Asianet Suvarna News Asianet Suvarna News

Swamy meets Didi: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಖಟ್ಟರ್ ಹಿಂದೂವಾದಿ?

* ಬಿಜೆಪಿಗೆ ಚುನಾವಣಾ ಹೊಸ್ತಿಲಲ್ಲಿ ಬಿಗ್ ಶಾಕ್

* ಮಮತಾ ಭೇಟಿಯಾದ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ

* ದೀದೀ ಭೇಟಿ ಬೆನ್ನಲ್ಲೇ ಬಿಜೆಪಿಗೆ ಗುಡ್‌ಬೈ ಹೇಳುವ ಸೂಚನೆ!

Subramanian Swamy meets Mamata Banerjee triggers speculations of him joining TMC pod
Author
Bangalore, First Published Nov 24, 2021, 6:38 PM IST

ನವದೆಹಲಿ(ನ.24): ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮದೇ ಸರ್ಕಾರದ ವಿರುದ್ಧ ಕಿಡಿ ಕಾರಿ ಸದ್ದು ಮಾಡುವ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ (Rajya Sabha MP and BJP leader Subramanian Swamy) ಅವರು ಬುಧವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯ ಚಿತ್ರವನ್ನು ತೃಣಮೂಲ ಕಾಂಗ್ರೆಸ್ (Trinamool Congress) ಬಿಡುಗಡೆ ಮಾಡಿದೆ. ಸಭೆಯ ನಂತರ ರಾಜಕೀಯ ವಲಯದಲ್ಲಿ ಭಾರೀ ಊಹಾಪೋಹಗಳು ಮನೆ ಮಾಡಿವೆ. ಉಭಯ ನಾಯಕರ ನಡುವೆ ಏನಾಯಿತು ಎಂಬ ಮಾಹಿತಿ ಬಹಿರಂಗವಾಗಿಲ್ಲವಾದರೂ ಸ್ವಾಮಿ ಬಿಜೆಪಿಗೆ (BJP) ರಾಜೀನಾಮೆ ನೀಡಿ, ಟಿಎಂಸಿ ಸೇರ್ಪಡೆಗೊಳ್ಳುತ್ತಾರೆಂಬ ಮಾತುಗಳು ಸದ್ದು ಮಾಡಿವೆ. ಇನ್ನು ಮಮತಾ ಬ್ಯಾನರ್ಜಿ ನಾಲ್ಕು ದಿನಗಳ ದೆಹಲಿ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಹಲವು ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

ಹೌದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎರಡು ದಿನಗಳ ದೆಹಲಿ ಪ್ರವಾಸದಲ್ಲಿದ್ದಾರೆ (Mamata Banerjree In Delhi). ಈ ವೇಳೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮಮತಾ ಬ್ಯಾನರ್ಜಿ ಅವರನ್ನು ಅವರ ಸೌತ್ ಅವೆನ್ಯೂ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಭೆಯ ನಂತರ ಹೊರಬಂದ ಬಿಜೆಪಿ ರಾಜ್ಯಸಭಾ ಸಂಸದ ಟಿಎಂಸಿ (TMC) ಸೇರುವ ಪ್ರಶ್ನೆಗೆ ಉತ್ತರಿಸಿ, ನಾವು ಎಲ್ಲಾ ಸಮಯದಲ್ಲೂ ಒಟ್ಟಿಗೆ ಇದ್ದೇವೆ ಎಂದಿದ್ದಾರೆ. ಹೀಗಿದ್ದರೂ ಅವರು ಸ್ಪಷ್ಟ ಉತ್ತರ ನೀಡಿಲ್ಲ. ಅದೇನೇ ಇದ್ದರೂ, ಮಮತಾ ಬ್ಯಾನರ್ಜಿಯೊಂದಿಗಿನ ಅವರ ಭೇಟಿಯಿಂದ ಅನೇಕ ವದಂತಿಗಳು ಹುಟ್ಟಿಕೊಂಡಿವೆ.

ತಮ್ಮ ಸರ್ಕಾರದ ಲೋಪ ದೋಷ ಎತ್ತಿ ಹಿಡಿಯುವ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ ವಿವಿಧ ವಿಷಯಗಳಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ದೇಶದ ಆರ್ಥಿಕ ಸ್ಥಿತಿಗೆ (Economic Condition) ಸಂಬಂಧಿಸಿದಂತೆ ಅವರು ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ ದಿನವೂ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಭಾರೀ ಮುಜುಗರ ಹಾಗೂ ಸಂಕಷ್ಟ ಎದುರಾಗಿದೆ.

ಇನ್ನು ಮಮತಾ ಬ್ಯಾನರ್ಜಿ ಮಂಗಳವಾರ, ಗೀತರಚನೆಕಾರ ಜಾವೇದ್ ಅಖ್ತರ್ (Javed Akhtar) ಮತ್ತು ರಾಜಕೀಯ ಕಾರ್ಯಕರ್ತ-ಅಂಕಣಕಾರ ಸುಧೀಂದ್ರ ಕುಲಕರ್ಣಿ ಅವರು ಮಮತಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಇದಾದ ನಂತರ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ (Kirti Azad), ಹರಿಯಾಣ ಕಾಂಗ್ರೆಸ್ (haryana Congress) ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ಮತ್ತು ಜೆಡಿಯು ಮಾಜಿ ನಾಯಕ ಪವನ್ ವರ್ಮಾ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಈ ವೇಳೆ ಮೂವರು ನಾಯಕರು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನೂ (Narendra Modi) ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ, ಮಮತಾ ಬ್ಯಾನರ್ಜಿ ಅವರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ತ್ರಿಪುರಾದಲ್ಲಿನ ಹಿಂಸಾಚಾರದ (Tripura Violence) ವ್ಯಾಪ್ತಿಯನ್ನು ಹೆಚ್ಚಿಸುವ ವಿಷಯವನ್ನು ಪ್ರಸ್ತಾಪಿಸಬಹುದು. ಈ ಮಾಹಿತಿಯನ್ನು ಸ್ವತಃ ಮಮತಾ ಬ್ಯಾನರ್ಜಿ ನವೆಂಬರ್ 22 ರಂದು ನೀಡಿದ್ದರು. ಇನ್ನು ನವೆಂಬರ್ 25ರವರೆಗೆ ದೆಹಲಿಯಲ್ಲಿರುವ ದೀದಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ಉನ್ನತ ನಾಯಕರಲ್ಲದೆ ವಿಪಕ್ಷಗಳ ಇತರ ನಾಯಕರನ್ನೂ ಭೇಟಿ ಮಾಡಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. 

Follow Us:
Download App:
  • android
  • ios