ಆಪ್‌ಗೆ ಇನ್ನೊಂದು ಸಂಕಷ್ಟ: ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ..?

2 ವರ್ಷ ಹಿಂದೆಯೇ ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ ನಡೆದ ಬಗ್ಗೆ ವರದಿ ಸಲ್ಲಿಕೆ ಆಗಿತ್ತು. ಆದರೂ, ಇನ್ನೂ ಏಕೆ ಕ್ರಮ ತೆಗೆದುಕೊಂಡಿಲ್ಲ, ಇದು ಭ್ರಷ್ಟಾಚಾರ ಮುಚ್ಚುವ ಯತ್ನವೇ ಎಂದು ದೆಹಲಿ ಉಪ ರಾಜ್ಯಪಾಲ ಪ್ರಶ್ನೆ ಮಾಡಿದ್ದಾರೆ. 

 

 

probe into government school classrooms delayed delhi lieutenant governor seeks report ash

ನವದೆಹಲಿ: ಅಬಕಾರಿ ಗುತ್ತಿಗೆ ನೀಡಿಕೆ ಹಗರಣದ ಬಳಿಕ ದಿಲ್ಲಿಯ ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರಕ್ಕೆ ಈಗ ಶಾಲೆಗಳ ಕ್ಲಾಸ್‌ರೂಂ ನಿರ್ಮಾಣ ಅಕ್ರಮದ ಉರುಳು ಸುತ್ತಿಕೊಳ್ಳುವ ಸಾಧ್ಯತೆ ಇದೆ. ‘ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕ್ಲಾಸ್‌ರೂಂ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ 2.5 ವರ್ಷ ಆದರೂ ಏಕೆ ವಿಚಕ್ಷಣ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಂಡಿಲ್ಲ?’ ಎಂದು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ದಿಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವರದಿ ಬಯಸಿದ್ದಾರೆ.

2020ರ ಫೆ.17 ರಂದು ವಿಚಕ್ಷಣ ಆಯೋಗವು ‘ದಿಲ್ಲಿಯ ಸರ್ಕಾರಿ ಶಾಲೆಗಳ ಹೆಚ್ಚುವರಿ ಕ್ಲಾಸ್‌ರೂಂ ನಿರ್ಮಾಣದಲ್ಲಿ ಅಕ್ರಮ ನಡೆದಿದೆ. ಯೋಜನೆಯಲ್ಲಿ ನಿಯಮ ಪಾಲಿಸಿಲ್ಲ ಎಂದು ವರದಿ ನೀಡಿತ್ತು ಹಾಗೂ ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿತ್ತು.

‘’40 ಶಾಸಕರಿಗೆ ಬಿಜೆಪಿ ಆಮಿಷ: ಆಪರೇಷನ್ ಕಮಲ ವಿಫಲವಾಗಲೆಂದು ರಾಜ್‌ಘಾಟ್‌ ಬಳಿ ಪ್ರಾರ್ಥನೆ’’

ಆದರೆ 2.5 ವರ್ಷ ಆದರೂ ಏಕೆ ಕ್ರಮ ಕೈಗೊಂಡಿಲ್ಲ. ಇದು ಭ್ರಷ್ಟಾಚಾರ ಮುಚ್ಚಿಹಾಕುವ ಯತ್ನವೇ ಎಂದು ಪ್ರಶ್ನಿಸಿ ದಿಲ್ಲಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಕೇಳಿದ್ದಾರೆ.

ಏನಿದು ಅಕ್ರಮ ಆರೋಪ..?

ದಿಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 989 ಕೋಟಿ ರೂ. ಯೋಜನೆ ರೂಪಿಸಿತ್ತು. ಆದರೆ ಅಂತಿಮವಾಗಿ 860 ಕೋಟಿ ರೂ. ಗೆ ಬಿಡ್‌ ಮೂಲಕ ಗುತ್ತಿಗೆ ನೀಡಲಾಗಿತ್ತು. ಆದರೆ ಬಳಿಕ ನಾನಾ ಕಾರಣ ನೀಡಿ ಯೋಜನಾ ವೆಚ್ಚವನ್ನು 1315 ಕೋಟಿ ರೂ. ಹೆಚ್ಚಿಸಲಾಗಿತ್ತು. ಇದಕ್ಕೆ ಯಾವುದೇ ಹೊಸ ಟೆಂಡರ್‌ ಕರೆಯದೇ ಹಾಲಿ ಗುತ್ತಿಗೆದಾರರ ಮೂಲಕವೇ ಕಾಮಗಾರಿ ನಡೆಸಲಾಗಿತ್ತು. ಅಂದರೆ ಒಟ್ಟು ವೆಚ್ಚದಲ್ಲಿ ಶೇ. 53 ರಷ್ಟು ಹೆಚ್ಚಳವಾಗಿತ್ತು. ಜೊತೆಗೆ 6133 ಶಾಲಾ ಕೊಠಡಿ ಬದಲು ಕೇವಲ 4027 ಕೊಠಡಿ ನಿರ್ಮಿಸಲಾಗಿತ್ತು. 1214 ಶೌಚಾಲಯಗಳನ್ನೂ ಶಾಲಾ ಕೊಠಡಿ ಎಂದು ಲೆಕ್ಕ ತೋರಿಸಲಾಗಿತ್ತು ಎಂದು ಬಿಜೆಪಿ ಆರೋಪಿಸಿತ್ತು. 2892 ಕೋಟಿ ವೆಚ್ಚದಲ್ಲಿ 12,782 ಕ್ಲಾಸ್‌ರೂಂ ಕಟ್ಟಲಾಗಿತ್ತು. ಇದರಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂಬ ದೂರು ದಾಖಲಾಗಿತ್ತು. ಈ ಹಿನ್ನೆಲೆ ಮುಖ್ಯ ಕಾರ‍್ಯದರ್ಶಿಯಿಂದ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರು ವರದಿ ಬಯಸಿದ್ದಾರೆ. 

ಆಪ್‌ ಒಗ್ಗಟ್ಟಾಗಿದೆ ಎಂದು ತೋರಿಸಲು ವಿಶ್ವಾಸಮತ: ಕೇಜ್ರಿವಾಲ್‌

‘ಆಮ್‌ ಆದ್ಮಿ ಪಕ್ಷ (ಆಪ್‌) ಒಗ್ಗಟ್ಟಿನಿಂದ ಇದೆ ಎಂದು ತೋರಿಸಲು ವಿಶ್ವಾಸಮತ ಕೋರುವೆ’ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದರು. ಪಕ್ಷದ ಶಾಸಕರ ಸೆಳೆಯಲು ಬಿಜೆಪಿ 20 ಕೋಟಿ ರೂ. ಆಮಿಷ ಒಡ್ಡಿದೆ ಎಂಬ ಇತ್ತೀಚಿನ 4 ಆಪ್‌ ಶಾಸಕರ ಆರೋಪದ ನಡುವೆಯೇ ಕೇಜ್ರಿವಾಲ್‌ ಈ ಮಾತು ಹೇಳಿದ್ದಾರೆ. ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಶುಕ್ರವಾರ ಮಾತನಾಡಿದರು.

ನಮ್ಮ 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ಆಫರ್‌: ಎಎಪಿ ಸ್ಫೋಟಕ ಆರೋಪ

‘ಈ ವರ್ಷ ನಡೆಯುವ ಗುಜರಾತ್‌ ಚುನಾವಣೆಯಲ್ಲಿ ಆಪ್‌ ಪ್ರಬಲವಾಗುತ್ತಿದೆ. ಬಿಜೆಪಿ ಕೋಟೆ ಕುಸಿಯುತ್ತಿದೆ. ಹೀಗಾಗಿ ಆಪ್‌ ಹತ್ತಿಕ್ಕಲು ದಿಲ್ಲಿಯ ಆಪ್‌ ಸರ್ಕಾರ ಹಗರಣ ನಡೆಸುತ್ತಿದೆ ಎಂಬ ಸುಳ್ಳು ಪುಕಾರುಗಳನ್ನು ಬಿಜೆಪಿ ಹರಿಬಿಟ್ಟಿದೆ. ಅದಕ್ಕೆಂದೇ ನಮ್ಮ ಮೇಲೆ ಸಿಬಿಐ, ಇ.ಡಿ. ದಾಳಿ ನಡೆಸುತ್ತಿದೆ. ಈ ಹಿಂದೆ ಇಂಥದ್ದೇ ಬೆದರಿಕೆ ಹಾಕಿ ಮಧ್ಯಪ್ರದೇಶ, ಗೋವಾ, ಮಹಾರಾಷ್ಟ್ರ ಸೇರಿ ಅನೇಕ ಸರ್ಕಾರ ಬೀಳಿಸಲಾಗಿದೆ’ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios