ಒಡಿಶಾದ ಕಾಳಹಂಡಿಯಲ್ಲಿ ಪೊಲೀಸರಿಗೆ ಶರಣಾದ ನಕ್ಸಲೈಟ್‌ 50 ವರ್ಷದ ಲಾಲ್ಸು ಅಕಾ ಸೆಂಧು ಅಕಾ ಲಕ್ಷ್ಮಣ್ ಅಪ್ಕಾ ಶರಣಾದ ನಕ್ಸಲ್‌ ಈತನ ತಲೆಗೆ ಐದು ಲಕ್ಷ ಘೋಷಣೆಯಾಗಿತ್ತು.  

ಭವಾನಿಪಟ್ಟಣ: ಛತ್ತೀಸ್‌ಗಡದಲ್ಲಿ ತಲೆಗೆ 5 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಮಾವೋವಾದಿಯೊಬ್ಬ ಪೊಲೀಸರ ಮುಂದೆ ಶರಣಾಗಿದ್ದಾನೆ. ಒಡಿಶಾದ ಕಾಳಹಂಡಿ (Kalahandi) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಶರಣಾದ ಮಾವೋವಾದಿಯನ್ನು ಲಾಲ್ಸು ಅಕಾ ಸೆಂಧು ಅಕಾ ಲಕ್ಷ್ಮಣ್ ಅಪ್ಕಾ (Lalsu aka Sendhu aka Laxman Apka) (50) ಎಂದು ಗುರುತಿಸಲಾಗಿದೆ. ಈತ ಛತ್ತೀಸ್‌ಗಢದ (Chattisgarh) ಬಿಜಾಪುರ (Bijapur) ಜಿಲ್ಲೆಯ ಗಂಗ್ಲೂರು (Ganglore) ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದವನು. ಈತ ತನ್ನ 17 ನೇ ವಯಸ್ಸಿನಲ್ಲಿ ಗಂಗ್ಲೋರ್ ದಲಂನಲ್ಲಿ (Ganglore Dalam) 2009 ರಲ್ಲಿ ನಿಷೇಧಕ್ಕೊಳಗಾದ ಮಾವೋವಾದಿ ಸಂಘಟನೆಯನ್ನು ಸೇರಿಕೊಂಡಿದ್ದ ಮತ್ತು 2011 ರಲ್ಲಿ ಒಡಿಶಾಗೆ ಸ್ಥಳಾಂತರಗೊಂಡಿದ್ದ. 

ಅಂದಿನಿಂದಲೂ ಆತ ಕಾಳಹಂಡಿ ಜಿಲ್ಲೆಯ ಬಿಜಿಎನ್ (ಬನಸಾಧಾರ-ಘುಮಸೂರ್-ನಾಗಬಲಿ) (Bansadhara-Ghumsur-Nagabali) ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಮತ್ತು ಈಗ ಆತ ಪ್ರದೇಶ ಸಮಿತಿ ಕಾರ್ಯದರ್ಶಿಯಾಗಿದ್ದ. ಈತ ಡಿಐಜಿ ರಾಜೇಶ್ ಪಂಡಿತ್ (Rajesh Pandit), ಎಸ್ಪಿ ಕಲಹಂಡಿ ಸವರ್ಣ ವಿವೇಕ್ (SP Kalahandi Savarna Vivek) ಮತ್ತು ಸಿಆರ್‌ಪಿಎಫ್ ಕಮಾಂಡೆಂಟ್ ಬಿಪ್ಲಬ್ ಸರ್ಕಾರ್ (Biplab Sarkar) ಅವರ ಮುಂದೆ ಶರಣಾಗಿದ್ದಾನೆ. ಕಾನೂನು ಬಾಹಿರ ಮಾವೋವಾದಿ ಚಟುವಟಿಕೆಗಳಿಂದ ಲಾಲ್ಸು ಕ್ರಮೇಣ ಭ್ರಮನಿರಸನಗೊಂಡರು ಎಂದು ಎಸ್ಪಿ ಹೇಳಿದ್ದಾರೆ.

ನಕ್ಸಲರು ಅಪಹರಿಸಿದ್ದ ಕೋಬ್ರಾ ಕಮಾಂಡೋ ರಾಕೇಶ್ವರ್ ಬಿಡುಗಡೆ!

ಈ ಶರಣಾದ ಮಾವೋವಾದಿಯು 2016ರಲ್ಲಿ ಮನಸ್ಕಾ(Manaska), 2017ರಲ್ಲಿ ಬಾರಂಗಪದರ್ (Barangapadar), 2019ರಲ್ಲಿ ಟರ್ಕಿ (Turkey) ಮತ್ತು ಕೋಟಾಲ್‌ಘಾಟಿ (Kotalghati) ಮತ್ತು 2020ರಲ್ಲಿ ಸೊಹೆಸ್ಪದರ್‌ನಲ್ಲಿ (Sohespadar) ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದ ಎಂದು ಡಿಐಜಿ ತಿಳಿಸಿದ್ದಾರೆ. ಇತರ ಅಪರಾಧಗಳಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಡಿತ್ ಹೇಳಿದರು.

Naxal Encounter: ಛತ್ತೀಸ್‌ಗಢ ತೆಲಂಗಾಣ ಗಡಿಯಲ್ಲಿ ಗುಂಡಿನ ಚಕಮಕಿ : 6 ನಕ್ಸಲರ ಹತ್ಯೆ

ಈ ಮಧ್ಯೆ ಕೆಲ ದಿನಗಳ ಹಿಂದೆ ಶರಣಾದ ಮಾವೋವಾದಿ ದಂಪತಿ ರಾಮದಾಸ್ ಮತ್ತು ಕಲಾಂದೇಯಿ ಅವರ ವಿವಾಹವನ್ನು ಕಾಳಹಂಡಿ ಪೊಲೀಸರು ಏಪ್ರಿಲ್ 22 ರಂದು ಭವಾನಿಪಟ್ಟಣ ಮೀಸಲು ಪೊಲೀಸ್ ಬ್ಯಾರಕ್ ಕಾಂಪೌಂಡ್‌ನಲ್ಲಿ ಆಯೋಜಿಸಿದ್ದರು. ಅವರಿಗೆ ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಂತೆ ಪುನರ್ವಸತಿ ಕಲ್ಪಿಸಲಾಗಿದ್ದು, ಮನೆ ನಿವೇಶನದ ಜೊತೆಗೆ ₹ 5 ಲಕ್ಷ ಆರ್ಥಿಕ ನೆರವು, ಕಟ್ಟಡ ಸಹಾಯ, ಮದುವೆ ಭತ್ಯೆ, ತಿಂಗಳಿಗೆ ₹ 3 ಸಾವಿರ ಅಧ್ಯಯನ ಭತ್ಯೆ ಮತ್ತು ವೃತ್ತಿ ತರಬೇತಿ ನೀಡಲಾಗುವುದು ಎಂದು ಡಿಐಜಿ ಹೇಳಿದರು. ಅವರ ಲಾಭದಾಯಕ ಉದ್ಯೋಗಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಿಐಜಿ ಹೇಳಿದರು. ಕಳೆದ ಆರು ವರ್ಷಗಳಲ್ಲಿ ಕಾಳಹಂಡಿಯಲ್ಲಿ ಕಾರ್ಯಾಚರಿಸುತ್ತಿರುವ ಏಳು ಮಾವೋವಾದಿಗಳು ಶರಣಾಗಿದ್ದು, ಅವರಿಗೆ ಪುನರ್ವಸತಿ ನೆರವು ನೀಡಲಾಗಿದೆ.