ಲಕ್ನೋ(ಆ.11): ಸಂಕಷ್ಟಗಳ ಮಧ್ಯೆ 2018ರ ಪಿಯುಸಿ ಪರೀಕ್ಷೆಯಲ್ಲಿ 98% ಅಂಕ ಪಡೆದಿದ್ದ ಉತ್ತರ ಪ್ರದೇಶದ ಯುವತಿ ರಸ್ತೆ ಅಪಘಾತದಲ್ಲಿ ಮೃಪಟ್ಟಿದ್ದಾಳೆ. ಇಬ್ಬರು ಯುವಕರು ಬೈಕ್‌ನಲ್ಲಿ ಬೆನ್ನಟ್ಟಿ ಬಂದ ಸಂದರ್ಭ ಅಪಘಾತ ನಡೆದಿದೆ ಎನ್ನಲಾಗಿದೆ.

ತನ್ನ ಅಂಕಲ್ ಜೊತೆ ಹೋಗುತ್ತಿದ್ದ 20 ವರ್ಷದ ಯುವತಿಯನ್ನು ಇಬ್ಬರು ಯುವಕರು ತಮ್ಮ ಬೈಕ್‌ಗಳಲ್ಲಿ ಬೆನ್ನಟ್ಟಿದ ಪರಿಣಾಮ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ. ಸುಧೀಕ್ಷಾ ಭಾಟಿ ತನ್ನ ಅಂಕಲ್ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಪುಂಡರು ಬೆನ್ನಟ್ಟಿ ಬಂದಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SSLC ಯಲ್ಲಿ ಅನುತ್ತೀರ್ಣ: 3 ವಿದ್ಯಾರ್ಥಿನಿಯರು ಆತ್ಮಹತ್ಯೆ

2018ರ ಪಿಯುಸಿ ಪರೀಕ್ಷೆಯಲ್ಲಿ ಶೇಖಡ 98 ಅಂಕ ಗಳಿಸಿದ್ದ ಸುಧೀಕ್ಷಾ ಸ್ಕಾಲರ್‌ಶಿಪ್‌ನಲ್ಲಿ ಅಮೆರಿಕಕ್ಕೆ ಉನ್ನತ ಶಿಕ್ಷಣಕ್ಕೆ ಹೋಗಿದ್ದಳು. ಕೊರೋನಾ ಸಂಕಷ್ಟದಿಂದಾಗಿ ಜೂನ್‌ನಲ್ಲಿ ಆಕೆ ಅಮೆರಿಕದಿಂದ ಹಿಂದಿರುಗಿದ್ದಳು. ಸಿಬಿಎಸ್‌ಇ ಹ್ಯುಮ್ಯಾನಿಟೀಸ್ ವಿಭಾಗದಲ್ಲಿ ಟಾಪರ್ ಆಗಿದ್ದಾಕೆ ಮಸ್ಸಾಚುಸೆಟ್ಸ್‌ನ ಬಾಬ್ಸನ್ ಕಾಲೇಜಿನಲ್ಲಿ ಕಲಿಯುತ್ತಿದ್ದಳು.

ತನ್ನ ಶಾಲೆಯಿಂದ ಕೆಲವು ಶೈಕ್ಷಣಿಕ ದಾಖಲೆಗಳನ್ನು ತೆಗೆದುಕೊಳ್ಳಲು ಯುವತಿ ಸಿಕಂದರಾಬಾದ್‌ಗೆ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಬೈಕ್‌ನಲ್ಲಿದ್ದ ಇಬ್ಬರು ಯುವಕರು ಬೇಕಾಬಿಟ್ಟಿಯಾಗಿ ಬೈಕ್ ಓಡಿಸುತ್ತಾ ಯುವತಿ ಬಗ್ಗೆ ಕಮೆಂಟ್ ಮಾಡುತ್ತಿದ್ದರು ಎಂದು ಮೃತಳ ಸಂಬಂಧಿ ತಿಳಿಸಿದ್ದಾರೆ.

SSLC ಪರೀಕ್ಷೆಯ ಸಾಧಕರಿವರು; ಆಟೋ ಚಾಲಕನ ಮಗಳಿಗೆ 612 ಅಂಕ

ಬೈಕ್‌ನಲ್ಲಿ ಹಿಂಬಾಲಿಸಿದ ಯುವಕರು ಸ್ಟಂಟ್ ಮಾಡುತ್ತಾ, ರಾಶ್ ಆಗಿ ಡ್ರೈವ್ ಮಾಡುತ್ತಿದ್ದರು. ನಂತರ ಬೈಕ್ ಬಂದು ನಮ್ಮ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಯುವತಿಯ ಜೊತೆಗಿದ್ದ ಸಂಬಂಧಿ ತಿಳಿಸಿದ್ದಾರೆ.

ಸಂಕಷ್ಟದಲ್ಲಿ ಬೆಳೆದ ಸುಧೀಕ್ಷಾ ಉತ್ತರ ಪ್ರದೇಶದ ಪುಟ್ಟಹಳ್ಳಿಯಿಂದ ಅಮೆರಿಕದ ಟಾಪ್ ಯುನಿವರ್ಸಿಟಿ ತಲುಪಿದ್ದು ಸುಲಭದ ಜರ್ನಿಯಾಗಿರಲಿಲ್ಲ. ಯಾರು ಶಾಲೆಗೆ ಹೋಗದ ಹಳ್ಳಿಯಿಂದ ಬಂದು ಎರಡು ಸಬ್ಜೆಕ್ಟ್‌ಗಳಲ್ಲಿ 100 ಹಾಗೂ ಇನ್ನೊಂದರಲ್ಲಿ 99 ಅಂಕ ಪಡೆದಿದ್ದಳು.