10, 12ನೇ ತರಗತಿಲಿ ರಾಂಕ್ ಗಳಿಸಿದ್ರೆ ಉಚಿತ ಹೆಲಿಕಾಪ್ಟರ್ ರೈಡ್ ಛತ್ತೀಸ್‌ಗಡ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ರಾಂಕ್ ಗಳಿಸಿ ಆಕಾಶದಲ್ಲಿ ತೇಲಾಡಿ
ರಾಯ್‌ಪುರ: ಕಷ್ಟಪಟ್ಟು ಓದಿ ಆಕಾಶದಲ್ಲಿ ಹಾರಾಡಿ, ಹೌದು ಛತ್ತಿಸ್‌ಗಡ (Chhattisgarh) ಸರ್ಕಾರವು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿದೆ. ಕಠಿಣ ಅಧ್ಯಯನ ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಪ್ರಯತ್ನದಲ್ಲಿ ಛತ್ತಿಸ್‌ಗಡ ಸರ್ಕಾರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪ್ (State Topper) ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲಿಕಾಪ್ಟರ್ ರೈಡ್ (Helicopter Ride) ಒದಗಿಸುವ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ (Bhupesh Baghel) ಗುರುವಾರ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್‌ಗಳಿಗೆ ಉಚಿತ ಹೆಲಿಕಾಪ್ಟರ್ ರೈಡ್ ಅನ್ನು ಘೋಷಿಸಿದ್ದಾರೆ. ಈ ಬಗ್ಗೆ ವಿವರ ನೀಡಿದ ಮುಖ್ಯಮಂತ್ರಿಗಳು, 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರಾಂಕ್ ಗಳಿಸಿದ ಟಾಪ್ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ರೈಡ್ ಮೂಲಕ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಜೈಲಿನಿಂದಲೇ ತಯಾರಿ: IIT ಪರೀಕ್ಷೆಯಲ್ಲಿ 54ನೇ Rank ಗಳಿಸಿದ ಕೊಲೆ ಆರೋಪಿ
ಬಲರಾಂಪುರ ಜಿಲ್ಲೆಯ ( Balrampur district) ರಾಜ್‌ಪುರದಲ್ಲಿ (Rajpur) ತಮ್ಮ ಕ್ಷೇತ್ರವಾರು ಸಾರ್ವಜನಿಕ ಸಂವಾದ ಅಭಿಯಾನದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಯೋಜನೆಯ ಘೋಷಣೆ ಮಾಡಿದರು. ಎಸ್‌ಎಸ್‌ಎಲ್‌ಸಿ (SSLC) ಹಾಗೂ ಪಿಯುಸಿ (PUC) ಎರಡೂ ಬೋರ್ಡ್ ಪರೀಕ್ಷೆಗಳಲ್ಲಿ ಜಿಲ್ಲಾವಾರು ಟಾಪರ್‌ಗಳಿಗೆ ರಾಜ್ಯ ಸರ್ಕಾರವು ಚಾಪರ್ ರೈಡ್‌ನೊಂದಿಗೆ ಬಹುಮಾನ ನೀಡಲಿದೆ ಎಂದು ಅವರು ಹೇಳಿದರು.
ಮಕ್ಕಳನ್ನು ಹುರಿದುಂಬಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಟಾಪರ್‌ಗಳು ಮುಖ್ಯಮಂತ್ರಿಗಳ ಟಾಪರ್ಸ್ ಚಾಪರ್ ರೈಡ್‌ನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಅವರು ಹೇಳಿದರು. ವಿಮಾನ ಪ್ರಯಾಣ (Flight Journey) ಪ್ರತಿಯೊಬ್ಬರ ಆಸೆ. ಹೆಲಿಕಾಪ್ಟರ್ ರೈಡ್ ಮಕ್ಕಳ ಮನಸ್ಸಿನಲ್ಲಿ ಜೀವನದ ಆಕಾಶದಲ್ಲಿ ಎತ್ತರಕ್ಕೆ ಹಾರುವ ಬಯಕೆಯನ್ನು ಹುಟ್ಟುಹಾಕುತ್ತದೆ ಮತ್ತು ಅವರು ತಮ್ಮ ಗುರಿಯನ್ನು ಸಾಧಿಸಲು ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಚುರುಕುಗೊಳಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಹೇಳಿದರು.
ಸಮ್ರಿ ವಿಧಾನಸಭಾ ಕ್ಷೇತ್ರದ (Samri Assembly constituency) ಮೂರು ಆತ್ಮಾನಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬುಧವಾರ ಭೇಟಿ ನೀಡಿದ ಸಿಎಂ ಬಾಘೆಲ್, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಗಳಿವೆ ಆದರೆ ಅವರಿಗೆ ಪ್ರೇರಣೆಯ ಅಗತ್ಯವಿದೆ ಎಂದು ಹೇಳಿದರು. ನಮ್ಮ ವಿದ್ಯಾರ್ಥಿಗಳು ಕೆಲವು ವಿಶಿಷ್ಟ ಪ್ರೇರಣೆಯನ್ನು (Inspiration) ಪಡೆದರೆ ಮತ್ತು ಅವರಿಗೆ ವಿಶಿಷ್ಟವಾದ ಪ್ರತಿಫಲವನ್ನು ನೀಡಿದರೆ ಅವರ ಯಶಸ್ಸಿನ ಬಯಕೆಯು ಹೆಚ್ಚಾಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದರು.
ಗ್ಯಾರೇಜ್ ನಡೆಸುವ ಮೆಕಾನಿಕ್ನ ಮಗಳು ಫಸ್ಟ್ ರ‍್ಯಾಂಕ್
ತಮ್ಮ ಸಂವಾದದ ಸಂದರ್ಭದಲ್ಲಿ, ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸುವುದನ್ನು ನೋಡಿದ ಮಕ್ಕಳ ಉತ್ಸಾಹ ಮತ್ತು ಕುತೂಹಲದ ಬಗ್ಗೆ ಸಿಎಂ ಮಾತನಾಡಿದರು ಮತ್ತು 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರ ಹತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಯ್‌ಪುರದಲ್ಲಿ ಚಾಪರ್ ರೈಡ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.ಈ ಯೋಜನೆಯ ಪ್ರಚಾರದ ಭಾಗವಾಗಿ ರಾಜ್ಯದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಪ್ರತಿ ಭಾಗದ ಕನಿಷ್ಠ ಮೂರು ಗ್ರಾಮಗಳಿಗೆ ದಿಢೀರ್ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದರು.
