Asianet Suvarna News Asianet Suvarna News

ರಾ​ಮ​ನ ವಿಗ್ರಹ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ!

* ಪ್ರತಿ ರಾಮನವಮಿ ದಿವಸ ಈ ಪ್ರಾಕೃ​ತಿಕ ಪವಾಡ ಸೃಷ್ಟಿಗೆ ನಿರ್ಧಾ​ರ

* ರಾ​ಮ​ನಿಗೆ ಸೂರ‍್ಯ ರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ

* ಸೂರ್ಯರಶ್ಮಿ ಗರ್ಭಗುಡಿ ಪ್ರವೇಶಿಸುವಂತೆ ರಾಮಮಂದಿರ ನಿರ್ಮಾಣ

* ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯ ಕಾಮೇಶ್ವರ್‌ ಚೌಪಾಲ್‌ ಹೇಳಿಕೆ

* 2023ರ ಡಿಸೆಂಬರ್‌ ವೇಳೆಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣ

Sun rays to illuminate sanctum sanctorum of Ram temple in Ayodhya pod
Author
Bangalore, First Published Oct 18, 2021, 8:51 AM IST
  • Facebook
  • Twitter
  • Whatsapp

ನವದೆಹಲಿ(ಅ.18): ಅಯೋಧ್ಯೆ ರಾಮಮಂದಿರ(Ayodhya Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಪ್ರತಿ ರಾಮನವಮಿ(Ram Navami) ದಿನ ಸೂರ್ಯರಶ್ಮಿ(Sun Rays) ಗರ್ಭಗುಡಿ ಪ್ರವೇಶಿಸುವಂತೆ ವಿನ್ಯಾಸಗೊಳಿಸಲಾಗು​ವು​ದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌Sri Ram Janmabhoomi Tirath Kshetra Trust) ಸದಸ್ಯ ಕಾಮೇ​ಶ್ವರ ಚೌಪಾ​ಲ್‌ ತಿಳಿಸಿದ್ದಾರೆ.

ಈ ಒಂದು ವಿನ್ಯಾಸಕ್ಕೆ 13ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯವೇ( Sun temple at Konark in Odisha) ಪ್ರೇರಣೆ ಎಂದಿದ್ದಾರೆ.

ವಿಜ್ಞಾನಿಗಳು(Scientists), ಜ್ಯೋತಿಷಿಗಳು, ಮತ್ತು ತಂತ್ರಜ್ಞರ ಸಲಹೆ ಪಡೆದು ರಾಮನವಮಿಯಂದು(Ram Navami) ಸೂರ್ಯರಶ್ಮಿ ಗರ್ಭಗುಡಿ ಪ್ರೇವೇಶಿಸುವಂತೆ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಕೋನಾರ್ಕ್ದ ಸೂರ್ಯ ದೇಗುಲ ನಮಗೆ ಮಾದರಿಯಾಗಿದೆ ಎಂದಿ​ದ್ದಾ​ರೆ.

2023ರ ಡಿಸೆಂಬರ್‌ ವೇಳೆಗೆ ರಾಮಮಂದಿರ(Ram Navami) ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಮೊದಲಹಂತದ ನಿರ್ಮಾಣ ಕಾರ್ಯಗಳು ಮುಕ್ತಾಯವಾಗಿದ್ದು ನವೆಂಬರ್‌ ಮೂರನೇ ವಾರದಿಂದ ಎರಡನೇ ಹಂತದ ನಿರ್ಮಾಣ ಕಾರ್ಯಗಳು ಶುರುವಾಗಲಿವೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಭೂಕಂಪ ಪೀಡತ ಮತ್ತು ಹಿಮಾಲಯದ ತಪ್ಪಲಲ್ಲಿರುವ ಪ್ರದೇಶವಾದ್ದರಿಂದ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ವೈಜ್ಞಾನಿಕ, ಭೌಗೋಳಿಕ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಮೂಲ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಎರಡು ಅಂತಸ್ತಿನ ಬದಲು ಮೂರು ಅಂತಸ್ತು ಕಟ್ಟಲಾಗುತ್ತದೆ ಎಂದು ಚೌಪಾಲ್‌ ತಿಳಿಸಿದ್ದಾರೆ.

ಅಲ್ಲದೇ ರಾಮಮಂದಿರ ವಸ್ತು ಸಂಗ್ರಹಾಲಯ, ದಾಖಲೆಗಳ ಸಂಗ್ರಹಾಲಯ ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಪ್ರವಾಸಿ ಕೇಂದ್ರ ಆಡಳಿತ ಭವನ, ಯೋಗ ಕೇಂದ್ರ ಸೇರಿ ಇತರ ಸೌಲÜಭ್ಯಗಳನ್ನು ಒಳಗೊಂಡಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌

 ರಾಮಮಂದಿರ ಅಡಿಪಾಯ ನಿರ್ಮಾಣದ ನಂತರ ದೇವಸ್ಥಾನದ ಎರಡನೇ ಹಂತದ ನಿರ್ಮಾಣ ಕಾರ್ಯಗಳಿಗೆ ಮಂಗಳವಾರ ಚಾಲನೆ ನೀಡಲಾಗಿದೆ. ಈ ಹಂತದಲ್ಲಿ ದೇವಸ್ಥಾನದ ಪ್ಲಿಂಥ್‌ ನಿರ್ಮಾಣಕ್ಕೆ ಕರ್ನಾಟಕ ಚಾಮರಾಜನಗರದ ಕೊಳ್ಳೆಗಾಲ ಪ್ರದೇಶದ ಕಪ್ಪು ಗ್ರಾನೈಟ್‌ ಕಲ್ಲನ್ನು ಬಳಸಲಾಗುತ್ತಿದೆ. ಇದರ ಅಕ್ಕಪಕ್ಕದಲ್ಲಿ ಮಿರ್ಜಾಪುರದ ಕಲ್ಲುಗಳು ಮತ್ತು ರಾಜಸ್ಥಾನದ ಗುಲಾಬಿ ಬಣ್ಣದ ಕಲ್ಲುಗಳಲ್ಲಿ ಶಿಲ್ಪಗಳನ್ನು ಕೆತ್ತಲಾಗುತ್ತಿದೆ.

‘ಈಗಾಗಲೇ ಕೊಳ್ಳೆಗಾಲ ಮತ್ತು ಮಿರ್ಜಾಪುರಗಳಿಂದ ಕಲ್ಲುಗಳ ಪೂರೈಕೆ ಆರಂಭವಾಗಿದೆ. ಭಾರತಾದ್ಯಂತ ವಿಎಚ್‌ಪಿ 2 ಲಕ್ಷ ಇಟ್ಟಿಗೆಗಳನ್ನು ದೇವಸ್ಥಾನಕ್ಕಾಗಿ ಸಂಗ್ರಹ ಮಾಡಿದೆ. 1989ರಿಂದ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ 3 ಲಕ್ಷಕ್ಕೂ ಇಟ್ಟಿಗೆಗಳನ್ನು ನೀಡಿದ್ದಾರೆ ಈಗ ಇವುಗಳನ್ನು ದೇವಸ್ಥಾನ ನಿರ್ಮಾವಾಗುತ್ತಿರುವ ಸ್ಥಳಕ್ಕೆ ಸಾಗಿಸಲಾಗುತ್ತಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್‌ನ ಸದಸ್ಯ ಅನಿಲ್‌ ಮಿಶ್ರಾ ಹೇಳಿದ್ದಾರೆ.

Follow Us:
Download App:
  • android
  • ios