ಭೋಜಶಾಲಾ ದೇವಾಲಯ ಸಂಕೀರ್ಣದ ಎಎಸ್‌ಐ ಸರ್ವೆಗೆ ಆದೇಶ ನೀಡಿದ ಹೈಕೋರ್ಟ್!
ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ದೇವನಾರಾಯಣ ಮಿಶ್ರಾ ಅವರ ಪೀಠವು ಭೋಜಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಂಪೂರ್ಣ ವೈಜ್ಞಾನಿಕ ತನಿಖೆ, ಸಮೀಕ್ಷೆ ಮತ್ತು ಉತ್ಖನನಕ್ಕೆ ಆದೇಶ ನೀಡಿದೆ.
ನವದೆಹಲಿ (ಮಾ.11): ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ 'ವಿವಾದಿತ' ಭೋಜಶಾಲಾ ದೇವಾಲಯ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣೆಗೆ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ದೇವನಾರಾಯಣ ಮಿಶ್ರಾ ಅವರ ಪೀಠವು ಭೋಜಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಂಪೂರ್ಣ ವೈಜ್ಞಾನಿಕ ತನಿಖೆ, ಸಮೀಕ್ಷೆ ಮತ್ತು ಉತ್ಖನನಕ್ಕೆ ಆದೇಶ ನೀಡಿದೆ. ಎಎಸ್‌ಐನ ಐವರು ಅಥವಾ ಅದಕ್ಕಿಂತ ಹೆಚ್ಚು ಹಿರಿಯ ಅಧಿಕಾರಿಗಳ ತಜ್ಞರ ಸಮಿತಿಯು ಎಎಸ್‌ಐನ ಡೈರೆಕ್ಟರ್ ಜನರಲ್ ಅಥವಾ ಹೆಚ್ಚುವರಿ ಡೈರೆಕ್ಟರ್ ಜನರಲ್ ನೇತೃತ್ವದಲ್ಲಿ ಸಿದ್ಧಪಡಿಸಿದ ಸಮೀಕ್ಷೆಯ ಸರಿಯಾದ ದಾಖಲಿತ ವರದಿಯನ್ನು ಆರು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ವಿವಾದಿತ ಭೋಜಶಾಲಾ ದೇವಸ್ಥಾನ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣದ ಸುತ್ತಮುತ್ತಲಿನ ಸಂಪೂರ್ಣ 50 ಮೀಟರ್ ಪೆರಿಫೆರಲ್ ರಿಂಗ್ ಪ್ರದೇಶವನ್ನು ರೂಪಿಸುವ ವಿವಾದಿತ ಜಾಗದ ಜಿಪಿಆರ್-ಜಿಪಿಎಸ್ ಸಮೀಕ್ಷೆಯನ್ನು ಇತ್ತೀಚಿನ ವಿಧಾನಗಳು, ತಂತ್ರಗಳು ಮತ್ತು ವಿಧಾನಗಳ ಅಳವಡಿಕೆಯ ಮೂಲಕ ಸಂಪೂರ್ಣ ವೈಜ್ಞಾನಿಕ ತನಿಖೆ ಸಮೀಕ್ಷೆ ಮತ್ತು ಉತ್ಖನನ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಜ್ಞಾನವಾಪಿಯ ಗೋಡೆಗಳಲ್ಲಿ ಸಿಕ್ಕ ತೆಲುಗು ಶಾಸನಗಳಲ್ಲಿದೆ ಮಂದಿರದ ಮಾಹಿತಿ!
ಕಾರ್ಬನ್ ಡೇಟಿಂಗ್ ವಿಧಾನದ ಮೂಲಕ ವಿವರವಾದ ವೈಜ್ಞಾನಿಕ ತನಿಖೆಯನ್ನು ನಡೆಸಬೇಕು ಎಂದು ನ್ಯಾಯಾಲಯವು ಹೇಳಿದೆ, ಸಂಕೀರ್ಣದಲ್ಲಿನ ರಚನೆಗಳ ಎಷ್ಟು ವರ್ಷಗಳಿಂದ ಇದ, ನೆಲದ ಮೇಲೆ ಮತ್ತು ಭೂಗತ ಸ್ಥಳದಲ್ಲಿರುವ ಶಿಲ್ಪಗಳ ವಿವರಗಳೇನು ಎನ್ನುವ ಮಾಹಿತಿ ಇರಬೇಕು. ಈ ವೇಳೆ ಎರಡೂ ಕಡೆಯವರಿಂದ ನಾಮನಿರ್ದೇಶನಗೊಂಡ ಇಬ್ಬರು ಪ್ರತಿನಿಧಿಗಳ ಸಮ್ಮುಖದಲ್ಲಿ ಸಮೀಕ್ಷೆಯ ಪ್ರಕ್ರಿಯೆಗಳನ್ನು ಛಾಯಾಚಿತ್ರ ಮತ್ತು ವೀಡಿಯೊಗ್ರಾಫ್ ಮಾಡಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಅಧ್ಯಯನಕ್ಕಾಗಿ ಮಾತ್ರ ವರದಿ ಸಲ್ಲಿಕೆ: ಗ್ಯಾನವಾಪಿ ಸಮೀಕ್ಷಾ ವರದಿ ಬಹಿರಂಗ ಬೇಡ: ಕೋರ್ಟ್