Char Dham Road Project: 900 ಕಿಮೀ ಡಬಲ್‌ಲೇನ್‌ ರಸ್ತೆಗೆ ಸುಪ್ರೀಂ ಅಸ್ತು!

*ಚಾರ್‌ಧಾಮ್‌ ಹೆದ್ದಾರಿ ಯೋಜನೆಗಾಗಿ ಡಬಲ್‌ ಲೇನ್‌ ರಸ್ತೆ
*ಹೆದ್ದಾರಿ ಅಗಲೀಕರಣಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ
*ಭಾರೀ ಪ್ರಮಾಣದ ಮರಗಳ ನಾಶ: ಪರಿಸರವಾದಿಗಳ ಆರೋಪ

Supreme Court allows double lane Char Dham road project in Uttarakhand mnj

ನವದೆಹಲಿ    (ಡಿ. 15): ಉತ್ತರಾಖಂಡದ ಚಾರ್‌ಧಾಮ್‌ ಹೆದ್ದಾರಿ (Char Dham Road Project) ಯೋಜನೆಗಾಗಿ ಡಬಲ್‌ ಲೇನ್‌ ರಸ್ತೆ ಅಗಲೀಕರಣಕ್ಕೆ ಸುಪ್ರೀಂ ಕೋರ್ಟ್‌ (Supreme Court) ಮಂಗಳವಾರ ಅನುಮತಿ ನೀಡಿದೆ. 900 ಕಿಮೀ ಚಾರ್‌ಧಾಮ್‌ ಹೆದ್ದಾರಿ ಅಗಲೀಕರಣ ಯೋಜನೆಯು ನಾಲ್ಕು ಪವಿತ್ರ ಧಾಮಗಳಾದ ಗಂಗೋತ್ರಿ (Gangotri), ಯಮುನೋತ್ರಿ (Yamunotri), ಕೇದಾರನಾಥ್‌ (Kedarnath), ಬದರಿನಾಥ್‌ಗಳಿಗೆ (Badrinath) ಎಲ್ಲ ಹವಾಮಾನದಲ್ಲೂ ಸಂಪರ್ಕ ಒದಗಿಸುವ ಯೋಜನೆಯಾಗಿದೆ. ಇದರಿಂದ ಇಡೀ ಪ್ರದೇಶಕ್ಕೆ ಭೂಕುಸಿತದಂಥ ಅಪಾಯವಿದೆ. ಜೊತೆಗೆ ಯೋಜನೆಗಾಗಿ ಭಾರೀ ಪ್ರಮಾಣದ ಮರಗಳನ್ನು ಕಡಿಯಲಾಗುತ್ತದೆ ಎಂದು ಪರಿಸರವಾದಿಗಳು ವಾದಿಸಿದ್ದರು.

ಆದರೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ, ಭಾರತ- ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ 12000 ಕೋಟಿ ರು. ವೆಚ್ಚ ಸರ್ವಋುತು ರಸ್ತೆ ನಿರ್ಮಾಣದಿಂದಾಗಿ ಕ್ಷಿಪಣಿ ಉಡ್ಡಯಕ, ಭಾರೀ ರಕ್ಷಣಾ ಉಪಕರಣಗಳನ್ನು ತ್ವರಿತವಾಗಿ ಸಾಗಿಸಬಹುದು. ಹೀಗಾಗಿ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಜೊತೆಗೆ ರಸ್ತೆ ಅಗಲೀಕರಣದಿಂದ ಹಿಮಾಲಯ ಪ್ರದೇಶದಲ್ಲಿ ಭೂಕುಸಿತದಂತಹ ದುರಂತವನ್ನು ತಗ್ಗಿಸಲು ಅಗತ್ಯಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿತ್ತು.

ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣದ (Line of Control) ಬಳಿಯಿರುವ ತೀತ್ವಾಲ್‌ನಲ್ಲಿರುವ (Teetwal) ಮಾತಾ ಶಾರದಾ ದೇವಿಯ ದೇವಸ್ಥಾನದ ಮರು ನಿರ್ಮಾಣಕ್ಕೆ ಸೇವ್‌ ಶಾರದ ಸಮಿತಿ(ಶಾರದ ಸಮಿತಿ ರಕ್ಷಣೆ - Save Sharda Committee) ಶಂಕು ಸ್ಥಾಪನೆ (Foundation Stone) ನೆರವೇರಿಸಿದೆ. ಈ ಕಾರ್ಯಕ್ರಮದಲ್ಲಿ 200 ಮಂದಿ ಸ್ಥಳೀಯರು, ಶಾರದಾ ಯೋಜನೆ ಬೆಂಬಲಿಸುವ 100 ಮಂದಿ ಭಾಗವಹಿಸಿದ್ದರು. ಈ ವೇಳೆ ಎಲ್ಲರಿಗೂ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಲಾಯಿತು.

Modi In Varanasi: ಕಾಶಿ ಹಾದಿಯಲ್ಲಿ ಕಾರು ನಿಲ್ಲಿಸಿ ಸ್ಥಳೀಯರು ಕೊಟ್ಟ ಪಗಡಿ, ಶಾಲು ಧರಿಸಿದ ಮೋದಿ!

ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರತಿಕ್ರಿಯಿಸಿದ ಸಮಿತಿ, ‘ಶತಮಾನಗಳ ಕಾಲದಿಂದಲೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (Pakistan Occupied Kashmir) ಶಾರದ ಪೀಠಕ್ಕೆ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದರು. ಚರ್ರಿ ಮುಬಾರಕ್‌ (Charri Mubarak) ಎಂದೇ ಪ್ರಖ್ಯಾತಿಯಾಗಿದ್ದ ಈ ವಾರ್ಷಿಕ ಯಾತ್ರೆಗೆ ತೀತ್ವಾಲ್‌ನ ಈ ಶಾರದಾ ದೇವಸ್ಥಾನ ಸಾಂಪ್ರದಾಯಿಕ ಮಾರ್ಗವಾಗಿದೆ. ಪಿಒಕೆಯ ಶಾರದಾ ಪೀಠಕ್ಕೆ 1948ರ ವರೆಗೆ ಭಕ್ತರ ವಾರ್ಷಿಕ ಯಾತ್ರೆ ನಡೆಯುತ್ತಿತ್ತು. ಈ ವಾರ್ಷಿಕ ಯಾತ್ರೆಯನ್ನು ಪುನಃ ಉತ್ತೇಜಿಸಲು ಉತ್ತರ ಕಾಶ್ಮೀರದ ಕುಪ್ವಾರ (Kupwara) ಜಿಲ್ಲೆಯಲ್ಲಿರುವ ಪೌರಾಣಿಕ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದೆ

ಗತಕಾಲದ ವೈಭವದ ಅನುಭವ ನೀಡಲಿದೆ ಈ ಧಾಮ

 ಕಾಶಿ ವಿಶ್ವನಾಥ ಧಾಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ನಾನು ಕೊತ್ವಾಲ್ ಕಾಲಭೈರವ್ ಜೀ ನಗರಕ್ಕೆ ತಲೆಬಾಗಿ ಬರುತ್ತಿದ್ದೇನೆ. ನಾನು ದೇಶವಾಸಿಗಳಿಗಾಗಿ ಅವರ ಆಶೀರ್ವಾದವನ್ನು ತರುತ್ತಿದ್ದೇನೆ. ಕಾಶಿಯಲ್ಲಿ ಏನಾದರೂ ವಿಶೇಷತೆ ಇದ್ದರೆ ಮೊದಲು ಅವರನ್ನೇ ಕೇಳಬೇಕು. 

ನಾನು ಕಾಶಿಯ ಕೊತ್ವಾಲ್‌ನ ಪಾದಗಳಿಗೆ ನಮಸ್ಕರಿಸುತ್ತೇನೆ. ಕಾಶಿಯನ್ನು ಪ್ರವೇಶಿಸಿದ ಕೂಡಲೇ ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ವಿಶ್ವೇಶ್ವರನ ಆಶೀರ್ವಾದ, ಅಲೌಕಿಕ ಶಕ್ತಿಯನ್ನು ನೀಡುತ್ತದೆ. ನಾವು ಇಲ್ಲಿಗೆ ಬಂದ ತಕ್ಷಣ, ಅದು ನಮ್ಮ ಆಂತರಿಕ ಆತ್ಮವನ್ನು ಜಾಗೃತಗೊಳಿಸುತ್ತದೆ. ನೀವು ಇಲ್ಲಿಗೆ ಬಂದಾಗ, ನೀವು ಕೇವಲ ನಂಬಿಕೆಯನ್ನು ನೋಡುವುದಿಲ್ಲ.

Grand Kashi Project: ಪುಷ್ಪವೃಷ್ಠಿ ಮಾಡಿ ಕೆಲಸಗಾರರನ್ನು ಗೌರವಿಸಿದ ಪ್ರಧಾನಿ

ವಿಶ್ವನಾಥ ಧಾಮದ ಈ ಸಂಪೂರ್ಣ ಹೊಸ ಸಂಕೀರ್ಣವು ಕೇವಲ ಭವ್ಯವಾದ ಕಟ್ಟಡವಲ್ಲ, ಇದು ನಮ್ಮ ಭಾರತದ ಸನಾತನ ಸಂಸ್ಕೃತಿಯ ಸಂಕೇತವಾಗಿದೆ! ಇದು ನಮ್ಮ ಆಧ್ಯಾತ್ಮಿಕ ಆತ್ಮದ ಸಂಕೇತವಾಗಿದೆ! ಇದು ಭಾರತದ ಪ್ರಾಚೀನತೆಯ ಸಂಕೇತವಾಗಿದೆ, ಸಂಪ್ರದಾಯಗಳ. ಭಾರತದ ಶಕ್ತಿ, ಕ್ರಿಯಾಶೀಲತೆ."

ಇಲ್ಲಿನ ಗತವೈಭವವನ್ನು ನೀವೂ ಇಲ್ಲಿ ಅನುಭವಿಸುವಿರಿ. ಪುರಾತನ ಮತ್ತು ನವೀನತೆಯು ಹೇಗೆ ಒಟ್ಟಿಗೆ ಜೀವಂತವಾಗುತ್ತಿವೆ, ಪ್ರಾಚೀನರ ಸ್ಫೂರ್ತಿಗಳು ಹೇಗೆ ಭವಿಷ್ಯತ್ತಿಗೆ ದಿಕ್ಕನ್ನು ನೀಡುತ್ತಿವೆ ಎಂಬುದನ್ನು ನಾವು ವಿಶ್ವನಾಥ ಧಾಮ ಸಂಕೀರ್ಣದಲ್ಲಿ ನೋಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

Latest Videos
Follow Us:
Download App:
  • android
  • ios