ಜ್ಞಾನವ್ಯಾಪಿ ಮಸೀದಿಯೊಳಗೆ ಶಿವಲಿಂಗ, ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ನೋಟಿಸ್ ಶಾಕ್!

ಜ್ಞಾನವ್ಯಾಪಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್ ಇದೀಗ ಮಹತ್ವ ನಿರ್ಣಯ ತೆಗೆದುಕೊಂಡಿದೆ. ಕಳೆದ ಸಮೀಕ್ಷೆಯಲ್ಲಿ ಮಸೀದಿ ಬಾವಿಯೊಳಗೆ ಶಿವಲಿಂಗ್ ಪತ್ತೆಯಾಗಿತ್ತು. ಈ ಕುರಿತು ಇದೀಗ ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿ ಸಮಿತಿಗೆ ನೋಟಿಸ್ ನೀಡಿದೆ.
 

Supreme court ask response from Gyanvapi mosque committee for ASI survey ckm

ನವದೆಹಲಿ(ನ.22) ಕಾಶಿ ವಿಶ್ವನಾಥ ದೇಗುಲ ಹಾಗೂ ಜ್ಞಾನವ್ಯಾಪಿ ಮಸೀದಿ ನಡುವಿನ ಕಾನೂನು ಹೋರಾಟ ತೀವ್ರಗೊಳ್ಳುತ್ತಿದೆ. ಜ್ಞಾನವಾಪಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಅನ್ನೋ ಹೋರಾಟಕ್ಕೆ ಇದೀಗ ಮತ್ತೊಂದು ಪುಷ್ಠಿ ಸಿಕ್ಕಿದೆ. ಕಳೆದ ಬಾರಿಯ ವಿಡಿಯೋಗ್ರಫಿ ಸಮೀಕ್ಷೆಯಲ್ಲಿ ಮಸೀದಿಯ ವಜುಖಾನ ಪ್ರದೇಶದಲ್ಲಿರುವ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಮೊದಲ ಸಮೀಕ್ಷೆಯ ವರದಿ ಆಧರಿಸಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇದೀಗ ಶಿವಲಿಂಗ ಪತ್ತೆಯಾದ ಸ್ಥಳ ಹಾಗೂ ಹಿಂದೂ ದೇವಾಲದ ಕುರುಹುಗಳಿರುವ ಸ್ಥಳದಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸುವ ಕುರಿತು ಮಸೀದಿ ಸಮಿತಿಗೆ ನೋಟಿಸ್ ನೀಡಿದೆ.

ಜ್ಞಾನವಾಪಿ ಮಸೀದಿ ಸಮಿತಿ 2 ವಾರಗಳಲ್ಲಿ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಮಸೀದಿಯಲ್ಲಿ ಉತ್ಖನನ ನಡೆಸುವ ಕುರಿತು ಅಲಹಾಬಾದ್ ಹೈಕೋರ್ಟ್ ಕೂಡ ಸಮೀದಿ ಸಮಿತಿಗೆ ನೋಟಿಸ್ ನೀಡಿತ್ತು. ಆದರೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಆದೇಶ ಹೊರಬರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಮಸೀದಿ ಸಮಿಗೆ ನೀಡಿರುವ ನೋಟಿಸ್ ಜ್ಞಾನವಾಪಿ ಮಸೀದಿ ಕುರಿತು ಕಾನೂನು ಹೋರಾಟಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ. 

ಹಿಂದೂ ಹೋರಾಟಕ್ಕೆ ಗೆಲುವು, ಗ್ಯಾನವಾಪಿ ಮಸೀದಿಯಲ್ಲಿ ಪೂಜೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ!

ಕಾರಣ ಆಯೋಧ್ಯೆ ರಾಮ ಮಂದಿರ ವಿವಾದಲ್ಲೂ ಪುರಾತತ್ವ ಇಲಾಖೆಯ ಉತ್ಖನನ ವರದಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಉತ್ಖನನದಲ್ಲಿ ಬಾಬ್ರಿ ಮಸೀದಿ ಅಡಿಯಲ್ಲಿ ಹಿಂದೂ ಮಂದಿರವಿತ್ತು ಅನ್ನೋದು ಸ್ಪಷ್ಟವಾಗಿತ್ತು. ಇದೇ ಮಂದಿರದ ಅಡಿಪಾಯ ಹಾಗೂ ಕೆಲ ಕಂಬಗಳು, ಕಲ್ಲುಗಳನ್ನು ಬಳಸಿ ಮಸೀದಿ ಕಟ್ಟಲಾಗಿತ್ತು ಅನ್ನೋದು ಉತ್ಖನನದಲ್ಲಿ ದೃಢಪಟ್ಟಿತ್ತು. ಈ ವರದಿ ಹಾಗೂ ಇತರ ದಾಖಲೆಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ಆಯೋಧ್ಯೆ ವಿವಾದಕ್ಕೆ ಅಂತ್ಯಹಾಡಿತ್ತು. ರಾಮ ಜನ್ಮಭೂಮಿಯನ್ನು ಶ್ರೀರಾಮ ಟ್ರಸ್ಟ್‌ಗೆ ಒಪ್ಪಿಸಿ ಮಂದಿರ ಕಟ್ಟಲು ಅನುಮತಿ ನೀಡಿತ್ತು.  ಇದೀಗ ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದರೆ ಈ ಉತ್ಖನನ ವರದಿ ಜ್ಞಾನವಾಪಿ ಮಸೀದಿ ಹೋರಾಟದಲ್ಲಿ ಮಹತ್ವದ ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. 

ಮಸೀದಿ ಸಮೀತಿಯ ಉತ್ತರ ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಮಸೀದಿ ಸಮಿತಿ ಉತ್ಖನನಕ್ಕೆ ಅವಕಾಶ ನೀಡದಿರಲು ಕಾರಣಗಳನ್ನು ಸೂಚಿಸಲಿದೆ. ಮಸೀದಿಗೆ ಧಕ್ಕೆ ಸೇರಿದಂತೆ ಹಲವು ಕಾರಣಗಳನ್ನು ನೀಡುವ ಸಾಧ್ಯತೆ ಇದೆ. ಆದರೆ ಈಗಾಗಲೇ ಹಿಂದೂ ಪರ ವಕೀಲರು ಜ್ಞಾನವಾಪಿಯಲ್ಲಿ ಉತ್ಖನನ ನಡೆಸಬೇಕು ಎಂದು ಅರ್ಜಿ ಸಲ್ಲಿಸಿ ತಮ್ಮ ವಾದ ಮುಂದಿಟ್ಟಿದ್ದಾರೆ. ಈ ವಾದವನ್ನು ಪರಿಗಣಿಸಿರುವ ಕಾರಣ ಉತ್ಖನನಕ್ಕೆ ಅವಕಾಶ ನೀಡುವ ಕುರಿತು ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. 

ಜ್ಞಾನವಾಪಿ ಮಸೀದಿ ಗೋಡೆ ಮೇಲಿರುವ 5 ಹಿಂದೂ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಅನ್ನೋ ಮನವಿಯಿಂದ ತೀವ್ರಗೊಂಡ ಹೋರಾಟ ಇದೀಗ ಉತ್ಖನನ ವರೆಗೂ ಬಂದು ತಲುಪಿದೆ. ಇದರ ನಡುವೆ ನೆಲಮಾಳಿಗೆಯಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಲಾಗಿದೆ. 

ಭೋಜಶಾಲಾ ದೇವಾಲಯ ಸಂಕೀರ್ಣದ ಎಎಸ್‌ಐ ಸರ್ವೆಗೆ ಆದೇಶ ನೀಡಿದ ಹೈಕೋರ್ಟ್‌!
 

Latest Videos
Follow Us:
Download App:
  • android
  • ios