ವಿವಾಹಿತ ಮಹಿಳೆಯ ಬಾಯ್‌ಫ್ರೆಂಡ್‌ನ ಕಿತಾಪತಿ, ಪಾರ್ಸೆಲ್ ಬಾಂಬ್ ಕಳುಹಿಸಿ ಪತಿ-ಮಗಳ ಹತ್ಯೆ!
ಮದುವೆಯಾಗಿದೆ. ಪತಿ-ಮಗಳ ಜೊತೆಗಿನ ಸಂಸಾರ ಸುಖವಾಗಿ ಸಾಗುತ್ತಿದೆ. ಇದರ ನಡುವೆ ಮಹಿಳೆಗೆ ಬೇರೊಬ್ಬನ ಜೊತೆ ಪ್ರೀತಿ ಶುರುವಾಗಿದೆ. ಆದರೆ ಈ ಬಾಯ್‌ಫ್ರೆಂಡ್ ಮಾತ್ರ ಊಹೆಹೂ ಮೀರಿದ ಖತರ್ನಾಕ್ ವ್ಯಕ್ತಿ. ಈಕೆಯ ಗಂಡನ ಹೆಸರಿಗೆ ಪಾರ್ಸೆಲ್ ಬಾಂಬ್ ಕಳುಹಿಸಿ, ಪತಿ ಹಾಗೂ ಮಗಳನ್ನೂ ಹತ್ಯೆ ಮಾಡಿದ್ದಾನೆ.
ಅಹಮ್ಮದಾಬಾದ್(ಮೇ.03) ಮನೆಗೆ ಪಾರ್ಸೆಲ್ ಬಂದಿದೆ. ತನ್ನ ಹೆಸರಲ್ಲೇ ಪಾರ್ಸೆಲ್ ಬಂದಿರುವ ಕಾರಣ ತೆಗೆದುಕೊಂಡು ಬಂದು ಓಪನ್ ಮಾಡಿದ್ದಾರೆ. 12 ವರ್ಷದ ಮಗಳಿಗೂ ಕುತೂಹಲ ಹೆಚ್ಚಾಗಿದೆ. ಏನಾಗಿರಬಹುದು ಅನ್ನೋ ಕುತೂಹಲ. ಆದರೆ ಪಾರ್ಸೆಲ್ ತೆರೆಯುತ್ತಿದ್ದಂತೆ ಬಾಂಬ್ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ 32 ವರ್ಷದ ಜೀತುಬಾಯಿ ಸ್ಥಳದಲ್ಲೆ ಮೃತಪಟ್ಟರೆ, ಆತನ ಮಗಳು 12 ವರ್ಷದ ಭೂಮಿಕ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ಗುಜರಾತ್‌ನ ವಡಾಲಿಯಲ್ಲಿ ನಡೆದಿದೆ. ಪಾರ್ಸೆಲ್ ಸ್ಪೋಟದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಈ ಅಚಾನಕ್ಕಾಗಿ ಸಂಭವಿಸಿದ ಸ್ಫೋಟವಲ್ಲ , ಉದ್ದೇಶಪೂರ್ಕವಾಗಿ ಜೀತುಬಾಯಿ ಹತ್ಯೆ ಮಾಡಲಾಗಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ.
ಜೀತು ಬಾಯಿ, ಪತ್ನಿ ಹಾಗೂ ಮಗಳ ಕುಟುಂಬ ಹೆಚ್ಚಿನ ಕೊರತೆಗಳಿಲ್ಲದ ಸಾಗಿತ್ತು. ಹೀಗಿದ್ದ ಸುಖೀ ಕುಟುಂಬದಲ್ಲಿ ಜೀತುಬಾಯಿ ಪತ್ನಿ ಸದ್ದಿಲ್ಲದೆ ಯೂಟರ್ನ್ ತೆಗೆದುಕೊಂಡಿದ್ದಳು. ರಹಸ್ಯವಾಗಿ ಬೇರೊಬ್ಬರನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಜೀತುಭಾಯಿಗೆ ಗೊತ್ತಿಲ್ಲದಂತೆ ಈಕೆ ಎಲ್ಲವನ್ನೂ ನಿರ್ವಹಣೆ ಮಾಡುತ್ತಿದ್ದಳು. ಆದರೆ ಈ ಕುರಿತು ಸೂಚನೆ ಪಡೆದ ಜೀತುಭಾಯಿ, ಭಾಯ್‌ಪ್ರೆಂಡ್‌ಗೆ ವಾರ್ನಿಂಗ್ ಮಾಡಿದ್ದ.
ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ, ರಾಕ್ಷಸರ ವಧೆಯಲ್ಲಿ 11 ವರ್ಷದ ಬಾಲಕ ದುರಂತ ಅಂತ್ಯ!
ಆದರೆ ಈಕೆಯ ಬಾಯ್‌ಫ್ರೆಂಡ್ ಮಾತ್ರ ಪಕ್ಕಾ ಕ್ರಿಮಿನಲ್. ಈಕೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾನೆ. ಆದರೆ ಮೊದಲೇ ವಾರ್ನಿಂಗ್ ನೀಡಿರು ಕಾರಣ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾನೆ. ಜೀತುಭಾಯಿ ಮುಗಿಸಿಬಿಟ್ಟರೆ ಎಲ್ಲವೂ ಸುಗಮ ಎಂದುಕೊಂಡಿದ್ದಾನೆ. ಇದಕ್ಕಾಗಿ ಗುಜರಾತ್‌ನಿಂದ ರಾಜಸ್ಥಾನಕ್ಕೆ ತೆರಳಿ ಜಿಲೆಟಿನ್, ಡಿಟೋನೇಟರ್ ಸೇರಿದಂತೆ ಸ್ಫೋಟಕ ಸಾಮಾಗ್ರಿ ಖರೀದಿಸಿದ್ದಾನೆ.
ಬಾಂಬ್ ತಯಾರಿಕೆ ಕುರಿತು ಹಲವು ಮಾಹಿತಿ ಕಲೆಹಾಕಿ ಪ್ರಯೋಗ ನಡೆಸಿದ್ದಾನೆ. ಬಳಿಕ ಟೇಪ್ ರೇಕಾರ್ಡರ್ ಖರೀದಿಸಿ ಅದರಲ್ಲಿ ಬಾಂಬ್ ತಯಾರಿಸಿ ಫಿಕ್ಸ್ ಮಾಡಿದ್ದಾನೆ. ಈ ಟೇಪ್ ರೆಕಾರ್ಡರನ್ನು ಜೀತುಭಾಯಿಗೆ ಆಟೋರಿಕ್ಷಾ ಮೂಲಕ ಪಾರ್ಸೆಲ್ ಕಳುಹಿಸಿದ್ದಾನೆ. ಪಾರ್ಸೆಲ್ ತೆರೆದು ನೋಡಿದಾಗ ಟೇಪ್ ರೆಕಾರ್ಡರ್. ಪಾರ್ಸೆಲ್ ನೋಡಿದ ಜೀತುಭಾಯಿ ಮಕ್ಕಳು ಕೂಡ ಹತ್ತಿರ ಆಗಮಿಸಿ ಕುತೂಹಲದಿಂದ ನೋಡಿದ್ದಾರೆ. ವಿದ್ಯುತ್ ಪ್ಲಗ್ ಮಾಡಿದಾಗ ಈ ಟೇಪ್ ರೆಕಾರ್ಡರ್ ಸ್ಫೋಟಗೊಂಡಿದೆ.
ಪತ್ನಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಹತ್ಯೆ, ಕಝಕ್ ಮಾಜಿ ಸಚಿವನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆ!
ಸ್ಫೋಟದ ರಭಸಕ್ಕೆ ಜೀತುಭಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ವರ್ಷದ ಮಗಳು ಭೂಮಿಕಾ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾಳೆ.9 ವರ್ಷ ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆಯುವಾಗ ಜೀತುಬಾಯಿ ಪತ್ನಿ ಮನೆಯಲ್ಲಿ ಇರಲಿಲ್ಲ. ಇದು ಪೊಲೀಸರ ಅನುಮಾನ ಹೆಚ್ಚಿಸಿದೆ.