇಡಲು ಜಾಗವಿಲ್ಲದೆ ಆಸ್ಪತ್ರೆಯ ಸ್ನಾನಗೃಹಗಳಲ್ಲಿ ರಾಶಿ ಹಾಕಲಾಗುತ್ತಿದೆ ಎಂಬ ಕಳವಳಕಾರಿ ವರದಿಯೊಂದು ಬಂದಿದೆ.

ಕೊರೋನಾದಿಂದ ಸಾವಿಗೀಡಾದವರ ಶವಗಳನ್ನು ಇಡಲು ಶವಾಗಾರಗಳಲ್ಲಿ ಸ್ಥಳಾವಕಾಶ ಇಲ್ಲ. ಹೀಗಾಗಿ ಸೋಂಕಿತರು ಮೃತರಾದ ಕೂಡಲೇ, ಶವಗಳನ್ನು ಆಸ್ಪತ್ರೆಯ ಸ್ನಾನಗೃಹದಲ್ಲಿ ರಾಶಿ ಹಾಕಲಾಗುತ್ತಿದೆ.

ಬೆಂಗಳೂರು ನಿರಾಳ, ಕಲಬುರಗಿ ಕೊತಕೊತ!

ದೇಶದಲ್ಲಿ ಈವರೆಗೆ 23 ಸಾವಿರ ಮಂದಿಗೆ ಕೊರೋನಾ ಸೋಂಕು ತಗುಲಿದೆ. 600 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ ‘ಸಾವಿಗೀಡಾದವರ ಸಂಖ್ಯೆಯ ಬಗ್ಗೆ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಸಾವಿರಾರು ಜನರು ಸಾವಿಗೀಡಾಗಿದ್ದಾರೆ’ ಎಂದು ಅನ್ಯ ಮೂಲಗಳು ತಿಳಿಸುತ್ತವೆ.

‘ನಿತ್ಯ ಅನೇಕ ಜನರು ಸಾವಿಗೀಡಾಗುತ್ತಿದ್ದಾರೆ. ಬೆಡ್‌ ಮೇಲಿದ್ದ ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಿ. ಬೇರೆ ರೋಗಿಯನ್ನು ದಾಖಲಿಸಬೇಕು ಎಂದು ಆಸ್ಪತ್ರೆಗಳಲ್ಲಿ ನಮಗೆ ಸೂಚಿಸಲಾಗುತ್ತದೆ. ಆದರೆ ಶವಾಗಾರದ ಸಿಬ್ಬಂದಿಯು, ‘ಶವಾಗಾರ ಭರ್ತಿಯಾಗಿದೆ’ ಎಂದು ಹೇಳುತ್ತಾರೆ. ಹೀಗಾಗಿ ವಿಧಿಯಿಲ್ಲದೇ ನಾವು ಆಸ್ಪತ್ರೆಯ ಬಾತ್‌ರೂಂಗಳಲ್ಲಿ ಶವಗಳನ್ನು ರಾಶಿ ಹಾಕುತ್ತೇವೆ. ಅದ್ಯಾವಾಗಲೋ ಶವಗಳನ್ನು ಶವಾಗಾದವರು ಒಯ್ಯುತ್ತಾರೆ’ ಎಂದು ನರ್ಸ್‌ ಒಬ್ಬರು ಹೇಳಿದ್ದಾರೆ.

ನಿಂಬೆ ಚುಚ್ಕೊಳ್ಳಿ, ನಿತ್ಯಾನಂದ ಜಪ ಪಠಿಸಿ: ಕೊರೋನಾಗೆ 'ಕೈಲಾಸ'ದೊಡೆಯನ ಟಿಪ್ಸ್!

ಇನ್ನು ಭಾರತದಿಂದ ಓಡಿ ತಲೆ ಮರೆಸಿಕೊಂಡಿರುವ ನಿತ್ಯಾನಂದನ ಹೊಸ ದೇಶ ಕೈಲಾಸ ಈಕ್ವೆಡಾರ್‌ ದೇಶದಲ್ಲೇ ಇದೆ ಎಂಬುವುದು ಉಲ್ಲೇಖನೀಯ. ಈ ಹಿಂದೆ ಕೊರೋನಾ ತಡೆಯಲು ವಿಭಿನ್ನ ಟಿಪ್ಸ್ ಕೊಟ್ಟಿದ್ದ ನಿತ್ಯಾನಂದನ ದೇಶಕ್ಕೂ ಕೊರೋನಾ ಲಗ್ಗೆ ಇಟ್ಟಿದ್ದುಉ, ಈ ಟಿಪ್ಸ್‌ ಅವರು ತಮಗಾಗೇ ಬಳಸಬೇಕಾದ ಪಪರಿಸ್ಥಿತಿ ನಿರ್ಮಾಣವಾಗಿದೆ.