ಸರ್ಕಾರಿ ಸ್ಥಳಗಳಲ್ಲಿನ ಬೀದಿನಾಯಿಗಳನ್ನು ಶೆಡ್‌ಗೆ ಹಾಕುವ ತನ್ನ ತೀರ್ಪು ವಿರೋಧಿಸಿರುವ ನಟಿ ಶರ್ಮಿಳಾ ಟ್ಯಾಗೋರ್‌ ಅವರ ವಾದಕ್ಕೆ ಸುಪ್ರೀಂ ಕೋರ್ಟ್‌ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ‘ನೀವು ವಾಸ್ತವದಿಂದ ದೂರವಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ಸರ್ಕಾರಿ ಸ್ಥಳಗಳಲ್ಲಿನ ಬೀದಿನಾಯಿಗಳನ್ನು ಶೆಡ್‌ಗೆ ಹಾಕುವ ತನ್ನ ತೀರ್ಪು ವಿರೋಧಿಸಿರುವ ನಟಿ ಶರ್ಮಿಳಾ ಟ್ಯಾಗೋರ್‌ ಅವರ ವಾದಕ್ಕೆ ಸುಪ್ರೀಂ ಕೋರ್ಟ್‌ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ‘ನೀವು ವಾಸ್ತವದಿಂದ ದೂರವಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿದೆ.

ಏಮ್ಸ್‌ ಆಸ್ಪತ್ರೆಯಲ್ಲಿ ‘ಗೋಲ್ಡಿ’ ಎಂಬ ನಾಯಿ

ಶುಕ್ರವಾರ ಬೀದಿ ನಾಯಿಗಳ ಕುರಿತು ವಿಚಾರಣೆ ವೇಳೆ ನಟಿ ಪರ ವಕೀಲರು, ‘ಒಳ್ಳೆಯ ಮತ್ತು ಕೆಟ್ಟ ನಡವಳಿಕೆಯಿರುವ ನಾಯಿಗಳ ಕುರಿತು ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸಬೇಕು. ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ‘ಗೋಲ್ಡಿ’ ಎಂಬ ನಾಯಿಯು ಕೆಲ ವರ್ಷಗಳಿಂದಲೂ ಇದೆ. ಇಂಥ ನಾಯಿಗಳನ್ನು ಶೆಡ್‌ಗೆ ಹಾಕಬಾರದು’ ಎಂದು ಹೇಳಿದರು.

ಬೀದಿಯಲ್ಲಿರುವ ಪ್ರತಿ ನಾಯಿಯ ಮೈಯಲ್ಲಿಯೂ ಹುಳುಗಳಿರುತ್ತವೆ

ಇದರಿಂದ ಗರಂ ಆದ ಪೀಠ, ‘ಆ ನಾಯಿಯನ್ನು ಆಪರೇಷನ್‌ ಥಿಯೇಟರ್‌ಗೂ ಕರೆದೊಯ್ಯುವರೇ?’ ಎಂದು ಪ್ರಶ್ನಿಸಿ, ‘ಬೀದಿಯಲ್ಲಿರುವ ಪ್ರತಿ ನಾಯಿಯ ಮೈಯಲ್ಲಿಯೂ ಹುಳುಗಳಿರುತ್ತವೆ. ಅವುಗಳು ಎಷ್ಟು ಅಪಾಯಕಾರಿ ಎಂದು ನಿಮಗೆ ಅರಿವಿದೆಯೇ? ವಾಸ್ತವಿಕತೆ ಅರಿತು ಮಾತನಾಡಿ’ ಎಂದಿತು.

ಈ ವೇಳೆ ಮತ್ತೆ ನಟಿ ಪರ ವಕೀಲರು, ‘ಜಾರ್ಜಿಯಾ, ಅರ್ಮೇನಿಯಾ ದೇಶಗಳಲ್ಲಿ ಕಚ್ಚುವ ನಾಯಿಗಳಿಗೆ ಬಣ್ಣ ಬಣ್ಣದ ಕೊರಳಪಟ್ಟಿ ಅಳವಡಿಸಲಾಗುತ್ತಿದೆ. ಅದನ್ನು ಇಲ್ಲಿಯೂ ಜಾರಿ ಮಾಡಬೇಕು’ ಎಂದು ಕೋರಿದರು. ಇದಕ್ಕೂ ಪೀಠ, ‘ಭಾರತ ಜಾರ್ಜಿಯಾ ಎಷ್ಟು ದೊಡ್ಡ ದೇಶ. ಭಾರತದ ಎಷ್ಟು ದೊಡ್ಡ ದೇಶ ಗೊತ್ತೆ?’ ಎಂದು ಚಾಟಿ ಬೀಸಿತು.