ಉಗ್ರರಿಗೆ ಹಣ ಪೂರೈಕೆ: ಶ್ರೀನಗರದ ಹುರಿಯತ್ ಕಚೇರಿ ಎನ್‌ಐಎ ವಶಕ್ಕೆ
ಉಗ್ರರಿಗೆ ಹಣ ಪೂರೈಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ ರಾಜ್‌ಬಾಗ್ ಪ್ರದೇಶದಲ್ಲಿರುವ ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಕಚೇರಿಯನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದುಕೊಂಡಿದೆ.

ಶ್ರೀನಗರ: ಉಗ್ರರಿಗೆ ಹಣ ಪೂರೈಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ ರಾಜ್‌ಬಾಗ್ ಪ್ರದೇಶದಲ್ಲಿರುವ ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಕಚೇರಿಯನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದುಕೊಂಡಿದೆ. ಶ್ರೀನಗರಕ್ಕೆ ಆಗಮಿಸಿದ ಅಧಿಕಾರಿಗಳು ಕಚೇರಿಯ ಹೊರಭಾಗದಲ್ಲಿ ಕಟ್ಟಡವನ್ನು ಜಪ್ತಿ ಮಾಡಿರುವ ಕುರಿತಾಗಿ ನೋಟಿಸ್ ಅನ್ನು ಅಂಟಿಸಿದ್ದು, ಎನ್‌ಐಎ ವಿಶೇಷ ನ್ಯಾಯಾಲಯ ಜ.27ರಂದು ನೀಡಿದ ತೀರ್ಪಿನ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 1993ರಲ್ಲಿ ರಚನೆಯಾದ ಹುರಿಯತ್ ಕಾನ್ಫರೆನ್ಸ್ 26 ಪ್ರತ್ಯೇಕವಾದಿ ಬಣಗಳ ಒಕ್ಕೂಟವಾಗಿದೆ, 2019ರಲ್ಲಿ ಈ ಸಂಘಟನೆಯ ವಿರುದ್ಧ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಈ ಕಚೇರಿಯನ್ನು ಮುಚ್ಚಲಾಗಿತ್ತು.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್: 6 ಕಡೆ ಎನ್‌ಐಎ ದಾಳಿ, ಇಬ್ಬರ ಬಂಧನ
ಕೇರಳದ ಹಲವು ಪಿಎಫ್‌ಐ ನಾಯಕರಿಗೆ ಐಸಿಸ್, ಅಲ್‌ಖೈದಾ ನಂಟು: ಎನ್‌ಐಎ