Asianet Suvarna News Asianet Suvarna News

'ಹಾಸಿಗೆ-ದಿಂಬು ಇಟ್ಟುಕೊಂಡು ಸಂಸದರ ಧರಣಿ' ಕರ್ನಾಟಕದಲ್ಲೂ ಆಗಿತ್ತು!

ಅಮಾನತುಗೊಂಡ ಸದಸ್ಯರಿಂದ ಧರಣಿ/ ಹಾಸಿಗೆ -ದಿಂಬು ಇಟ್ಟುಕೊಂಡು ಪ್ರತಿಭಟನೆ/ ಅಶಿಸ್ತಿನ ವರ್ತನೆ ಕಾರಣಕ್ಕೆ ಸಂಸದರ ಅಮಾನತು/ ಕೃಷಿ ಮಸೂದೆ ಮಂಡನೆ ವೇಳೆ ಕೋಲಾಹಲ

Suspended Rajya Sabha MPs announce indefinite dharna in Parliament mah
Author
Bengaluru, First Published Sep 21, 2020, 9:28 PM IST

ನವದೆಹಲಿ(ಸೆ. 21)  ರಾಜ್ಯಸಭೆಯಲ್ಲಿ ಉದ್ಧಟತನದಿಂದ ನಡೆದುಕೊಂಡಿದ್ದ   ಟಿಎಂಸಿ ನಾಯಕ ಡೆರೆಕ್ ಒಬ್ರಿಯೆನ್ ಮತ್ತು ಎಎಪಿಯ ಸಂಜಯ್ ಸಿಂಗ್ ಸೇರಿದಂತೆ ಎಂಟು ಸಂಸದರನ್ನು ಅಮಾನತುಗೊಳಿಸಲಾಗಿದ್ದು ಅಮಾನತುಗೊಂಡವರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿರುವ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಸಂಸತ್ತಿನ ಆವರಣದಲ್ಲಿಯೇ ಧರಣಿ ಕೂತಿದ್ದಾರೆ. ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು. ಉಪಸಭಾಪತಿ ಎದುರೆ ರೂಲ್ ಬುಕ್ ಹರಿದು ಹಾಕಿದ್ದರು.

ರೂಲ್ ಬುಕ್ ಹರಿದ ಸಂಸದರು

ಭಾನುವಾರ ಕೋಲಾಹಲ ಸೃಷ್ಟಿಯಾಗಿದ್ದರೆ ಸೋಮವಾರವೂ ಅದರ ಬಿಸಿ ಇತ್ತು. ಅಮಾನತುಗೊಂಡ ಸದಸ್ಯರನ್ನು ಹೊರನಡೆಯಲು ಸೂಚಿಸಿದಾಗ ಮತ್ತಷ್ಟು ಗೊಂದಲದ ವಾತಾವರಣ ನಿರ್ಮಾಣ ಆಯಿತು.

ಅಶಿಸ್ತಿನಿಂದ ನಡೆದುಕೊಂಡ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಎಂಟು ದಿನ ಅಮಾನತು ಮಾಡಲಾಗಿದೆ. 

ಕೃಷಿ ಮಸೂದೆ ರೈತರ ವಿರೋಧಿಯಾಗಿದ್ದು  ಕೇಂದ್ರ ಸರ್ಕಾರ ಮರಣ ಶಾಸನ ಬರೆಯುತ್ತಿದೆ ಎಂದು ಆರೋಪಿಸಿರುವ ಸಂಸದರು ಇದೀಗ ಅಮಾನತು ವಿರೋಧಿಸಿ ಧರಣಿ ಕುಳಿತಿದ್ದಾರೆ. ಕರ್ನಾಟಕದ ವಿಧಾನಸಭೆಯಲ್ಲೂ ಹಿಂದೊಮ್ಮ  ಅಹೋರಾತ್ರಿ ಧರಣಿ ನಡೆದಿತ್ತು. 

 

 

 

 

Follow Us:
Download App:
  • android
  • ios