ಹೆಣ್ಣಿನ ಮದುವೆ ವಯಸ್ಸು 21ಕ್ಕೆ ಏರಿಸಿ, ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!
ಮದುವೆಗೆ ಗಂಡಿಗೆ 21, ಹೆಣ್ಣಿಗೆ 18 ವಯಸ್ಸು ಕಡ್ಡಾಯ. ಆದರೆ ಈ ವಯಸ್ಸಿನ ಅಂತರ ಯಾಕೆ? ಮದುಗೆ ಹೆಣ್ಣಿನ ವಯಸ್ಸನ್ನೂ 21ಕ್ಕೆ ಏರಿಕೆ ಮಾಡಬೇಕು. ಗಂಡು ಹೆಣ್ಣಿಗೆ ಸಮಾನ ವಯಸ್ಸು ನಿಗದಿಮಾಡಬೇಕು ಅನ್ನೋ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನವದೆಹಲಿ(ಮಾ.28): ಭಾರತದಲ್ಲಿ ಮದುವೆ ವಯಸ್ಸು ಗಂಡಿಗೆ 21, ಹೆಣ್ಣಿಗೆ 18. ಆದರೆ ಸಮಾನತೆ ವಿಚಾರ ಬಂದಾಗ, ಮಹಿಳೆಗೆ ಯಾಕೆ 18 ವರ್ಷ ಅನ್ನೋ ಪ್ರಶ್ನೆ ದಶಕಗಳಿಂದಲೂ ಕೇಳಿಬರುತ್ತಿದೆ. ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆ ಸಮಾನರಾಗಿದ್ದಾರೆ. ಹೀಗಾಗಿ ಹೆಣ್ಣಿನ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡಬೇಕು ಅನ್ನೋ ಕೂಗು ಒಂದಡೆಯಾದರೆ, ಗಂಡು ಹೆಣ್ಣಿಗೆ ಮದುವೆಗೆ ಸಮಾನ ವಯಸ್ಸು ನಿಗದಿ ಮಾಡಬೇಕು ಅನ್ನೋ ಕೂಗೂ ಹಲವು ವರ್ಷಗಳಿಂದ ಇದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಷ್ಟೇ ಅಲ್ಲ ಕೆಲ ಮಹತ್ವದ ಸೂಚನೆಯನ್ನು ನೀಡಿದೆ.
ಗಂಡು ಹೆಣ್ಣಿನ ಮದುವೆ ವಯಸ್ಸು ನಿರ್ಧರಿಸುವುದು, ಏರಿಕೆ ಮಾಡುವುದು ಎಲ್ಲವೂ ಶಾಸಕಾಂಗದ ಅಧಿಕಾರ. ಇದನ್ನು ಸಂಸತ್ತು ನಿರ್ಧರಿಸಲಿದೆ. ಇದರ ಮಧ್ಯೆ ಸುಪ್ರೀಂ ಕೋರ್ಟ್ ಪ್ರವೇಶಿಸಲು ಸಾಧ್ಯವಿಲ್ಲ. ಸಂಸತ್ತು ಕಾನೂನು ರಚಿಸಲಿದೆ. ಜಾರಿಗೆ ತರಲಿದೆ. ಇದು ಶಾಸಂಕಾಗಕ್ಕೆ ಇರುವ ಅಧಿಕಾರವಾಗಿದೆ. ಹೀಗಾಗಿ ಗಂಡುು ಹೆಣ್ಣಿನ ಮದುವೆ ವಯಸ್ಸಿನ ಬದಲಾವಣೆ ಅರ್ಜಿಯನ್ನು ವಿಚಾರಣೆ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ತಿರಸ್ಕರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರನ್ನೊಳಗೊಂಡ ಪೀಠ ಹೇಳಿದೆ.
5 ಮತ್ತು 8 ತರಗತಿಗಳಿಗೆ ಬೋರ್ಡ್ ಪರೀಕ್ಷೆ ಮೇಲ್ಮನವಿ ವಜಾ, ಮಧ್ಯಾಹ್ನ 2.30ರಿಂದ ಪರೀಕ್ಷೆ ನಡೆಸಲು ಸುಪ್ರೀಂ ಸೂಚನೆ!
ಶಾಹೀದಾ ಖುರೇಶಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವರದಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪೀಠ, ಅರ್ಜಿಯನ್ನು ತಿರಸ್ಕರಿಸಿತು.ಶಾಹೀದಾ ಖುರೇಷಿ ಹೆಣ್ಣಿನ ಮದುವೆ ವಯಸ್ಸನ್ನು 21ಕ್ಕೆ ಏರಿಸಬೇಕು ಎಂದು ಮನವಿ ಮಾಡಿದ್ದರು. ಇದೇ ವೇಳೆ ಸುಪ್ರೀ ಕೋರ್ಟ್ ಪೀಠ, ಅಡ್ವೋಕೇಟ್ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮದುವೆಗೆ ಸಮಾನ ವಯಸ್ಸು ನಿಗದಿಪಡಿಸಬೇಕೆಂಬ ಅರ್ಜಿಯನ್ನು ಉಲ್ಲೇಖಿಸಿತು. ಫೆಬ್ರವರಿ 20 ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ವಿಷಯ ಶಾಸಕಾಂಗದೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಹಾಗಾಗಿ ಇದು ಶಾಸಕಾಂಗದ ಕಾರ್ಯವ್ಯಾಪ್ತಿಯಲ್ಲಿದೆ. ಒಂದು ವೇಳೆ ಈಗಿರುವ ಉಪಬಂಧವನ್ನು ತೆಗೆದು ಹಾಕಿದರೆ ಯುವತಿಯರಿಗೆ ಕನಿಷ್ಠ ಮದುವೆ ನಿಗದಿಯೇ ಇಲ್ಲದಂತಾಗುತ್ತದೆ. ಇದು ಮದುವೆಗೆ ಸಂಬಂಧಿಸಿದ ಖಾಸಗಿ ಕಾನೂನಿಗೆ ಸಂಬಂಧಿಸಿದೆ ಎಂದು ಪೀಠ ಹೇಳಿದೆ. ಶಾಸಕಾಂಗ ವಿಚಾರದಲ್ಲಿ ಕೋರ್ಟ್ ತಲೆಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಬಾತ್ ರೂಮ್‌ಗಳನ್ನು ಲಿಂಗ ತಟಸ್ಥವಾಗಿ ಮಾರ್ಪಡಿಸಲು ಸಲಹೆ
ಗಂಡು ಹೆಣ್ಣಿನ ಮದುವೆ ವಯಸ್ಸಿನ ಕುರಿತು ಜಸ್ಟೀಸ್ ತುಷಾರ್ ಮೆಹ್ತಾ ಅವರಿದ್ದ ಪೀಠ ಈಗಾಗಲೇ ಆದೇಶ ನೀಡಿದೆ. ಹೀಗಾಗಿ ಮತ್ತೆ ಈ ಕುರಿತು ಅರ್ಜಿಯನ್ನು ಸ್ವೀಕರಿಸಿವುದು ಯೋಗ್ಯವಲ್ಲ. ವಯಸ್ಸಿನ ಅಂತರ, ಹಾಗೂ ವಯಸ್ಸು ಏರಿಕೆ ಕಾನೂನು ರೂಪಿಸುವ ಅಧಿಕಾರವನ್ನು ಶಾಸಕಾಂಗದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ನ್ಯಾಯ ನೀಡುವುದು ನಮ್ಮ ಉದ್ದೇಶ, ಕಾನೂನು ರೂಪಿಸುವುದಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.