ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗರ್ವನರ್ ನಡುವಿನ ಹಗ್ಗಜಗ್ಗಾಟ ಹೊಸದೇನಲ್ಲ. ಹೆಜ್ಜೆ ಹೆಜ್ಜೆಗೂ ಗರ್ವನರ್ ಅಡ್ಡಿಯಾಗುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ಸಿಸೋಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಪ್ ಸರ್ಕಾರಕ್ಕೆ ಛಾಟಿ ಬೀಸಿದೆ.

Supreme Court deal with constitutional issue not political apex court terms aap affidavit against  Lt Governor VK Saxena ckm

ನವದೆಹಲಿ(ನ.11):  ದೆಹಲಿಯ ಆಪ್ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ನಡುವಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಬಕಾರಿ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿದ್ದ ಗವರ್ನರ್, ಸರ್ಕಾರದ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಾವೇ ಸರ್ಕಾರ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.  ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನಿಕ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ. ಆದರೆ ಸುಪ್ರೀಂ ಕೋರ್ಟ್ ನಿಮ್ಮ ರಾಜಕೀಯ ಸಮಸ್ಯೆಗಳಿಗೆ ಉತ್ತರ ನೀಡುವ ಸಂಸ್ಥೆಯಲ್ಲ. ರಾಜಕೀಯ ಸಂಘರ್ಷವನ್ನು ಬಗಹರಿಸುವುದಿಲ್ಲ. ಹೀಗಾಗಿ ಈ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳುವುದು ಸೂಕ್ತವಲ್ಲ. ಈ ಅಫಿಧವಿತ್ ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಜಸ್ಟೀಸ್ ಚಂದ್ರಚೂಡ್ ನೇತೃತ್ವದ ಪೀಠ ಈ ಮಹತ್ವದ ಸೂಚನೆ ನೀಡಿದೆ. ಈ ಮೂಲಕ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆಯಾಗಿದೆ. ಸರ್ಕಾರದ ಪರ ವಾದ ಮಂಡಿಸಿದ ವಕೀಲ ಸಂಜಯ್ ಜೈನ್, ರಾಜ್ಯಾಪಾಲರ ಕಾರ್ಯವ್ಯಾಪ್ತಿಯನ್ನು ದೆಹಲಿ ಸರ್ಕಾರ ಪ್ರಶ್ನಿಸುತ್ತಿದೆ. ಈ ಮೂಲಕ ದೆಹಲಿ ಸರ್ಕಾರ ದ್ವೇಷದ ರಾಜಕಾರಣವನ್ನು ಸುಪ್ರೀಂ ಕೋರ್ಟ್‌ಗೆ ಎಳೆದು ತಂದಿದ್ದಾರೆ ಎಂದಿದ್ದರು. 

 

ಹೆಂಡ್ತಿಗಿಂತ ಲೆಫ್ಟಿನೆಂಟ್‌ ಗವರ್ನರ್‌ ಹೆಚ್ಚು ಬೈತಾರೆ: Arvind Kejriwal ವ್ಯಂಗ್ಯ

ಇತ್ತ ಆಮ್ ಆದ್ಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ಈ ಕುರಿತು ಕೇಂದ್ರ ಸರ್ಕಾರ ಹಾಗೂ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಗರಂ ಆದ ಸುಪ್ರೀಂ ಕೋರ್ಟ್, ಸುಪ್ರೀಂ ಕೋರ್ಟ್ ಸಾಂವಿಧಾನಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ರಾಜಕೀಯ ಸಮಸ್ಯೆ, ಸಂಗರ್ಷವನ್ನು ತರುವ ಕ್ಷೇತ್ರವಲ್ಲ. ಹೊಸ ಅಫಿದವಿತ್ ಕುರಿತು ಯಾವುದೇ ಉತ್ತರ ಬಯಸುತ್ತಿಲ್ಲ. ಸಲ್ಲಿಸಿರುವ ಅಫಿದವಿತ್ ಅನಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಗವರ್ನರ್ ಹಾಗೂ ದೆಹಲಿ ಸರ್ಕಾರ ನಡುವಿನ ಹಗ್ಗಜಗ್ಗಾಟ ಈಗಾಗಲೇ ಹಲವು ಬಾರಿ ಕೋರ್ಟ್ ಮೆಟ್ಟಿಲೇರಿದೆ. ಇತ್ತೀಚೆಗೆ ಸಕ್ಸೇನಾ ವಿರುದ್ಧ ಟ್ವೀಟ್ ಮಾಡದಂತೆ ದೆಹಲಿ ಸರ್ಕಾರದ ಸಚಿವರು ಹಾಗೂ ನಾಯಕರಿಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿತ್ತು. ಇದು ಆಪ್ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿತ್ತು.  ಆಮ್‌ ಆದ್ಮಿ ಪಕ್ಷ ಹಾಗೂ ಅವರ ಹಲವು ನಾಯಕರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಹೊರಿಸದಂತೆ ದೆಹಲಿ ಹೈಕೋರ್ಚ್‌ ಮಂಗಳವಾರ ಸೂಚನೆ ನೀಡಿದೆ. ಅಲ್ಲದೇ ಅವರಿಗೆ ಸಕ್ಸೇನಾ ಅವರ ವಿರುದ್ಧ ಹಂಚಿಕೊಳ್ಳಲಾದ ಮಾನಹಾನಿಕರ ಪೋಸ್ಟ್‌, ವಿಡಿಯೋ ಹಾಗೂ ಟ್ವೀಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವಂತೆ ಆದೇಶಿಸಿದೆ.

ಆಪ್‌ಗೆ ಇನ್ನೊಂದು ಸಂಕಷ್ಟ: ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ..?

ಸಕ್ಸೇನಾ ತಮ್ಮ ವಿರುದ್ಧ ಆಪ್‌ ಹಾಗೂ ನಾಯಕರಾದ ಆತಿಶಿ ಸಿಂಗ್‌, ಸೌರಭ್‌ ಭಾರದ್ವಾಜ್‌, ದುರ್ಗೇಶ್‌ ಪಾಠಕ್‌, ಸಂಜಯ್‌ ಸಿಂಗ್‌ ಹಾಗೂ ಜಾಸ್ಮಿನ್‌ ಶಾ ಸುಳ್ಳು ಆರೋಪ ಹೊರೆಸುತ್ತಿದ್ದಾರೆ ಎಂದು ಕೋರ್ಚ್‌ ಮೆಟ್ಟಿಲೇರಿದ್ದರು. ಅಲ್ಲದೇ ಮಾನಹಾನಿ ಪ್ರಕರಣದ ಹಿನ್ನೆಲೆಯಲ್ಲಿ 2.5 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಅಮಿತ್‌ ಬನ್ಸಲ್‌ ಅವರ ಪೀಠ ಈ ಮಧ್ಯಂತರ ಆದೇಶ ನೀಡಿತ್ತು.

Latest Videos
Follow Us:
Download App:
  • android
  • ios