Asianet Suvarna News Asianet Suvarna News

'ಭಯೋತ್ಪಾದಕ ಕಾರ್ಯಗಳಿಗೆ ದೇಹಕ್ಕಿಂತ, ಬುದ್ಧಿಯೇ ಮುಖ್ಯ..', ಜಿಎನ್‌ ಸಾಯಿಬಾಬಾ ಬಿಡುಗಡೆಗೆ ಸುಪ್ರೀಂ ತಡೆ!

ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್‌ ಜಿಎನ್‌ ಸಾಯಿಬಾಬಾ ಅವರ್ನು 2014ರಲ್ಲಿ ಬಂಧಿಸಲಾಗಿತ್ತು. ಶುಕ್ರವಾರ ಬಾಂಬೆ ಹೈಕೋರ್ಟ್‌ ಇವರನ್ನು ಬಿಡುಗಡೆ ಮಾಡುವ ಆದೇಶ ನೀಡಿತ್ತು. ಆದರೆ, ಶನಿವಾರ ಹೈಕೋರ್ಟ್‌ ಆದೇಶಕ್ಕೆ ಸುಪ್ರಿಂ ಕೋರ್ಟ್‌ ತಡೆ ನೀಡಿದೆ.

Supreme Court stays Delhi University Ex Professor GN Saibaba release san
Author
First Published Oct 15, 2022, 2:42 PM IST

ನವದೆಹಲಿ (ಅ.15):  ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿ ಎಂಆರ್ ಶಾ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರ ಪೀಠವು ಈ ಪ್ರಕರಣಕ್ಕೆ ವಿವರವಾದ ವಿಚಾರಣೆಯ ಅಗತ್ಯವಿದೆ, ಆದ್ದರಿಂದ ಸಾಯಿಬಾಬಾ ಅವರರನ್ನು ಜೈಲಿನಿಂದ ಹೊರಕಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಶನಿವಾರ ನಡೆದ ವಿಚಾರಣೆಯ ವೇಳೆ ಸಾಯಿಬಾಬಾ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ, ಆರ್‌.ಬಸಂತ್‌ ಮಾಜಿ ಪ್ರಾಧ್ಯಾಪಕ ಕಳೆದ ಎಂಟು ವರ್ಷಗಳಿಮದ ಜೈಲಿನಲ್ಲಿದ್ದಾರೆ. ಅದಲ್ಲದೆ, ಅವರಿಗೆ 55 ವರ್ಷ ವಯಸ್ಸಾಗಿದೆ. ದೇಶದ 90ರಷ್ಟು ಭಾಗಗಳು ಕಾರ್ಯನಿರ್ವಹಣೆ ಮಾಡುತ್ತಿಲ್ಲ. ವೀಲ್‌ಚೇರ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಈ ಕುರಿತಾಗಿ ಅಭಿಪ್ರಾಯ ನೀಡಿದ ಸುಪ್ರೀಂ ಕೋರ್ಟ್‌, ಭಯೋತ್ಪಾದನೆ ಹಾಗೂ ನಕ್ಸಲಿಸಂ ಕಾರ್ಯ ನಡೆಸುತ್ತಿರುವ ಅಥವಾ ಅವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ದೇಹಕ್ಕಿಂತ ಬುದ್ದಿಯೇ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದೆ.

ಖುಲಾಸೆ ಮಾಡಿದ್ದ ಬಾಂಬೆ ಹೈಕೋರ್ಟ್‌: ಅಕ್ಟೋಬರ್‌ 14 ರಂದು ಜಿಎನ್‌ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಖುಲಾಸೆಗೊಳಿಸಿತ್ತು. ಅವರನ್ನು ಜೈಲಿನಿಂದ ತಕ್ಷಣವೇ ಬಿಡುಗಡೆ ಮಾಡಬೇಕು. ಹೈಕೋರ್ಟ್‌ನಿಂದ ಜಿಎನ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ನಂತರ, ಮಹಾರಾಷ್ಟ್ರ ಸರ್ಕಾರದ ಪರವಾಗಿ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠಕ್ಕೆ ಮೊರೆಹೋಗಿದ್ದರು.

ತಾಂತ್ರಿಕ ಕಾರಣ ನೀಡಿ ಸಾಯಿಬಾಬಾ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಅವರ ಜೈಲಿನಿಂದ ಹೊರಬಂದರೆ ದೇಶಕ್ಕೆ ಮಾರಕ. ಮಾವೋವಾದಿಗಳ (Maoist Link Case) ಜೊತೆ ಅವರ ಲಿಂಕ್‌ ಇರುವುದು ಗೊತ್ತಾಗಿದೆ ಎಂದು ವಾದಿಸಿದ್ದರು. ಈ ವೇಳೆ ನ್ಯಾಯಮೂರ್ತಿ ಚಂದ್ರಚೂಡ್‌, ತುರ್ತಾಗಿ ನೀವು ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ವಿಚಾರಣೆಗೆ ಅರ್ಜಿ ಸಲ್ಲಿಸಿ. ನಾವು ಅವರ ಬಿಡುಗಡೆಗೆ ತಡೆ ಹೇರುವ ಅಧಿಕಾರ ಹೊಂದಿಲ್ಲ ಎಂದರು. ಇದೇ ವೇಳೆ ಜಿಎನ್‌ ಸಾಯಿಬಾಬಾ ಅವರ ವೈದ್ಯಕೀಯ ಸ್ಥಿತಿಯನ್ನು ಗಮನಿಸಿ ಅವರನ್ನು ಕನಿಷ್ಠ ಗೃಹಬಂಧನದಲ್ಲಾದರೂ ಇರಿಸಿ ಎನ್ನುವ ಮನವಿಯನ್ನೂ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಸದ್‌ಯ ಜಿಎನ್‌ ಸಾಯಿಬಾಬಾ ನಾಗ್ಪರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ತಲೆಗೆ 5 ಲಕ್ಷ ಘೋಷಣೆಯಾಗಿದ್ದ ನಕ್ಸಲೈಟ್ ಪೊಲೀಸರಿಗೆ ಶರಣು

ಮಹಾರಾಷ್ಟ್ರದ (Maharashtra ) ಗಡ್ಚಿರೋಲಿ ನ್ಯಾಯಾಲಯವು(Gadchiroli Court ) 2017 ರಲ್ಲಿ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸಾಯಿಬಾಬಾ ಮತ್ತು ಇತರ ಐವರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿತ್ತು. ಸಾಯಿಬಾಬಾ (GN Saibaba) ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ಒಂದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಗಡ್ಚಿರೋಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸಾಯಿಬಾಬಾ ಬಾಂಬೆ ಹೈಕೋರ್ಟ್‌ನಲ್ಲಿ (Bombay High Court) ಮೇಲ್ಮನವಿ ಸಲ್ಲಿಸಿದರು.

Maharashtraದಲ್ಲಿ ಭೀಕರ ಎನ್‌ಕೌಂಟರ್ : 26 ಮಾವೋವಾದಿಗಳು ಹತ!

2013ರಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಪೊಲೀಸರು ಮಾವೋವಾದಿಗಳಾದ ಮಹೇಶ್ ಟಿರ್ಕಿ, ಪಿ. ನರೋಟೆ ಮತ್ತು ಹೇಮ್ ಮಿಶ್ರಾ ಅವರನ್ನು ಬಂಧಿಸಿದ್ದರು. ಈ ಮೂವರ ವಿಚಾರಣೆ ನಡೆಸಿದ ಪೊಲೀಸರು ಜಿ.ಎನ್.ಸಾಯಿಬಾಬಾ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಸಾಯಿಬಾಬಾ ಅವರನ್ನು ಮಾವೋವಾದಿಗಳೊಂದಿಗೆ ಸಂಪರ್ಕದ ಆರೋಪದ ಮೇಲೆ 9 ಮೇ 2014 ರಂದು ಅವರ ದೆಹಲಿ ನಿವಾಸದಿಂದ ಬಂಧಿಸಲಾಯಿತು. 2015ರಲ್ಲಿ ಸಾಯಿಬಾಬಾ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಲಾಗಿತ್ತು.

Follow Us:
Download App:
  • android
  • ios