ಮಸೀದಿ ಜಾಗದ ಗುತ್ತಿಗೆ ಅವಧಿಯು ಮುಕ್ತಾಯಗೊಂಡಿದ್ದು ಅವಧಿ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬಹುದು’ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಹಾಗೆಯೇ 3 ತಿಂಗಳೊಳಗಾಗಿ ಮಸೀದಿ ತೆರವು ಮಾಡದೆ ಹೋದಲ್ಲಿ ಅಧಿಕಾರಿಗಳು ಹಾಗೂ ಅಲಹಾಬಾದ್‌ ಹೈಕೋರ್ಟ್‌ಗೆ ಮಸೀದಿ ತೆರವು ಮಾಡುವ ಮುಕ್ತ ಅಧಿಕಾರವಿರುತ್ತದೆ’ ಎಂದೂ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಪೀಠ ತಿಳಿಸಿದೆ.

ನವದೆಹಲಿ (ಮಾರ್ಚ್‌ 14,2023): ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ನ ಆವರಣದಲ್ಲಿರುವ ಮಸೀದಿಯನ್ನು 3 ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತಾಗಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಸಿದೆ.
ಮಸೀದಿ (Masjid) ತೆರವುಗೊಳಿಸುವಂತೆ ಅಲಹಾಬಾದ್‌ ಹೈಕೋರ್ಟ್‌ (Allahabad High Court) 2017ರಲ್ಲಿ ಆದೇಶಿಸಿತ್ತು. ಹೈಕೋರ್ಟ್‌ನ (High Court) ಈ ಆದೇಶವನ್ನು ಪ್ರಶ್ನಿಸಿ ವಕ್ಫ್ (Wakf) ಮಸೀದಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್‌ ವಕ್ಫ್ ಬೋರ್ಡ್‌ಗಳು ಸುಪ್ರೀಂಕೋರ್ಟ್‌ಗೆ (Supreme Court) ಮೇಲ್ಮನವಿ ಸಲ್ಲಿಸಿದ್ದವು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ (Judge) ಎಂ.ಆರ್‌. ಶಾ ಹಾಗೂ ನ್ಯಾಯಮೂರ್ತಿ ಸಿ.ಟಿ ರವಿಕುಮಾರ್‌ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ಅಲ್ಲದೇ ‘ಮಸೀದಿ ಜಾಗದ ಗುತ್ತಿಗೆ ಅವಧಿಯು ಮುಕ್ತಾಯಗೊಂಡಿದ್ದು ಅವಧಿ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಮಸೀದಿ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬಹುದು’ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಹಾಗೆಯೇ 3 ತಿಂಗಳೊಳಗಾಗಿ ಮಸೀದಿ ತೆರವು ಮಾಡದೆ ಹೋದಲ್ಲಿ ಅಧಿಕಾರಿಗಳು ಹಾಗೂ ಅಲಹಾಬಾದ್‌ ಹೈಕೋರ್ಟ್‌ಗೆ ಮಸೀದಿ ತೆರವು ಮಾಡುವ ಮುಕ್ತ ಅಧಿಕಾರವಿರುತ್ತದೆ’ ಎಂದೂ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಪೀಠ ತಿಳಿಸಿದೆ.

ಇದನ್ನು ಓದಿ: ಮಥುರಾ ಮಸೀದಿ ಸಮೀಕ್ಷೆಗೆ ಶಾಹಿ ಈದ್ಗಾ ಮಸೀದಿ ಸಮಿತಿ ಆಕ್ಷೇಪಣೆ: ಅರ್ಜಿ ಸಲ್ಲಿಸಲು ನಿರ್ಧಾರ