ಮುಂಬೈ(ಡಿ.04): ಸೂಟ್‌ಕೇಸ್‌ವೊಂದರಲ್ಲಿ ಕತ್ತರಿಸಿದ ಮೃತದೇಹವೊಂದು ವಾಣಿಜ್ಯ ನಗರಿ ಮುಂಬೈ ಸಮುದ್ರ ತಟದಲ್ಲಿ ದೊರೆತಿದ್ದು, ಸಂಪೂರ್ಣವಾಗಿ ಕತ್ತರಿಸಿದ ಮೃತದೇಹ ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ದಡದಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಕೆಲವರು ಈ ಸೂಟ್‌ಕೇಸ್‌ನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್‌ಕೇಸ್ ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯ ಮೃತದೇಹ ಇರುವುದು ಪತ್ತೆಯಾಗಿದೆ.

ಒಲ್ಲದ ಹೆಂಡ್ತಿಯನ್ನು ಭೀಕರವಾಗಿ ಕೊಂದು ಕಥೆ ಕಟ್ಟಿದ ಗಂಡ : ಕೊನೆಗೂ ಸಿಕ್ಕಿಬಿದ್ದ

ಮೃತ ವ್ಯಕ್ತಿಯ ದೇಹದ ಕೆಲವು ಭಾಗಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸೂಟ್‌ಕೇಸ್‌ನಲ್ಲಿ ಉಳಿದಿರುವ ದೇಹದ ಭಾಗಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಟ್ಟ ಸ್ಥಿತಿಯಲ್ಲಿ ಮತ್ತೋರ್ವ ಮಹಿಳೆ ಶವ ಪತ್ತೆ!

ವ್ಯಕ್ತಿಯನ್ನು ಕೊಲೆ ಮಾಡಿದ ಬಳಿಕ ದೇಹವನ್ನು ಕತ್ತರಿಸಿ ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿ ಸೂಟ್‌ಕೇಸ್‌ನ್ನು ಸಮುದ್ರ ದಡದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಚಪ್ಪಲಿಯ ಜಾಡು ಹಿಡಿದು ಕೊಲೆ ಪ್ರಕರಣ ಭೇದಿಸಿದ ಪೊಲೀಸರು! ಬೇಕು ಇಂಥ ಚಾಣಾಕ್ಷರು