ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಬಿಜೆಪಿಯವರು ಏಕೆ ಮಾತಾಡ್ತಿಲ್ಲ?: ಡಿ.ಕೆ.ಶಿವಕುಮಾರ್
ಎಲ್ಲಿ ಹೋದ ಸಿಟಿ ರವಿ, ಎಲ್ಲಿ ಹೋದ್ರು ಶೋಭಕ್ಕ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ? ಹೆಣ್ಣು ಮಕ್ಕಳ ಮೇಲೆ ಅನ್ಯಾಯ ಆದರೂ ಯಾಕೆ ಮಾತಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್
ಬಾಗಲಕೋಟೆ(ಮೇ.03): ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತಾಡ್ತಿಲ್ಲ? ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳಲು ಹೇಳಲು ಏಕೆ ಹೋಗಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಹೋದ ಸಿಟಿ ರವಿ, ಎಲ್ಲಿ ಹೋದ್ರು ಶೋಭಕ್ಕ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ? ಹೆಣ್ಣು ಮಕ್ಕಳ ಮೇಲೆ ಅನ್ಯಾಯ ಆದರೂ ಯಾಕೆ ಮಾತಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಪ್ರಜ್ವಲ್ ರೇಪ್ ಕೇಸ್ ಬಗ್ಗೆ ಪೇಪರ್‌ನಲ್ಲಿ ನೋಡಿದ್ದೀನಿ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಅವರಿಗೆ ನಾವು ಫ್ರೀ ಹ್ಯಾಂಡ್ ಆಗಿ ಬಿಟ್ಟಿದ್ದೀವಿ, ಕುಮಾರಣ್ಣ ಕೂಡ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಉಪ್ಪು ತಿಂದವರು ನೀರು ಕುಡಿಬೇಕು ಎಂದು ಕುಮಾರಣ್ಣ ಹೇಳಿದ್ದಾರೆ. ಬಿಜೆಪಿಯವರು ಸಹ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ನಾವು ಇದರಲ್ಲಿ ಮೂಗು ತೂರಿಸಲ್ಲ. ತನಿಖೆ ನಡೆದು ಎಲ್ಲ ಹೊರಬರಲಿದೆ ಎಂದು ಹೇಳಿದರು.
ಪ್ರಜ್ವಲ್ ಲೈಂಗಿಕ ದೌರ್ಜನ್ಯವಷ್ಟೇ ಅಲ್ಲ, ರೇಪ್ ಮಾಡಿದ್ದಾನೆ: ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿಕೆಶಿ ಸೀಡಿ ತಯಾರಿಸೋದರಲ್ಲಿ ನಿಸ್ಸೀಮರು ಎಂಬ ಮಾಜಿ ಶಾಸಕ ರಾಜುಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ. ನನ್ನನ್ನು ಆಗಾಗ ಬಿಜೆಪಿ, ದಳದವರು ನೆನಪಿಸಿಕೊಳ್ಳುತ್ತಿರುತ್ತಾರೆ. ಅವರು ನೆನೆಪಿಸಿಕೊಳ್ಳಲೇಬೇಕು, ಯಾಕೆಂದರೆ ನಾನು ಒಂದು ಪಕ್ಷದ ಅಧ್ಯಕ್ಷ, ಕ್ಯಾಪ್ಟನ್ ಅನ್ನು ನೆನಪಿಸಿಕೊಳ್ಳದೇ ಇನ್ಯಾರನ್ನು ನೆನಪಿಸಿಕೊಳ್ತಾರೆ. ನಾವು ಸಹ ಬಿಜೆಪಿಯವರು ಏನೇ ಮಾಡಿದರೂ ಮೋದಿ ಹಾಗೂ ಬಿಜೆಪಿ ನಾಯಕರನ್ನೇ ಅಟ್ಯಾಕ್ ಮಾಡೋದು ಎಂದು ಸಮರ್ಥಿಸಿಕೊಂಡರು.
ಮುಂದೆ ಒಂದಿನ ಡಿಕೆಶಿ ಅವರು ಸಿದ್ದರಾಮಯ್ಯ ಅವರ ಸೀಡಿ ಬಿಡುಗಡೆ ಮಾಡಿದರೂ ಅಚ್ಚರಿಪಡಬೇಕಿಲ್ಲ ಎಂಬ ರಾಜುಗೌಡ ಹೇಳಿಕೆಗೆ ಸಿಡಿಮಿಡಿಗೊಂಡ ಡಿಕೆಶಿ, ಯಾವನೋ ಅವನ್ಯಾವನೋ ರಾಜುಗೌಡ. ಮೆಂಟಲ್ ಕೇಸ್ ಎಂದು ಆಕ್ರೋಶ ಹೊರಹಾಕಿದರು.